ತಾಯಿ ಮತ್ತು ಮೂರು ಮಕ್ಕಳ ಹತ್ಯೆ ಪ್ರಕರಣ: ಮನೆ ಯಜಮಾನಗೆ ಕರೆ ಮಾಡಿದ ಪರಮೇಶ್ವರ್ - Mahanayaka
11:17 PM Wednesday 27 - August 2025

ತಾಯಿ ಮತ್ತು ಮೂರು ಮಕ್ಕಳ ಹತ್ಯೆ ಪ್ರಕರಣ: ಮನೆ ಯಜಮಾನಗೆ ಕರೆ ಮಾಡಿದ ಪರಮೇಶ್ವರ್

udupi
14/11/2023


Provided by

ಉಡುಪಿ: ನೇಜಾರು ತಾಯಿ ಮತ್ತು ಮೂರು ಮಕ್ಕಳ ಹತ್ಯೆ ಪ್ರಕರಣದ ಆರೋಪಿಯನ್ನು ಸದ್ಯವೇ ಬಂಧಿಸಲಾಗುವುದು ಎಂದು ರಾಜ್ಯ ಗೃಹ ಸಚಿವ ಡಾ.ಜಿ.ಪರಮೇಶ್ವರ್ ದೂರವಾಣಿ ಮೂಲಕ ಮನೆ ಯಜಮಾನ ನೂರ್ ಮುಹಮ್ಮದ್ ಅವರಿಗೆ ಭರವಸೆ ನೀಡಿದ್ದಾರೆ.

ಮನೆಗೆ ಭೇಟಿ ನೀಡಿದ ವಿಧಾನ ಪರಿಷತ್ ಸದಸ್ಯ ಮಂಜುನಾಥ್ ಭಂಡಾರಿ, ಗೃಹ ಸಚಿವರಿಗೆ ಕರೆ ಮಾಡಿ ಮನೆ ಯಜಮಾನ ನೂರ್ ಮುಹಮ್ಮದ್ ಅವರೊಂದಿಗೆ ಮಾತನಾಡಿಸಿದರು.

‘ಈ ಪ್ರಕರಣವನ್ನು ಅತೀ ಶೀಘ್ರವಾಗಿ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಬೇಕು ಎಂದು ನೂರ್ ಮುಹಮ್ಮದ್ ಗೃಹ ಸಚಿವರಲ್ಲಿ ಮನವಿ ಮಾಡಿದರು.

ಈ ಕೃತ್ಯದಿಂದ ನಮ್ಮ ಸುತ್ತಮುತ್ತಲಿನ ಊರಿನ ಜನರಲ್ಲಿ ಭಯದ ವಾತಾವರಣ ಸೃಷ್ಠಿಯಾಗಿದೆ.  ಆದುದರಿಂದ ಆದಷ್ಟು ಬೇಗ ನಮಗೆ ನ್ಯಾಯ ಒದಗಿಸಬೇಕು ಎಂದು ಅವರು ಹೇಳಿದರು.

ಇದಕ್ಕೆ ಉತ್ತರಿಸಿದ ಸಚಿವರು, ನಾವು ಈಗಾಗಲೇ ತನಿಖೆ ಪ್ರಾರಂಭಿಸಿದ್ದೇವೆ. ಈ ಸಂಬಂಧ ಕೂಡಲೇ ಕ್ರಮ ತೆಗೆದುಕೊಳ್ಳುತ್ತೇವೆ. ಇವತ್ತು ಇಲ್ಲ ನಾಳೆ ಒಳಗೆ ನಾವು ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಭರವಸೆ ನೀಡಿದರು.

ಇತ್ತೀಚಿನ ಸುದ್ದಿ