ಮಿಸೆಸ್ ಇಂಡಿಯಾ ಮಂಗಳೂರು: ಮುಂದಿನ ಹಂತಕ್ಕೆ ಅರ್ಹತೆ ಪಡೆದ ಸೌಮ್ಯಲತಾ, ಸವಿತಾ ಚೇತನ್ ಕುಮಾರ್, ಬಬಿತಾ ನರೇಶ್

ಮಿಸೆಸ್ ಇಂಡಿಯಾ ಮಂಗಳೂರು ನಾಲ್ಕನೇ ಆವೃತ್ತಿಯ ಸ್ಪರ್ಧೆ ಮುಗಿದಿದೆ. ಮಿಸೆಸ್ ಇಂಡಿಯಾ ವಿಭಾಗದಲ್ಲಿ ಸೌಮ್ಯಲತಾ, ಸವಿತಾ ಚೇತನ್ ಕುಮಾರ್, ಬಬಿತಾ ನರೇಶ್ ಕಿರೀಟ ಮುಡಿಗೇರಿಸಿಕೊಂಡು ಮುಂದಿನ ಹಂತಕ್ಕೆ ಅರ್ಹತೆ ಪಡೆದಿದ್ದಾರೆ ಎಂದು ಮಿಸೆಸ್ ಇಂಡಿಯಾ ಕರ್ನಾಟಕ ಮಂಗಳೂರು ಇದರ ದಕ್ಷಿಣ ಕನ್ನಡ ಜಿಲ್ಲಾ ನಿರ್ದೇಶಕ ದೀಪಕ್ ಗಂಗೊಳ್ಳಿ ತಿಳಿಸಿದರು.
ಅವ್ರು ಮಂಗಳೂರು ನಗರದ ಪ್ರೆಸ್ ಕ್ಲಬ್ ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಈ ಕುರಿತು ಮಾಹಿತಿ ನೀಡಿದರು.
ಪಾತ್ ವೇ ಎಂಟರ್ಪ್ರೈಸಸ್, ಮರ್ಸಿ ಬ್ಯೂಟಿ ಅಕಾಡೆಮಿ ಹಾಗೂ ಲೇಡಿಸ್ ಸಲೂನ್ ಹಾಗೂ ಸಾನ್ಶಿಮಠ್ ಇನಿಶಿಯೇಟಿವ್ ಸಹಯೋಗದಲ್ಲಿ ಇತ್ತೀಚೆಗೆ ನಗರದ ರೋಶನಿ ನಿಲಯದ ಆಡಿಟೋರಿಯಂನಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು ಎಂದರು.
ಮಿಸೆಸ್ ಇಂಡಿಯಾ ಕ್ಲಾಸಿಕ್ ವಿಭಾಗದಲ್ಲಿ ಗೀತಾ ಶೆಟ್ಟಿ, ಶ್ರುತಿ ಸಿಂಗ್ ಹಾಗೂ ಶಾರ್ಲೆಟ್ ಪೆರಾವೊ, ಸೂಪರ್ ಕ್ಲಾಸಿಕ್ ವಿಭಾಗದಲ್ಲಿ ಜೆಸ್ಸಿ ಮರಿಯಾ ಡಿಸೋಜ, ಸುನೀತಾ ಖಾನಾಪುರೆ, ಮೊಲ್ಲಿ ಆಸ್ಸಿಸ್ಸಿ ವಾಝ್ ಆಯ್ಕೆಯಾಗಿದ್ದಾರೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮರ್ಸಿ ವೀಣಾ ಡಿಸೋಜ, ಸವಿತಾ ಚೇತನ್ ಕುಮಾರ್, ಬಬಿತಾ ನರೇಶ್, ಸೌಮ್ಯಲತಾ ಇದ್ದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/D73015iu7jn2glm2MECosd
ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w
ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw