ಮೂತ್ರವಿಸರ್ಜನೆಗೆ ತೆರಳಿದ್ದ ಇಬ್ಬರು ಕಾರ್ಮಿಕರು ಕ್ಷಣ ಮಾತ್ರದಲ್ಲೇ ಸಾವನ್ನಪ್ಪಿದ್ದಾರೆ | ಅಷ್ಟಕ್ಕೂ ನಡೆದದ್ದೇನು? - Mahanayaka
10:09 PM Tuesday 16 - December 2025

ಮೂತ್ರವಿಸರ್ಜನೆಗೆ ತೆರಳಿದ್ದ ಇಬ್ಬರು ಕಾರ್ಮಿಕರು ಕ್ಷಣ ಮಾತ್ರದಲ್ಲೇ ಸಾವನ್ನಪ್ಪಿದ್ದಾರೆ | ಅಷ್ಟಕ್ಕೂ ನಡೆದದ್ದೇನು?

kalasipalya
22/06/2021

ಬೆಂಗಳೂರು: ಮೂತ್ರ ವಿಸರ್ಜನೆ ವೇಳೆ ವಿದ್ಯುತ್ ಆಘಾತಕ್ಕೊಳಗಾಗಿ ಇಬ್ಬರು ಕಾರ್ಮಿಕರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಕಲಾಸಿಪಾಳ್ಯದಲ್ಲಿ ನಿನ್ನೆ ನಡೆದಿದ್ದು, ಒಜಾಸ್ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ ರಾಯಚೂರು ಮೂಲದ ಕಾರ್ಮಿಕರು ಮೃತಪಟ್ಟವರು ಎಂದು ಗುರುತಿಸಲಾಗಿದೆ.

22 ವರ್ಷ ವಯಸ್ಸಿನ ಕರಿಯಪ್ಪ ಹಾಗೂ 19 ವರ್ಷ ವಯಸ್ಸಿನ ನಾಗರಾಜು ಸಾವಿಗೀಡಾದ ಕಾರ್ಮಿಕರಾಗಿದ್ದಾರೆ. ಓಜಾಸ್ ಕಂಪೆನಿಯಲ್ಲಿ ಕಾಲುವೆ ಸ್ವಚ್ಛಗೊಳಿಸುವ ಕೆಲಸ ಮಾಡುತ್ತಿದ್ದ ಇವರು, ನಿನ್ನೆ ಮಲ್ಲಸಂದ್ರ ಬಳಿಯಲ್ಲಿ ಕೆಲಸ ಮುಗಿಸಿ ಎಚ್.ಎಸ್.ಆರ್.ಲೇಔಟ್ ಬಳಿಯಿರುವ ತಮ್ಮ ಮನೆಗೆ ಹೊರಟಿದ್ದರು.

ಲಾಲ್ ಬಾಗ್ ರಸ್ತೆಯ ನಾಲ ರಸ್ತೆ ಬಳಿಯಲ್ಲಿ ತಮ್ಮ ಜೊತೆಗಾರರು ಕೆಲಸ ಮಾಡುತ್ತಿರುವುದನ್ನು ಕಂಡು, ಅವರ ಜೊತೆಗೆ ಹೋಗಲೆಂದು ಅಲ್ಲೇ ಕಾಯುತ್ತಿದ್ದರು.  ಈ ವೇಳೆ ಮೂತ್ರ ವಿಸರ್ಜನೆಗೆ ತೆರಳಿದ್ದು, ಈ ವೇಳೆ ತಂತಿ ಸ್ಪರ್ಶಿಸಿ ಅವರು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಈ ಬಗ್ಗೆ ಕಲಾಸಿ ಪಾಳ್ಯ ಪೊಲೀಸ್  ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇತ್ತೀಚಿನ ಸುದ್ದಿ