ಸ್ವಾಭಿಮಾನದ ಬಗ್ಗೆ ಮತ್ತೆ ಮಾತನಾಡಿದ ಸಂಸದೆ ಸುಮಲತಾ: ರಕ್ತದಲ್ಲೇ ಬರೆದುಕೊಡಬೇಕಾ ಅಂತ ಕೇಳಿದ್ರು!

ಮಂಡ್ಯ: ಸ್ವಾಭಿಮಾನದ ಹೆಸರಿನಲ್ಲಿ ಕಳೆದ ಲೋಕಸಭಾ ಚುನಾವಣೆಯಲ್ಲಿ ರಾಷ್ಟ್ರೀಯ ಪಕ್ಷಗಳು ಹಾಗೂ ಜೆಡಿಎಸ್ ಗೆ ಸೋಲಿನ ರುಚಿ ತೋರಿಸಿದ್ದ ಮಂಡ್ಯದ ಸೊಸೆ ಎಂದೇ ಕರೆಸಿಕೊಳ್ಳುತ್ತಿರುವ ಸಂಸದೆ ಸುಮಲತಾ ಅವರು, ಈ ಬಾರಿ ಮತ್ತೆ ಚುನಾವಣೆಗೆ ಸ್ಪರ್ಧಿಸಲು ಮುಂದಾಗಿದ್ದಾರೆ. ಕಳೆದ ಬಾರಿಯಂತೆಯೇ ಈ ಬಾರಿಯೂ ಸ್ವಾಭಿಮಾನವನ್ನೇ ಮುಂದಿಟ್ಟು ಚುನಾವಣೆ ಗೆಲ್ಲಲು ಸಿದ್ಧತೆ ನಡೆಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಸಂಸದೆ ಸುಮಲತಾ, ನಾನು ಮಂಡ್ಯದ ಸೊಸೆ, ಯಾವತ್ತೂ ಮಂಡ್ಯವನ್ನ ಬಿಡುವುದಿಲ್ಲ. ರಾಜಕಾರಣ ಬಿಟ್ಟರೂ ಸ್ವಾಭಿಮಾನ ಹಾಗೂ ಸಿದ್ಧಾಂತವನ್ನು ಬಿಡುವುದಿಲ್ಲ. ಇದನ್ನು ರಕ್ತದಲ್ಲಿ ಬರೆದುಕೊಡಬೇಕಾ? ಎಂದು ಪ್ರಶ್ನಿಸಿದ್ದಾರೆ.
ಮಂಡ್ಯದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಅಂಬರೀಶ್ ಕುಟುಂಬಕ್ಕೆ ಮಂಡ್ಯದ ಜನರು ಸಾಕಷ್ಟು ಪ್ರೀತಿಕೊಟ್ಟು, ಹರಿಸಿದ್ದಾರೆ. ಮಂಡ್ಯ ಬಿಟ್ಟು ನಾನು ಬೇರೆಲ್ಲೂ ಹೋಗುವುದಿಲ್ಲ, ಜೆಡಿಎಸ್ –ಬಿಜೆಪಿ ಮೈತ್ರಿ ಆಗಿದೆ. ಆದ್ರೆ ಕ್ಷೇತ್ರ ಹಂಚಿಕೆ ಇನ್ನೂ ಆಗಿಲ್ಲ. ಈಗ ಕೇಳಿ ಬಂದಿರುವ ಊಹಾ ಪೋಹಗಳಿಗೆ ನಾನು ಪ್ರತಿಕ್ರಿಯಿಸಲ್ಲ ಎಂದು ಅವರು ಹೇಳಿದರಲ್ಲದೇ, ಯಾವುದೇ ದುಡುಕಿನ ನಿರ್ಧಾರ ಕೈಗೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.