ಬ್ಲಾಕ್ ಫಂಗಸ್ ಗಾಳಿಯಿಂದಲೂ ಹರಡುತ್ತದೆ | ಏಮ್ಸ್ ವೈದ್ಯರ ಶಾಕಿಂಗ್ ಹೇಳಿಕೆ - Mahanayaka
9:58 AM Wednesday 17 - September 2025

ಬ್ಲಾಕ್ ಫಂಗಸ್ ಗಾಳಿಯಿಂದಲೂ ಹರಡುತ್ತದೆ | ಏಮ್ಸ್ ವೈದ್ಯರ ಶಾಕಿಂಗ್ ಹೇಳಿಕೆ

dr nikhil tandon
22/05/2021

ನವದೆಹಲಿ: ಕೊರೊನಾ ಪಾಸಿಟಿವ್ ಬಂದು ಹೋದ ಬಳಿಕ ಇದೀಗ ಮ್ಯೂಕರ್ ಮೈಕ್ರೋಸಿಸ್ ಅಥವಾ ಬ್ಲ್ಯಾಕ್ ಫಂಗಸ್ ಕಾಯಿಲೆ ಜನರನ್ನು ಕಂಗೆಡಿಸಿದೆ. ಈ ರೋಗದ ಬಗ್ಗೆ ಇದೀಗ ಏಮ್ಸ್ ಆಸ್ಪತ್ರೆಯ ವೈದ್ಯರೊಬ್ಬರು ನೀಡಿರುವ ಹೇಳಿಕೆ ಜನರನ್ನು ಮತ್ತಷ್ಟು ಆತಂಕಕ್ಕೆ ದೂಡಿದೆ.


Provided by

ಬ್ಲಾಕ್ ಫಂಗಸ್ ಗಾಳಿಯ ಮೂಲಕವೂ ಹರಡುತ್ತದೆ ಎಂದು  ಏಮ್ಸ್ ಆಸ್ಪತ್ರೆಯ ಪ್ರೊಫೆಸರ್ ಡಾ.ನಿಖಿಲ್ ಟಂಡನ್ ಹೇಳಿಕೆ ನೀಡಿದ್ದಾರೆ. ಆದರೆ ಆರೋಗ್ಯ ವಂತರ ದೇಹಕ್ಕೆ ಈ ಬ್ಲಾಕ್ ಫಂಗಸ್ ಹೊಕ್ಕಿದರೂ ಅದು ಯಾವುದೇ ತೊಂದರೆ ಮಾಡುವುದಿಲ್ಲ ಎಂದು ಅವರು ಹೇಳಿದ್ದಾರೆ.

ಬ್ಲಾಕ್ ಫಂಗಸ್ ಅಥವಾ ಕಪ್ಪು ಶಿಲೀಂದ್ರ ಶ್ವಾಸಕೋಶಕ್ಕೆ ಪ್ರವೇಶಿಸಬಹುದು. ಆದರೆ ಅದರ ಸಾಧ್ಯತೆಗಳು ಬಹಳ ಕಡಿಮೆ ಇದೆ.  ಮನುಷ್ಯನ ದೇಹದಲ್ಲಿ ರೋಗ ನಿರೋಧಕ ಶಕ್ತಿ ಉತ್ತಮವಾಗಿದ್ದರೆ, ಅಂತವರಿಗೆ ಯಾವುದೇ ತೊಂದರೆಯಾಗುವುದಿಲ್ಲ. ಅಂತಹವರ ದೇಹವು ಬ್ಲಾಕ್ ಫಂಗಸ್ ವಿರುದ್ಧ ಹೋರಾಡಲು ಸಮರ್ಥವಾಗಿರುತ್ತದೆ ಎಂದು ಏಮ್ಸ್‌ನ ಡೋಕ್ರೈನಾಲಜಿ ಮತ್ತು ಮೆಟಾಬಾಲಿಸಮ್ ವಿಭಾಗದ ಪ್ರೊಫೆಸರ್ ಡಾ. ನಿಖಿಲ್ ಟಂಡನ್ ತಿಳಿಸಿದ್ದಾರೆ.

ಇತ್ತೀಚಿನ ಸುದ್ದಿ