ಸಿಎಂ ಮುಖ್ಯಮಂತ್ರಿ ರೇಸ್ ನಲ್ಲಿದ್ದವರಿಂದ ಮೂಡಾ ಪ್ರಕರಣ ಬೆಳಕಿಗೆ ಬಂತೇ?: ಪರಮೇಶ್ವರ್ ಏನು ಹೇಳಿದ್ರು? - Mahanayaka
3:14 PM Thursday 18 - September 2025

ಸಿಎಂ ಮುಖ್ಯಮಂತ್ರಿ ರೇಸ್ ನಲ್ಲಿದ್ದವರಿಂದ ಮೂಡಾ ಪ್ರಕರಣ ಬೆಳಕಿಗೆ ಬಂತೇ?: ಪರಮೇಶ್ವರ್ ಏನು ಹೇಳಿದ್ರು?

g parameshwar
27/07/2024

ಬೆಂಗಳೂರು:  ಬಿಜೆಪಿಯವರು ಸುಳ್ಳನ್ನು ಪ್ರತಿಪಾದಿಸುತ್ತಿದ್ದಾರೆ. ಇದನ್ನು ಪ್ರತಿ ಜಿಲ್ಲೆಗೆ ಹೋಗಿ ಜನರಿಗೆ ತಿಳಿಸುತ್ತೇವೆ. ಮುಖ್ಯಮಂತ್ರಿ ರೇಸ್‌ನಲ್ಲಿರುವವರು ಮೂಡಾ ಪ್ರಕರಣ ಬೆಳಕಿಗೆ ತಂದಿದ್ದಾರೆ ಎಂದಿರುವ ಕುಮಾರಸ್ವಾಮಿ ಆರೋಪ ಸತ್ಯಕ್ಕೆ ದೂರವಾದುದು. ತನಿಖೆ ಮಾಡಬೇಕು ಎಂಬ ನಿಟ್ಟಿನಲ್ಲಿ ನಿವೃತ್ತ ನ್ಯಾಯಾದೀಶರ ನೇತೃತ್ವದಲ್ಲಿ ಆಯೋಗ ರಚಿಸಲಾಗಿದೆ. ದಾಖಲೆಗಳಿದ್ದರೆ ಆಯೋಗಕ್ಕೆ  ನೀಡಲಿ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.


Provided by

ಈ ಸಂಬಂಧ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು,  ರಾಮನಗರ ಜಿಲ್ಲೆ ಆಗುವ ಮೊದಲು ಬೆಂಗಳೂರು ಗ್ರಾಮಾಂತರ ಎಂಬುದಾಗಿತ್ತು. ರಾಮನಗರದ ಹೆಸರು ಹಾಗೇಯೇ ಇರುತ್ತದೆ, ಬದಲಾಗುವುದಿಲ್ಲ‌. ಬ್ರ್ಯಾಂಡ್ ಬೆಂಗಳೂರಿಗೆ ತಮಕೂರನ್ನು ಸೇರಿಸುವಂತೆ ಒತ್ತಾಯಿಸುತ್ತೇನೆ ಎಂದರು.

ತುಮಕೂರಿನಲ್ಲಿ ಕ್ರಿಕೆಟ್ ಸ್ಟೇಡಿಯಂ, ಮೆಟ್ರೋ ಆಗುತ್ತಿದೆ. ಬೆಂಗಳೂರು ಮಹಾನಗರಕ್ಕೆ ಪ್ರತ್ಯೇಕವಾಗಿ ವೇಗವಾಗಿ ಬೆಳೆಯುತ್ತಿದೆ. ಬ್ರ್ಯಾಂಡ್ ಬೆಂಗಳೂರಿಗೆ ಸೇರಿಸುವಂತೆ ಸಿಎಂ ಮತ್ತು ಡಿಸಿಎಂಗೆ  ಮನವಿ ಮಾಡುತ್ತೇನೆ ಎಂದು ಸಚಿವ ಪರಮೇಶ್ವರ ಅವರು ಹೇಳಿದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಇತ್ತೀಚಿನ ಸುದ್ದಿ