ಅನಾರೋಗ್ಯ ಪೀಡಿತ ಮಗುವಿಗೆ ಅಗರಬತ್ತಿಯಿಂದ ಸುಟ್ಟ ತಾಯಿ:  ಮಗು ಸಾವು - Mahanayaka
10:06 AM Thursday 21 - August 2025

ಅನಾರೋಗ್ಯ ಪೀಡಿತ ಮಗುವಿಗೆ ಅಗರಬತ್ತಿಯಿಂದ ಸುಟ್ಟ ತಾಯಿ:  ಮಗು ಸಾವು

agarabatti
09/03/2025


Provided by

ಕೊಪ್ಪಳ:  ತಾಯಿಯ ಮೂಢನಂಬಿಕೆಗೆ ಅನಾರೋಗ್ಯ ಪೀಡಿದ ಮಗುವೊಂದು ಬಲಿಯಾದ ಘಟನೆ ಕೊಪ್ಪಳ ಜಿಲ್ಲೆಯ ಹಳ್ಳಿಯೊಂದರಲ್ಲಿ ನಡೆದಿದೆ.

2024ರ ನವೆಂಬರ್‌ ನಲ್ಲಿ ಏಳು ತಿಂಗಳ ಮಗುವಿಗೆ ಅನಾರೋಗ್ಯ ಕಾಡಿತ್ತು. ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಾಗಿತ್ತು. ಆದರೆ, ಕಾಯಿಲೆ ವಾಸಿಯಾಗಿರಲಿಲ್ಲ. ಹೀಗಿರುವಾಗ, ಅಗರಬತ್ತಿಯಿಂದ ಸುಟ್ಟರೆ, ಕಾಯಿಲೆ ವಾಸಿಯಾಗುತ್ತದೆ ಎಂದು ಯಾರೋ ಹೇಳಿದ ಮಾತನ್ನು ನಂಬಿ, ತಾಯಿಯೊಬ್ಬಳು ಮಗುವಿಗೆ ಅಗರ ಬತ್ತಿಯಿಂದ ಸುಟ್ಟಿದ್ದಾಳೆ.

ಮಗುವಿಗೆ ಅಗರ ಬತ್ತಿಯಿಂದ ಸುಟ್ಟ ಪರಿಣಾಮ ನಂಜಾಗಿ  ಮಗು ಸಾವನ್ನಪ್ಪಿದೆ. ಘಟನೆಗೆ ಸಂಬಂಧಿಸಿದಂತೆ ಮಗುವಿಗೆ ಚಿಕಿತ್ಸೆ ನೀಡಿರುವ ವೈದ್ಯರು ಮಗುವಿನ ಮೇಲಾಗಿರುವ ಸುಟ್ಟ ಗಾಯಗಳನ್ನು ಕಂಡು ಮಕ್ಕಳ ರಕ್ಷಣಾ ಘಟಕದವರಿಗೆ ಮಾಹಿತಿ ನೀಡಿದ್ದಾರೆ.  ಸದ್ಯ ಮಗುವಿನ ತಾಯಿ ವಿರುದ್ಧ ಎಫ್ ಐಆರ್ ದಾಖಲಿಸಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BR3b3qhWZWaCzpD1m6N5uu

ಇತ್ತೀಚಿನ ಸುದ್ದಿ