ಸುಹಾಸ್ ಶೆಟ್ಟಿ ಮನೆಗೆ ಮೂಡಿಗೆರೆ ಹಿಂದೂ ಕಾರ್ಯಕರ್ತರ ಭೇಟಿ, ಮನೆಯವರಿಗೆ ಸಾಂತ್ವನ - Mahanayaka

ಸುಹಾಸ್ ಶೆಟ್ಟಿ ಮನೆಗೆ ಮೂಡಿಗೆರೆ ಹಿಂದೂ ಕಾರ್ಯಕರ್ತರ ಭೇಟಿ, ಮನೆಯವರಿಗೆ ಸಾಂತ್ವನ

suhas shetty house
11/06/2025


Provided by

ಕೊಟ್ಟಿಗೆಹಾರ: ಮೂಡಿಗೆರೆ ಹಿಂದೂ ಕಾರ್ಯಕರ್ತರು ಮಂಗಳೂರಿನಲ್ಲಿ ಹತ್ಯೆಯಾದ ಸುಹಾಸ್ ಶೆಟ್ಟಿ ಮನೆಗೆ ಭೇಟಿ ನೀಡಿ ಮನೆಯವರಿಗೆ ಸಾಂತ್ವನ ಹೇಳಿದರು.

ಮೂಡಿಗೆರೆ ಪಟ್ಟಣ ಪಂಚಾಯಿತಿ ಸದಸ್ಯ ಅನುಕುಮಾರ್ ಮಾತನಾಡಿ’ ಸುಹಾಸ್ ಶೆಟ್ಟಿ ಹತ್ಯೆಯ ಪ್ರಕರಣ ಎನ್ ಐಎ ಗೆ ವಹಿಸಿರುವುದು ಸ್ವಾಗತಾರ್ಹ ಕಾರ್ಯವಾಗಿದೆ. ಹಿಂದೂ ಕಾರ್ಯಕರ್ತೆಯಾಗುತ್ತಿರುವುದು ಬೇಸರದ ಸಂಗತಿಯಾಗಿದೆ. ಮಂಗಳೂರು ಭಾಗದಲ್ಲಿ ಇಂತಹ ದುಷ್ಕೃತ್ಯಗಳು ನಿಲ್ಲಬೇಕು. ಕೋಮು ಸೌಹಾರ್ದತೆಯು ಜಿಲ್ಲೆಯು ಜಿಲ್ಲೆಯಲ್ಲಿ ನೆಲೆಸಬೇಕು’ಎಂದರು.

ಮುಖಂಡ ಸಂಜಯ್ ಗೌಡ ಮಾತನಾಡಿ’ ಸುಹಾಸ್ ಶೆಟ್ಟಿ ದಕ್ಷ ಮುಖಂಡರಾಗಿದ್ದರು. ಅವರ ಸಾವು ಹಿಂದೂ ಸಮಾಜಕ್ಕೆ ತುಂಬಲಾರದ ನಷ್ಟವಾಗಿದೆ. ಅವರ ಕುಟುಂಬಕ್ಕೆ ಹಿಂದೂ ಕಾರ್ಯಕರ್ತರು ಸ್ಪಂಧಿಸಲು ಸದಾ ಸಿದ್ದರಿದ್ದೇವೆ’ಎಂದರು.

ಈ ಸಂದರ್ಭದಲ್ಲಿ  ಸುಹಾಸ್ ಶೆಟ್ಟಿ ಮನೆಯವರಿಗೆ ಕಾರ್ಯಕರ್ತರ ವತಿಯಿಂದ ಧನ ಸಹಾಯ ಮಾಡಲಾಯಿತು. ಈ ಸಂದರ್ಭದಲ್ಲಿ ತ್ರಿಪುರ ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷ ರಘು, ಬಿಜೆಪಿ ಮುಖಂಡರಾದ ಕನ್ನೇಹಳ್ಳಿ ಭರತ್, ಜಿಲ್ಲಾ ಎಸ್ ಸಿ ಮೋರ್ಚಾ ಮುಖಂಡ ಸುಜೀತ್, ದೇವರಾಜ್, ಕೆಂಪೇಗೌಡ ಒಕ್ಕಲಿಗರ ಸಂಘದ ಮುಖಂಡ ಬ್ರಿಜೇಶ್ ಕಡಿದಾಳ್, ಪ್ರಸಾದ್, ಜೆಡಿಎಸ್ ಮುಖಂಡರಾದ ಸಂಪತ್, ಹಿಂದೂ ಕಾರ್ಯಕರ್ತರಾದ ಮಧು ಹೆಗ್ಗರವಳ್ಳಿ, ಕಾರ್ತಿಕ್ ಪಟ್ಟದೂರು, ಎ.ಆರ್.ಅಭಿಲಾಷ್, ವಿನಯ್, ಉತ್ತಮ್, ಪ್ರದೀಪ್ ಬಿನ್ನಡಿ ಹಾಗೂ 70ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರು ಇದ್ದರು.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ