ಧ್ವಜಸ್ತಂಭ ನಿಲ್ಲಿಸುತ್ತಿದ್ದ ವೇಳೆ ಮೂವರ ಮೇಲೆ ಪ್ರವಹಿಸಿದ ವಿದ್ಯುತ್: ಓರ್ವ ಬಾಲಕನ ದಾರುಣ ಸಾವು - Mahanayaka
11:11 AM Saturday 23 - August 2025

ಧ್ವಜಸ್ತಂಭ ನಿಲ್ಲಿಸುತ್ತಿದ್ದ ವೇಳೆ ಮೂವರ ಮೇಲೆ ಪ್ರವಹಿಸಿದ ವಿದ್ಯುತ್: ಓರ್ವ ಬಾಲಕನ ದಾರುಣ ಸಾವು

chandan
15/08/2021


Provided by

ತುಮಕೂರು: ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವದಂದೇ ಧ್ವಜಸ್ತಂಭ ನಿಲ್ಲಿಸುತ್ತಿದ್ದ ವೇಳೆ ಮೂವರು ಬಾಲಕರಿಗೆ ವಿದ್ಯುತ್ ಪ್ರವಹಿಸಿದ್ದು, ಓರ್ವ ಬಾಲಕ ಮೃತಪಟ್ಟಿರುವ ದಾರುಣ ಘಟನೆ  ಇಲ್ಲಿನ ಕೋರಾ ಹೋಬಳಿಯ ಕರೀಕೆರೆ ಗ್ರಾಮದಲ್ಲಿ ನಡೆದಿದೆ.

16 ವರ್ಷ ವಯಸ್ಸಿನ ಚಂದನ್ ಮೃತ ಬಾಲಕನಾಗಿದ್ದು, 16 ವರ್ಷ ವಯಸ್ಸಿನ ಶಶಾಂಕ್ ಹಾಗೂ 22 ವರ್ಷ ವಯಸ್ಸಿನ ಪವನ್ ಘಟನೆಯಲ್ಲಿ ತೀವ್ರ ಸ್ವರೂಪದ ಗಾಯಕ್ಕೊಳಗಾಗಿದ್ದಾರೆ ಎಂದು ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ಧ್ವಜಸ್ತಂಬ ನಿಲ್ಲಿಸುತ್ತಿದ್ದ ವೇಳೆ ಈ ದುರ್ಘಟನೆ ನಡೆದಿದ್ದು, ಧ್ವಜಸ್ತಂಭವು ವಿದ್ಯುತ್ ತಂತಿಗೆ ತಗುಲಿದ ಪರಿಣಾಮ ಈ ಘಟನೆ ನಡೆದಿದೆ ಎಂದು ಹೇಳಲಾಗಿದೆ. ಮೃತ ಬಾಲಕ ಹಾಗೂ ಗಾಯಗೊಂಡವರು ಈ ಶಾಲೆಯ ವಿದ್ಯಾರ್ಥಿಗಳಲ್ಲ ಎಂದು ತಿಳಿದು ಬಂದಿದೆ. ಘಟನೆ ಸಂಬಂಧ ಕೋರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇನ್ನಷ್ಟು ಸುದ್ದಿಗಳು…

ಎಸ್ ಸಿ-ಎಸ್ ಟಿಗಳ ಜಾತಿ ನಿಂದನೆ ಮಾಡಿದ ನಟಿ ಅರೆಸ್ಟ್: ಬಂಧನದ ವೇಳೆ ನಟಿಯಿಂದ ಹೈಡ್ರಾಮಾ

ಸ್ವಾತಂತ್ರ್ಯ ದಿನಾಚರಣೆ: ಗಾಂಧಿ, ಭಗತ್ ಸಿಂಗ್, ಅಂಬೇಡ್ಕರರನ್ನು ನೆನೆದ ಪ್ರಧಾನಿ ನರೇಂದ್ರ ಮೋದಿ

ಅಮೃತಘಳಿಗೆಯ ವಿಜೃಂಭಣೆಯೂ, ಪ್ರಜಾತಂತ್ರ ಭಾರತದ ಆತಂಕಗಳೂ | ನಾ ದಿವಾಕರ

ಬಾಡಿ ಸ್ಪ್ರೇ ಬಳಸದೇ ಬೆವರಿನ ವಾಸನೆಯಿಂದ ಮುಕ್ತಿ ಪಡೆಯುವುದು ಹೇಗೆ?

ಲಾಕ್ ಡೌನ್ ನಿಂದಾಗಿ ಅಡುಗೆ ಭಟ್ಟ ದರೋಡೆಕೋರನಾದ!

ಹಿಂದಿನ ನಿಯಮಗಳೇ ಮುಂದುವರಿಕೆ: ಪಾಸಿವಿಟಿ ಕಡಿಮೆ ಇರುವ ಜಿಲ್ಲೆಗಳಲ್ಲಿ ಶಾಲೆ ತೆರೆಯಲು ನಿರ್ಧಾರ | ಸಿಎಂ ಬೊಮ್ಮಾಯಿ

“ಬಿಜೆಪಿಯು ದಲಿತರ ಪರವಾಗಿದೆ ಅನ್ನಿಸುತ್ತಿದೆ” | “ಸದಾಶಿವ ಆಯೋಗ ವರದಿ ಜಾರಿ ಮಾಡಿ”

 

ಇತ್ತೀಚಿನ ಸುದ್ದಿ