ಯುಪಿಯಲ್ಲಿ ಮುಸ್ಲಿಂ ‌ಕುಟುಂಬ ಮನೆ ಖರೀದಿಸಿದ್ದಕ್ಕೆ ಆಕ್ಷೇಪ: ಮನೆ ಮಾರಲು ಮುಂದಾದ ನೊಂದ ಕುಟುಂಬ - Mahanayaka
10:42 AM Wednesday 10 - December 2025

ಯುಪಿಯಲ್ಲಿ ಮುಸ್ಲಿಂ ‌ಕುಟುಂಬ ಮನೆ ಖರೀದಿಸಿದ್ದಕ್ಕೆ ಆಕ್ಷೇಪ: ಮನೆ ಮಾರಲು ಮುಂದಾದ ನೊಂದ ಕುಟುಂಬ

30/08/2024

ಉತ್ತರ ಪ್ರದೇಶದ ಬರೇಲಿಯ ಹಿಂದೂ ಪ್ರಾಬಲ್ಯ ಪ್ರದೇಶದಲ್ಲಿ ಮುಸ್ಲಿಂ ಕುಟುಂಬವೊಂದು ಮನೆ ಖರೀದಿಸಿದ್ದಕ್ಕೆ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹೀಗಾಗಿ ಖರೀದಿಸಿದ ಕೆಲವೇ ದಿನಗಳಲ್ಲಿ ಮುಸ್ಲಿಂ ಕುಟುಂಬ ಮನೆ ಮಾರಲು ನಿರ್ಧರಿಸಿದೆ ಎಂದು ದಿ ವೈರ್ ವರದಿ ಮಾಡಿದೆ.

ಮುಸ್ಲಿಂ ಕುಟುಂಬಕ್ಕೆ ಮನೆ ಮಾರಾಟ ಮಾಡಿರುವ ವಿಶಾಲ್ ಸಕ್ಸೇನಾ ಎಂಬವರು ಪೊಲೀಸರಿಗೆ ಪತ್ರವೊಂದನ್ನು ಬರೆದಿದ್ದು, “ಹಿಂದುತ್ವ ಸಂಘಟನೆಯೊಂದಿಗೆ ಸೇರಿಕೊಂಡು ಸ್ಥಳೀಯರು ಮನೆ ಮಾರಾಟದ ಬಗ್ಗೆ ಸುಳ್ಳು ಆರೋಪಗಳನ್ನು ಮಾಡಿದ್ದಾರೆ. ಕೋಮು ಸೌಹಾರ್ದ ಕೆಡಿಸುವ ಸಲುವಾಗಿ ಸಾಮೂಹಿಕ ವಲಸೆಯ ಬೆದರಿಕೆ ಹಾಕಿದ್ದಾರೆ” ಎಂದು ಹೇಳಿದ್ದಾರೆ.

“ನನಗೆ ಮನೆ ವಾಪಸ್ ಬೇಡ, ಆದರೆ ಮುಸ್ಲಿಂ ಕುಟುಂಬಕ್ಕೆ ಮನೆ ಕೊಟ್ಟಿರುವುದನ್ನು ವಿರೋಧಿಸುವುದರ ಹಿಂದೆ ನಗರದ ಹೆಸರನ್ನು ಹಾಳು ಮಾಡುವ ಉದ್ದೇಶವಿದೆ” ಎಂದು ಸಕ್ಸೇನಾ ಆರೋಪಿಸಿದ್ದಾರೆ.

ಈ ಎಲ್ಲಾ ಗೊಂದಲಗಳ ನಡುವೆ ಸಕ್ಸೇನಾ ಅವರಿಂದ ಮನೆ ಖರೀದಿಸಿರುವ ಶಬ್ನಂ ಎಂಬ ಮುಸ್ಲಿಂ ಮಹಿಳೆಯ ಕುಟುಂಬ, ಸೂಕ್ತ ಬೆಲೆ ನೀಡಲು ಸಿದ್ದರಿರುವ ಯಾವುದೇ ಸನಾತನಿ ಹಿಂದೂಗಳಿಗೆ ಮನೆ ಮಾರಾಟ ಮಾಡಲು ಸಿದ್ದ ಎಂದಿದೆ. ಮನೆ ಬರೇಲಿಯಾ ಹಿಂದೂ ಪ್ರಾಬಲ್ಯ ಪ್ರದೇಶ ಪಂಜಾಬ್ ಪುರದಲ್ಲಿದೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ