ಮುಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರಾ ಜಿ.ಟಿ.ದೇವೇಗೌಡ? - Mahanayaka
12:48 PM Thursday 16 - October 2025

ಮುಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಲಿದ್ದಾರಾ ಜಿ.ಟಿ.ದೇವೇಗೌಡ?

gt devegowda
12/07/2021

ಮೈಸೂರು:  ಜೆಡಿಎಸ್ ನಿಂದ ದೂರವಾಗಿರುವ ಶಾಸಕ ಜಿ.ಟಿ.ದೇವೇಗೌಡ, ಮುಂದಿನ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸುವ ಬಗ್ಗೆ ಚಿಂತನೆ ನಡೆಸಿದ್ದಾರೆ ಎಂದು ಹೇಳಲಾಗಿದ್ದು, ನಿನ್ನೆ ಅವರು ನೀಡಿದ ಹೇಳಿಕೆ ಇದೀಗ ಚರ್ಚೆಗೆ ಕಾರಣವಾಗಿದೆ.


Provided by

ನಾನು ಯಾವ ಪಕ್ಷವನ್ನು ಸೇರಬೇಕು ಎನ್ನುವುದನ್ನು ಇನ್ನೂ ತೀರ್ಮಾನಿಸಿಲ್ಲ. ಪಕ್ಷೇತರನಾಗಿ ಸ್ಪರ್ಧಿಸಿದರೂ ಅಚ್ಚರಿಪಡಬೇಕಾಗಿಲ್ಲ. ನಮಗೆ ಪಕ್ಷ ಬೇಡ, ಜಿ.ಟಿ.ದೇವೇಗೌಡರು ಬೇಕು ಎಂದು ಕ್ಷೇತ್ರದ ಜನತೆ ಹೇಳುತ್ತಿದ್ದಾರೆ ಎಂದು ಅವರು ಹೇಳಿದರು.

ನಾನು ಮತ್ತು ನನ್ನ ಪುತ್ರ ಹರೀಶ್ ಗೌಡ ಪಕ್ಷೇತರರಾಗಿ ಸ್ಪರ್ಧಿಸಿದರೂರು ಗೆಲ್ಲುತ್ತೇವೆ ಎನ್ನುವ ಜನರ ಪ್ರೀತಿ ವಿಶ್ವಾಸದಿಂದಾಗಿ ನಮಗೆ ಧೈರ್ಯ ಬಂದಿದೆ.  ಮಾಜಿ ಪ್ರಧಾನಿ ದೇವೇಗೌಡರು ಪಕ್ಷದಲ್ಲೇ ಉಳಿಸಿಕೊಳ್ಳುವ ಮಾತನಾಡಿದ್ದಾರೆ. 2023ಕ್ಕೆ ಪಕ್ಷ ಅಧಿಕಾರಕ್ಕೆ ತಂದು ನಿವೃತ್ತಿಯಾಗುವುದಾಗಿ ಹೇಳಿದ್ದಾರೆ. ಆದರೆ, ನಾನು ಇನ್ನೂ ಯಾವುದೇ ನಿರ್ಧಾರ ಕೈಗೊಂಡಿಲ್ಲ. ಪಕ್ಷೇತರನಾಗಿ ನಿಂತರೂ ಅಚ್ಚರಿಪಡಬೇಕಿಲ್ಲ ಎಂದು ತಿಳಿಸಿದ್ದಾರೆ.

ಇನ್ನಷ್ಟು ಸುದ್ದಿಗಳನ್ನು ಓದಿ:

ಹಿತೈಷಿಗಳು, ಮಠಾಧೀಶರು ಸುಮ್ಮನಿರಪ್ಪ ಎಂದಿದ್ದಾರೆ | ರಮೇಶ್ ಜಾರಕಿಹೊಳಿ ಯೂಟರ್ನ್

ಜನಸಂಖ್ಯೆಯ ಹೆಚ್ಚಳ ಅಸಮಾನತೆಗೆ ಕಾರಣ | ಯೋಗಿ ಆದಿತ್ಯನಾಥ

ಮತ್ತೆ ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಏರಿಕೆ | ಇಂಧನ ಬೆಲೆ 150ರ ಗಡಿದಾಟುತ್ತಾ?

ಮದುವೆ, ವಿಚ್ಛೇದನಕ್ಕೆ ಏಕರೂಪದ ನಾಗರಿಕ ಸಂಹಿತೆ ಅಗತ್ಯ ಎಂದ ದೆಹಲಿ ಹೈಕೋರ್ಟ್!

ಇತ್ತೀಚಿನ ಸುದ್ದಿ