ಹೆತ್ತ ತಾಯಿಯನ್ನೇ ಅತ್ಯಾಚಾರಗೈದು ಬರ್ಬರ ಹತ್ಯೆ!
ಮಂಗಳೂರು: ಹೆತ್ತ ತಾಯಿಯನ್ನೇ ಅತ್ಯಾಚಾರಗೈದು ಕೊಂದ ವಿಕೃತಕಾಮಿ ಆರೋಪಿ ಮಗನನ್ನು ಬಜಪೆ ಪೊಲೀಸರು ಬಂಧಿಸಿದ್ದಾರೆ.
ಕಟೀಲು ಸಮೀಪದ ಕೊಂಡೆಮೂಲ ನಿವಾಸಿ ರತ್ನ (56) ಎಂಬವರನ್ನು ಅವರ ಸ್ವಂತ ಮಗ ರವಿರಾಜ್ ಶೆಟ್ಟಿ (33) ಎಂಬಾತ ಅ.26 ಗುರುವಾರ ರಾತ್ರಿ ಕೊಲೆಗೈದು ಮನೆಗೆ ಬೀಗ ಹಾಕಿ ಕಿನ್ನಿಗೋಳಿಯ ವಸತಿಗೃಹದಲ್ಲಿ ಉಳಿದುಕೊಂಡಿದ್ದ.ಈತನನ್ನು ಬಂಧಿಸಿ ವಿಚಾರಣೆ ನಡೆಸಿದಾಗ ತಾಯಿಯನ್ನು ಕೊಂದಿರುವುದು ತಾನೇ ಎಂದು ಒಪ್ಪಿಕೊಂಡಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ರತ್ನ ಅವರ ಪತಿ ದಯಾನಂದ ಶೆಟ್ಟಿ ಅವರು 7 ವರ್ಷದ ಹಿಂದೆ ಮೃತಪಟ್ಟಿದ್ದು, ಬಳಿಕ ತಾಯಿ ಮಗ ಇಬ್ಬರೇ ಕೊಂಡೆಮೂಲದ ಮನೆಯಲ್ಲಿ ವಾಸವಾಗಿದ್ದರು. ಅರೋಪಿಯು ಗಾಂಜಾ ವ್ಯಸನಿಯಾಗಿದ್ದ ಎನ್ನಲಾಗಿದ್ದು, ಗಾಂಜಾ ಅಮಲಿನಲ್ಲಿ ಅತ್ಯಾಚಾರ ಎಸಗಿರಬಹುದೆಂದು ಶಂಕಿಸಲಾಗಿದೆ.
ಮುಖಕ್ಕೆ ಬಟ್ಟೆ ಕಟ್ಟಿ, ಕೈಕಾಲುಗಳಿಗೆ ನೈಲಾನ್ ಹಗ್ಗದಿಂದ ಬಿಗಿದು ಕಟ್ಟಿ ಅತ್ಯಾಚಾರವೆಸಗಿ ಕೊಲೆಗೈದಿರುವುದು ವಿಚಾರಣೆಯ ವೇಳೆ ದೃಢಪಟ್ಟಿದೆ. ಆರೋಪಿ ರವಿರಾಜ್ ಶೆಟ್ಟಿಯನ್ನು ವೈದ್ಯಕೀಯ ತಪಾಸಣೆಗೊಳಪಡಿಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ಡ್ರಗ್ಸ್ , ಗಾಂಜಾ ಸೇವನೆ ಹಾಗೂ ಅತ್ಯಾಚಾರ ಎಸಗಿರುವ ಬಗ್ಗೆ ವೈದ್ಯಕೀಯ ವರದಿ ಬಳಿಕವೇ ದೃಢಪಡಿಸಬಹುದು ಎಂದು ಪೊಲೀಸ್ ಮೂಲಗಳು ತಿಳಿಸಿವೆ.




























