ಮರದಿಂದ ಬಿದ್ದ ತೆಂಗಿನಕಾಯಿ ಮುಟ್ಟಿದ್ದಕ್ಕೆ ಬಿತ್ತು ಹೆಣ! - Mahanayaka
3:20 PM Wednesday 20 - August 2025

ಮರದಿಂದ ಬಿದ್ದ ತೆಂಗಿನಕಾಯಿ ಮುಟ್ಟಿದ್ದಕ್ಕೆ ಬಿತ್ತು ಹೆಣ!

kaduru
20/08/2025


Provided by

ಚಿಕ್ಕಮಗಳೂರು:  ಮರದಿಂದ ಬಿದ್ದ ತೆಂಗಿನಕಾಯಿ ಮುಟ್ಟಿದ್ದಕ್ಕೆ ವ್ಯಕ್ತಿಯೊಬ್ಬನನ್ನು ಹೊಡೆದು ಹತ್ಯೆ ಮಾಡಿರುವ ಘಟನೆ ಕಡೂರು ತಾಲೂಕಿನ ಸಖರಾಯಪಟ್ಟಣ ಸಮೀಪದ ಗೊಲ್ಲರಹಟ್ಟಿ ಗ್ರಾಮದಲ್ಲಿ ನಡೆದಿದೆ.

ಕುಮಾರ್ (37) ಮೃತ ದುರ್ದೈವಿಯಾಗಿದ್ದು, ಮಧು (37) ಹತ್ಯೆ ನಡೆಸಿದ ಆರೋಪಿಯಾಗಿದ್ದಾನೆ. ತನ್ನ ತೋಟದ ತೆಂಗಿನಕಾಯಿ  ತೆಗೆದುಕೊಂಡು ಹೋಗುತ್ತಿದ್ದ ಎಂದು ಆರೋಪಿಸಿ ಕುಮಾರ್ ನನ್ನು ಥಳಿಸಿ ಹತ್ಯೆ ನಡೆಸಲಾಗಿದೆ ಎಂದು ತಿಳಿದು ಬಂದಿದೆ.

ಆರೋಪಿ ಮಧುನ ತೋಟದಲ್ಲಿ ಬಿದ್ದಿದ್ದ ತೆಂಗಿನಕಾಯಿಯನ್ನು ಕುಮಾರ್ ತೆಗೆದುಕೊಂಡು ಹೋಗ್ತಿದ್ದ ಎನ್ನಲಾಗಿದೆ.  ಈ ಹಿಂದೆ ಸಾಕಷ್ಟು ಬಾರಿ ಕುಮಾರ್ ಗೆ ಮಧು ಎಚ್ಚರಿಕೆ ನೀಡಿದ್ದ, ನಿನ್ನೆ ಕೂಡ ತೆಂಗಿನಕಾಯಿ ತೆಗೆದುಕೊಂಡು ಹೋಗುವಾಗ ಗಲಾಟೆ ನಡೆದಿತ್ತು. ಈ ವೇಳೆ ತೋಟದ ಮಾಲೀಕ ಮಧುಗೆ ಕುಮಾರ್ ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದ ಎನ್ನಲಾಗಿದೆ.

ಇದರಿಂದ ಆಕ್ರೋಶಗೊಂಡು ಮಧು  ಗುದ್ದಲಿಯಿಂದ ಕುಮಾರ್ ಮೇಲೆ ಹಲ್ಲೆ ಮಾಡಿದ್ದ, ಮದ್ಯ ಸೇವಿಸಿ ಊಟ–ತಿಂಡಿಯೂ ಮಾಡಿರದ ಕುಮಾರ್ ನಿತ್ರಾಣಗೊಂಡು ಅಲ್ಲೆ ಬಿದ್ದಿದ್ದನು, ತೀವ್ರ ರಕ್ತಸ್ರಾವದಿಂದ ನರಳುತ್ತಿದ್ದವನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದ್ರೆ, ಚಿಕಿತ್ಸೆ ಫಲಕಾರಿಯಾಗದೆ ಜಿಲ್ಲಾಸ್ಪತ್ರೆಯಲ್ಲಿ ಕುಮಾರ್ ಸಾವನ್ನಪ್ಪಿದ್ದಾರೆ.

ಸದ್ಯ ಸಖರಾಯಪಟ್ಟಣ ಪೋಲಿಸರು ಕೊಲೆ ಆರೋಪಿ ಮಧುನನ್ನು ಬಂಧಿಸಿದ್ದಾರೆ. ಸಖರಾಯಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ