ಅಪಘಾತದಲ್ಲಿ ಮಂಗ ಸಾವು:  ಬಣಕಲ್ ಯುವಕರಿಂದ ಅಂತ್ಯಕ್ರಿಯೆ - Mahanayaka
10:19 PM Tuesday 2 - December 2025

ಅಪಘಾತದಲ್ಲಿ ಮಂಗ ಸಾವು:  ಬಣಕಲ್ ಯುವಕರಿಂದ ಅಂತ್ಯಕ್ರಿಯೆ

monky
02/12/2025

ಕೊಟ್ಟಿಗೆಹಾರ: ಮೂಡಿಗೆರೆ ತಾಲ್ಲೂಕಿನ ಚಾರ್ಮಾಡಿ ಘಾಟಿಯಲ್ಲಿ ಅಪರಿಚಿತ ವಾಹನ ಡಿಕ್ಕಿ ಹೊಡೆದ ಪರಿಣಾಮ ಮಂಗವೊಂದು ಮೃತಪಟ್ಟಿದ್ದು, ಘಟನಾ ಸ್ಥಳದ ಪಕ್ಕದಲ್ಲಿದ್ದ ಇತರೆ ಮಂಗಗಳ ರೋದನ ತುಂಬು ಮನಸ್ಸಿಗೆ ತೀವ್ರ ನೋವುಂಟುಮಾಡಿತು. ಇದೇ ದಾರಿಯಲ್ಲಿ ಬರುತ್ತಿದ್ದ ಬಣಕಲ್‌ ನ ಪ್ರಾಣಿಪ್ರೀಮಿ ಯುವಕರು ಅರುಣ್ ಪೂಜಾರಿ ಹಾಗೂ ಅಜಿತ್ ಪೂಜಾರಿ ಮಾನವೀಯತೆ ಮೆರೆದಂತೆ ಮಂಗದ ಕಳೇಬರಕ್ಕೆ ಅಂತ್ಯಕ್ರಿಯೆ ನೆರವೇರಿಸಿ ಎಲ್ಲರ ಮೆಚ್ಚುಗೆ ಗಳಿಸಿದರು.

ಅಂತ್ಯಕ್ರಿಯೆ ನೆರವೇರಿಸಿದ ಅರುಣ್ ಪೂಜಾರಿ ಮಾತನಾಡಿ, “ಮೂಕ ಪ್ರಾಣಿಗಳ ಮೇಲೆ ಕರುಣೆ ತೋರಬೇಕಾಗಿದೆ. ರಸ್ತೆಗಳಲ್ಲಿ ವಾಹನ ಚಲಿಸುವವರು ಜಾಗ್ರತೆ ವಹಿಸಿ, ಪ್ರಾಣಿಗಳ ಮೇಲೆ ದಾಳಿಯಾಗದಂತೆ ಗಮನ ಕೊಡಬೇಕು. ಮಾತು ಬಾರದ ಜೀವಿಗಳಲ್ಲೂ ಭಾವನೆಗಳಿವೆ. ಅವು ಗಳಿಸುವ ನೋವನ್ನು ನಾವು ಕಾಣುವುದೇ ಮನ ಕಲಕುವಂಥದ್ದು. ಚಾರ್ಮಾಡಿ ಘಾಟಿಯಲ್ಲಿ ವಾಹನಗಳಿದ್ದರಿಂದ ಹಲವು ಪ್ರಾಣಿಗಳು ಪ್ರಾಣ ಕಳೆದುಕೊಳ್ಳುತ್ತಿವೆ. ವಾನರಗಳ ಸಂಖ್ಯೆಯೂ ಹೆಚ್ಚಿದ್ದು, ಅವುಗಳ ರಕ್ಷಣೆಯ ಜವಾಬ್ದಾರಿಯೂ ನಮ್ಮದೇ,” ಎಂದರು.

ಈ ಮಾನವೀಯ ಕಾರ್ಯವು ಸಮಾಜದಲ್ಲಿ ಪ್ರಾಣಿಗಳ ಮೇಲಿನ ಕರುಣೆ ಮತ್ತು ಹೊಣೆಗಾರಿಕೆ ಎಷ್ಟು ಮುಖ್ಯವೆಂಬುದನ್ನು ಮತ್ತೊಮ್ಮೆ ನೆನಪಿಸಿತು.

ಪ್ರವಾಸಿಗರಿಗೆ ವಿಶೇಷ ವಿನಂತಿ:

ಚಾರ್ಮಾಡಿ ಘಾಟಿ ಮಾರ್ಗದಲ್ಲಿ ಮಂಗಗಳಿಗೆ ಅಂಗಡಿ ತಿಂಡಿಗಳು-–ಅಹಾರ ನೀಡುವುದನ್ನು ತಪ್ಪಿಸಿ. ಮನರಂಜನೆಗಾಗಿ ಆಹಾರ ನೀಡುವುದರಿಂದ ಅವು ಮಾನವರ ಮೇಲೆ ಅವಲಂಬಿತರಾಗಿ ನಂತರ ರಸ್ತೆ ತಲುಪುವ, ವಾಹನ ಡಿಕ್ಕಿ ಸಂಭವಿಸುವ ಅಪಾಯ ಹೆಚ್ಚುತ್ತದೆ. ಅವುಗಳ ಸುರಕ್ಷತೆಗಾಗಿ ದಯವಿಟ್ಟು ಆಹಾರ ನೀಡುವುದು ನಿಲ್ಲಿಸಿ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ