ಮನೆಯಲ್ಲಿ ಬೀಫ್ ಇಟ್ಟ ಆರೋಪ: ಮುಸ್ಲಿಂ ಯುವಕರ ಮನೆ ಧ್ವಂಸ

ಮನೆಯಲ್ಲಿ ಬೀಫ್ ಇಟ್ಟುಕೊಂಡಿದ್ದಾರೆ ಎಂಬ ಬಜರಂಗದಳದ ಆರೋಪದ ಹಿನ್ನೆಲೆಯಲ್ಲಿ ಬಂಧನಕ್ಕೆ ಒಳಗಾಗಿದ್ದ ಮುಸ್ಲಿಂ ಯುವಕರ ಮನೆಯನ್ನು ಮಧ್ಯಪ್ರದೇಶದ ಸರಕಾರ ಧ್ವಂಸಗೊಳಿಸಿದೆ.
ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ನೂರಾಬಾದ್ ನ ಜಾಫರ್ ಖಾನ್ ಮತ್ತು ಅಸ್ಘರ್ ಖಾನ್ ಎಂಬವರ ಮನೆಗಳನ್ನು ಅಧಿಕಾರಿಗಳು ಬುಲ್ಡೋಜರ್ ಬಳಸಿ ಧ್ವಂಸಗೊಳಿಸಿದ್ದಾರೆ ಎಂದು ವರದಿಯಾಗಿದೆ. ಇವರ ವಿರುದ್ಧ ಪೊಲೀಸರು ರಾಷ್ಟ್ರೀಯ ಭದ್ರತಾ ಕಾಯ್ದೆ ಅಥವಾ ಎನ್ಎಸ್ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಇವರ ಮನೆಯಲ್ಲಿ ಗೋ ಹತ್ಯೆ ನಡೆಸುವುದನ್ನು ನಾನು ನೋಡಿದೆ ಮತ್ತು ತಡೆಯಲು ಹೋದಾಗ ನನ್ನ ಮೇಲೆ ಹಲ್ಲೆ ನಡೆಸಿದರು ಎಂದು ಆರೋಪಿಸಿ ಬಜರಂಗದಳದ ನಾಯಕ ದಿಲೀಪ್ ಸಿಂಗ್ ಗುಜಾರ್ ಎಂಬವ ಪೊಲೀಸರಿಗೆ ದೂರು ನೀಡಿದ್ದ. ಇವರನ್ನು ಬಂಧಿಸಬೇಕು ಮತ್ತು ಅವರ ಮೇಲೆ ಎನ್ ಎಸ್ ಎ ಕಾಯ್ದೆಯಲ್ಲಿ ಪ್ರಕರಣ ದಾಖಲಿಸಬೇಕು ಎಂದು ಆಗ್ರಹಿಸಿ ಪೊಲೀಸ್ ಠಾಣೆಯ ಮುಂದೆ ತನ್ನ ಬೆಂಬಲಿಗರನ್ನು ಸೇರಿಸಿ ಪ್ರತಿಭಟನೆ ನಡೆಸಿದ್ದ. ಈ ಹಿನ್ನೆಲೆಯಲ್ಲಿ ಜೂನ್ 21ರಂದು ಇವರ ಮನೆಗಳ ಮೇಲೆ ದಾಳಿ ನಡೆಸಿದಾಗ ಬೀಫ್ ಪತ್ತೆಯಾಗಿದೆ ಎಂದು ಪೊಲೀಸರು ಹೇಳಿದ್ದರು. ಆ ಬಳಿಕ ಇದೀಗ ಮನೆಗಳ ದ್ವಂಸ ಕಾರ್ಯ ನಡೆದಿದೆ.
ಪ್ರಕರಣಕ್ಕೆ ಸಂಬಂಧಿಸಿ ಜಾಫರ್ ಮತ್ತು ಅಜ್ಗರ್ ಅಲ್ಲದೆ ಇಬ್ಬರು ಮಹಿಳೆಯರು ಓರ್ವ ಮಗು ಸೇರಿದಂತೆ ಆರು ಮಂದಿಯನ್ನು ಪೊಲೀಸರು ಬಂಧಿಸಿ ಮಧ್ಯಪ್ರದೇಶ ಗೋ ಹತ್ಯ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದರು.
ಇದೀಗ ಜಾಫರ್ ಮತ್ತು ಅಜ್ಗರ್ ಮೇಲೆ ಎನ್ ಎಸ್ ಎ ಅಡಿಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth