ಪ್ರೀತಿ ವಿಚಾರದಲ್ಲಿ ಯುವಕನ ಹತ್ಯೆ: ನಾಲ್ವರು ಆರೋಪಿಗಳ ಬಂಧನ - Mahanayaka
6:59 PM Tuesday 30 - September 2025

ಪ್ರೀತಿ ವಿಚಾರದಲ್ಲಿ ಯುವಕನ ಹತ್ಯೆ: ನಾಲ್ವರು ಆರೋಪಿಗಳ ಬಂಧನ

koppala
05/08/2025

ಕೊಪ್ಪಳ: ಪ್ರೀತಿ ವಿಚಾರಕ್ಕೆ ಯುವಕನನ್ನು ಹತ್ಯೆ ಮಾಡಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರು ಆರೋಪಿಗಳನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ ಎಂದು ಕೊಪ್ಪಳ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಾಮ್ ಅರಸಿದ್ಧಿ ಹೇಳಿದ್ದಾರೆ.


Provided by

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ವಾಲ್ಮೀಕಿ ಸಮಾಜದ ಗವಿಸಿದ್ದಪ್ಪ ನಾಯಕ್ ಎನ್ನುವ ಯುವಕನನ್ನು ನಾಲ್ವರು ಯುವಕರು ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಿದ್ದರು. ಕೃತ್ಯ ನಡೆದ ದಿನವೇ ಪ್ರಮುಖ  ಆರೋಪಿ ಸಾಧಿಕ್ ಹುಸೇನ್ ಕೊಲ್ಕಾರ್  ಪೊಲೀಸ್ ಠಾಣೆಗೆ ಶರಣಾಗಿದ್ದ, ಬಳಿಕ ಉಳಿದ ಆರೋಪಿಗಳಾದ ಗೇಸುದರಾಜ್ ಪಟೇಲ್, ನಿಜಾಮುದ್ದೀನ್ ಮತ್ತು ಮೆಹಬೂಬ್ ಸಿಕ್ಕಲ್ ಗಾರ್ ಎಂಬವರನ್ನು ಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು. ಆರೋಪಿಗಳಿಂದ 2 ಲಾಂಗ್ ಮತ್ತು ಒಂದು ಬೈಕ್ ವಶಕ್ಕೆ ಪಡೆಯಲಾಗಿದೆ ಮತ್ತು ಬಟ್ಟೆಗನ್ನೂ ವಶಕ್ಕೆ ಪಡೆದುಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.

ಸಾಧಿಕ್ ಹುಸೇನ್ ಮತ್ತು ಗವಿಸಿದ್ಧಪ್ಪ ನಾಯಕ್ ಒಂದೇ ಹುಡುಕಿಯನ್ನು ಪ್ರೀತಿಸುತ್ತಿದ್ದರು. ಈ ವಿಚಾರದಲ್ಲಿ ಹತ್ಯೆ ನಡೆಸಲಾಗಿದೆ. ಇದು ಕೇವಲ ಪ್ರೀತಿ ವಿಚಾರಕ್ಕೆ ನಡೆದ ಹತ್ಯೆಯಾಗಿದ್ದು, ವದಂತಿಗಳಿಗೆ ಸಾರ್ವಜನಿಕರು ಕಿವಿಕೊಡದಂತೆ ಅವರು ಮನವಿ ಮಾಡಿಕೊಂಡಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ