ಮುರುಘಾಶ್ರೀ ವಿರುದ್ಧದ  POCSO ಪ್ರಕರಣ: ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೇ ಪರದಾಡಿದ ಸ್ವಾಮೀಜಿಗಳು - Mahanayaka
1:41 AM Friday 12 - September 2025

ಮುರುಘಾಶ್ರೀ ವಿರುದ್ಧದ  POCSO ಪ್ರಕರಣ: ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೇ ಪರದಾಡಿದ ಸ್ವಾಮೀಜಿಗಳು

swamijis
30/08/2022

ಚಿತ್ರದುರ್ಗ: ಬಾಲಕಿಯರ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ POCSO ಪ್ರಕರಣದ ಆರೋಪಿ ಚಿತ್ರದುರ್ಗ ಮುರುಘಾ ಮಠದ ಶಿವಮೂರ್ತಿ ಶರಣರ ಅವರಿಗೆ ಬೆಂಬಲ ಸೂಚಿಸಲು ಬಂದ ಸ್ವಾಮೀಜಿಗಳು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಲಾಗದೇ ಪಲಾಯನ ಮಾಡಿದ ಘಟನೆ ನಡೆದಿದೆ.


Provided by

ಶಿವಮೂರ್ತಿ ಶರಣರ ಪರ ಬೆಂಬಲ ಸೂಚಿಸಲು ಮಂಗಳವಾರ ಮಠಕ್ಕೆ ಆಗಮಿಸಿದ್ದ ಬೇರೆ ಬೇರೆ ಮಠಗಳ ಸ್ವಾಮೀಜಿಗಳು ಆಗಮಿಸಿದ್ದರು. ಸಂತ್ರಸ್ತ ಬಾಲಕಿಯರ ಬಗ್ಗೆ ನಿಮಗೆ ಕಿಂಚಿತ್ತೂ ಕನಿಕರ, ಕಾಳಜಿ ಇಲ್ಲವೇ ಎನ್ನುವ ಪ್ರಶ್ನೆ ಎದುರಾದಾಗ ಸ್ವಾಮೀಜಿಗಳ ಮುಖ ಬಿಳುಚಿಕೊಂಡಿದ್ದು, ಉತ್ತರ ನೀಡಲಾಗದೇ ಪರದಾಡಿದ್ದಾರೆ.

ನೀವೆಲ್ಲ ಸಮಾಜಕ್ಕೆ ಯಾವ ಸಂದೇಶವನ್ನು ನೀಡಲು ಹೊರಟಿದ್ದೀರಿ ಅನ್ನೋ ಪತ್ರಕರ್ತರ ಖಡಕ್ ಪ್ರಶ್ನೆಗೆ ನಡುಗಿದ ಸ್ವಾಮೀಜಿಗಳು ಯಾವುದೇ ಪ್ರಶ್ನೆಗಳಿಗೂ ಉತ್ತರಿಸಲಾಗದೇ ನಿರುತ್ತರವಾಗಿ ನಿಂತಿದ್ದು, ತನಿಖೆಯಲ್ಲಿ ಗೊತ್ತಾಗುತ್ತದೆ. ಸ್ವಾಮೀಜಿಗಳು ಷಡ್ಯಂತ್ರದಲ್ಲಿ ಸಿಲುಕಿದ್ದಾರೆ ಎಂದು ತಪ್ಪಿಸಿಕೊಳ್ಳಲು ಯತ್ನಿಸಿದರು.

ದಲಿತ ಸಂತ್ರಸ್ತ ಬಾಲಕಿಯ ಬಗ್ಗೆ ಪ್ರಸ್ತಾಪಿಸಿದಾಗ ಮಾದಾರ ಚನ್ನಯ್ಯ ಶ್ರೀಗಳು ಸಹ ಮೌನವಾಗಿದ್ದದ್ದು ಅಚ್ಚರಿಗೆ ಕಾರಣವಾಯ್ತು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ