ಗಾಝಾದಲ್ಲಿ ಇಸ್ರೇಲ್ ಭೀಕರ ದಾಳಿ: 50,000 ಮಂದಿ ಸಾವು - Mahanayaka

ಗಾಝಾದಲ್ಲಿ ಇಸ್ರೇಲ್ ಭೀಕರ ದಾಳಿ: 50,000 ಮಂದಿ ಸಾವು

24/03/2025

ಇಸ್ರೇಲ್‌ ನಡೆಸುತ್ತಿರುವ ಕಾರ್ಯಾಚರಣೆ­ಯಲ್ಲಿ 50,000 ಮಂದಿ ಅಸುನೀಗಿದ್ದಾರೆ. 1.13 ಲಕ್ಷಕ್ಕೂ ಅಧಿಕ ಮಂದಿ ಗಾಯಗೊಂಡಿದ್ದಾರೆ ಎಂದು ಗಾಝಾ ಪಟ್ಟಿಯ ಸ್ಥಳೀಯ ಸರಕಾರ ಆರೋಪಿಸಿದೆ. 2023ರ ಅಕ್ಟೋಬರ್‌ನಿಂದ ದಾಳಿ ಮುಂದುವರಿದಿದೆ.

ಶನಿವಾರ ಮತ್ತು ರವಿವಾರದ ಅವಧಿಯಲ್ಲಿ ಗಾಜಾ ಪಟ್ಟಿಯ ದಕ್ಷಿಣ ಭಾಗದ ಮೇಲೆ ಇಸ್ರೇಲ್‌ ನಡೆಸಿದ ದಾಳಿಯಲ್ಲಿ ಮಹಿಳೆಯರು, ಮಕ್ಕಳು ಸೇರಿದಂತೆ ಕನಿಷ್ಠ 26 ಮಂದಿ ಮೃತಪಟ್ಟಿ­ದ್ದಾರೆ.

ಮೃತರಲ್ಲಿ ಹಮಾಸ್‌ ರಾಜಕೀಯ ನಾಯಕ, ಸಲಾಹ್‌ ಬಾರ್ಡವಿಲ್‌ ಕೂಡ ಸೇರಿದ್ದು, ಖಾನ್‌ ಯೂನಿಸ್‌ ಬಳಿ ನಡೆದ ದಾಳಿಯಲ್ಲಿ ಪತ್ನಿ ಸಮೇತ ಮೃತಪಟ್ಟಿದ್ದಾರೆ ಎಂದು ಹಮಾಸ್‌ ಸಂಘಟನೆ ಹೇಳಿದೆ. ಇತ್ತೀಚಿನ ಕದನ ವಿರಾಮ ಮುಕ್ತಾಯದ ಬಳಿಕವೇ 673 ಫೆಲೆಸ್ತೀನಿಯರು ಮೃತಪಟ್ಟಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ