ದೀಪಾವಳಿ ರಜೆ ಅಂತ ತಿರುಗಾಡದೆ, ಓದು ಎಂದ ತಾಯಿ: ಮಗ ಸಾವಿಗೆ ಶರಣು! - Mahanayaka

ದೀಪಾವಳಿ ರಜೆ ಅಂತ ತಿರುಗಾಡದೆ, ಓದು ಎಂದ ತಾಯಿ: ಮಗ ಸಾವಿಗೆ ಶರಣು!

belagavi
14/11/2023


Provided by

ಬೆಳಗಾವಿ: ದೀಪಾವಳಿ ರಜೆ ಅಂತ ತಿರುಗಾಡದೆ, ಓದು  ಎಂದು ತಾಯಿ ಬುದ್ಧಿ ಹೇಳಿದ್ದರಿಂದ ನೊಂದು 14 ವರ್ಷ ವಯಸ್ಸಿನ ಬಾಲಕನೋರ್ವ ಸಾವಿಗೆ ಶರಣಾದ ಘಟನೆ ಬೆಳಗಾವಿ ಜಿಲ್ಲೆಯ ಮೂಡಲಗಿ ಪಟ್ಟಣದ ದೇಶಪಾಂಡೆ ಪ್ಲ್ಯಾಟ್ ನಲ್ಲಿ ನಡೆದಿದೆ.

ಸಮರ್ಥ ಸುರೇಶ ಭಜಂತ್ರಿ(14) ಮೃತಪಟ್ಟ ಬಾಲಕನಾಗಿದ್ದಾನೆ. ದೀಪಾವಳಿ ಹಿನ್ನೆಲೆ ರಜೆ ಇದ್ದುದರಿಂದ ರಜೆಯಲ್ಲಿ ತಿರುಗಾಡ ಬೇಡ, ಓದು ಎಂದು ತಾಯಿ ಬುದ್ಧಿ ಹೇಳಿದ್ದು, ಇದರಿಂದ ನೊಂದ ಬಾಲಕ ಬೆಡ್ ರೂಮ್ ನಲ್ಲಿ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದಾನೆ.

ಮೂಡಲಗಿ ಪಟ್ಟಣದ ಖಾಸಗಿ ಶಾಲೆಯಲಿ ಸಮರ್ಥ್ 8ನೇ ತರಗತಿ ಓದುತ್ತಿದ್ದ. ಘಟನೆ ಸಂಬಂಧ ಬೆಳಗಾವಿಯ ಮೂಡಲಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಇತ್ತೀಚಿನ ಸುದ್ದಿ