“ಬಡ ಮಕ್ಕಳ ಮೊಟ್ಟೆ ತಿಂದ ಜೊಲ್ಲೆಗೆ ಝೀರೋ ಟ್ರಾಫಿಕ್ ರಾಜಮರ್ಯಾದೆ!” - Mahanayaka
10:09 AM Wednesday 15 - October 2025

“ಬಡ ಮಕ್ಕಳ ಮೊಟ್ಟೆ ತಿಂದ ಜೊಲ್ಲೆಗೆ ಝೀರೋ ಟ್ರಾಫಿಕ್ ರಾಜಮರ್ಯಾದೆ!”

shashikala jolle
05/08/2021

ಬೆಂಗಳೂರು: ಬಡ ಮಕ್ಕಳ ಮೊಟ್ಟೆ ತಿಂದ ಶಶಿಕಲಾ ಜೊಲ್ಲೆಗೆ ಝೀರೋ ಟ್ರಾಫಿಕ್ ರಾಜಮರ್ಯಾದೆ ಎಂದು ಭ್ರಷ್ಟಾಚಾರದ ಆರೋಪ ಹೊತ್ತ  ಶಶಿಕಲಾ ಜೊಲ್ಲೆ ವಿರುದ್ಧ ಕಾಂಗ್ರೆಸ್ ಕಿಡಿಕಾರಿದೆ.


Provided by

ಮೊಟ್ಟೆ ಖರೀದಿ ಹಗರಣ ನಡೆಸಿದ ಶಿಶಿಕಲಾ ಜೊಲ್ಲೆಯವರನ್ನು ಝೀರೋ ಟ್ರಾಫಿಕ್ ರಾಜ ಮರ್ಯಾದೆಯಲ್ಲಿ ಕರೆತಂದು ದವಳಗಿರಿ ಸರ್ಕಾರದಲ್ಲಿ ಮಂತ್ರಿ ಗಿರಿ ಕೊಡುವ ಮೂಲಕ ಬಿಜೆಪಿಯು ಭ್ರಷ್ಟಾಚಾರ ತಮ್ಮ ಮನೆದೇವರು ಎನ್ನುವುದನ್ನು ಸಾರಿ ಹೇಳುತ್ತಿದೆ ಎಂದು ಕಾಂಗ್ರೆಸ್ ತನ್ನ ಟ್ವೀಟ್ ನಲ್ಲಿ ತರಾಟೆಗೆತ್ತಿಕೊಂಡಿದೆ.

ಬಡಮಕ್ಕಳ ಮೊಟ್ಟೆ ತಿಂದಿದ್ದನ್ನು ತನಿಖೆ ನಡೆಸದೇ ಸಿಎಂ ಸಮರ್ಥಿಸಿಕೊಳ್ಳುತ್ತಿರುವುದು ನೈತಿಕತೆಯ ಅಧಃಪತನ ಎಂದು ಕಾಂಗ್ರೆಸ್ ಹೇಳಿದೆ. ಇದರ ಜೊತೆಗೆ,  ಯಡಿಯೂರಪ್ಪನವರು ತಮ್ಮ ಕಣ್ಣೀರಿಗೆ ತಕ್ಕ ಪ್ರತಿಕಾರ ತೀರಿಸಿಕೊಳ್ಳುತ್ತಿದ್ದಾರೆ. ತಮ್ಮ ವಿರುದ್ಧದ ಬಂಡಾಯಗಾರರನ್ನು ಸಂಪುಟದಿಂದ ಹೊರಗಿಡುವ ಮೂಲಕ ಮೀರ್ ಸಾದಿಕ್ ನಳಿನ್ ಕುಮಾರ್ ಕಟೀಲ್ ಹಾಗೂ ತಂಡಕ್ಕೆ ಮರ್ಮಾಘಾತ ನೀಡಿದೆ. ಕಟೀಲ್ ಕಾಮಿಡಿ ಮಾಡಲು ಮಾತ್ರ ಎಂದು ಕಾಂಗ್ರೆಸ್ ಹೇಳಿದೆ. ರಾಜ್ಯದಲ್ಲಿ ಸಿಎಂ ಆಯ್ಕೆಯಿಂದ ಸಚಿವರ ಆಯ್ಕೆ ವರೆಗೆ ಬಿಎಸ್ ವೈ ಅವರೇ ಹೈಕಮಾಂಡ್ ಆಗಿದ್ದಾರೆ ಎಂದು ಕಾಂಗ್ರೆಸ್ ತರಾಟೆಗೆತ್ತಿಕೊಂಡಿದೆ.

ಇನ್ನಷ್ಟು  ಸುದ್ದಿಗಳು…

ತನ್ನ ವಿರುದ್ಧದ ವರದಿ ಪ್ರಕಟಿಸದಂತೆ ನ್ಯೂಸ್ ಫಸ್ಟ್ ಗೆ  ತಡೆಯಾಜ್ಞೆ ತಂದ ಸಚಿವೆ ಜೊಲ್ಲೆ

ಪ್ರೀತಿಗೆ ದ್ರೋಹ ಬಗೆದ ಪತ್ನಿ, ಸ್ನೇಹಕ್ಕೆ ದ್ರೋಹ ಬಗೆದ ಸ್ನೇಹಿತ | ತಂದೆಯ ಹತ್ಯೆಯಿಂದ ಅನಾಥಳಾದ ಮಗಳು!

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ನಿವಾಸದ ಮೇಲೆ ಐಟಿ ಅಧಿಕಾರಿಗಳಿಂದ ದಾಳಿ

ಸ್ಮಶಾನದ ಅರ್ಚಕ ಸೇರಿದಂತೆ ಮೂವರಿಂದ ದಲಿತ ಬಾಲಕಿಯ ಮೇಲೆ ಅತ್ಯಾಚಾರ, ಹತ್ಯೆ | ದೇಶಾದ್ಯಂತ ಆಕ್ರೋಶ

ಇತ್ತೀಚಿನ ಸುದ್ದಿ