ಮಾರ್ಚ್ 28ಕ್ಕೆ ನಿರ್ಣಾಯಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರಂತೆ ದಿಲ್ಲಿ ಸಿಎಂ ಕೇಜ್ರಿವಾಲ್: ಎಲ್ಲರ ಚಿತ್ತ ಗುರುವಾರದತ್ತ..!

ಅಬಕಾರಿ ಹಗರಣಕ್ಕೆ ಸಂಬಂಧಿಸಿದಂತೆ ಮಾರ್ಚ್ 28 ರ ಗುರುವಾರದಂದು ಕೇಜ್ರಿವಾಲ್ ಅವರು ನ್ಯಾಯಾಲಯದಲ್ಲಿ ನಿರ್ಣಾಯಕ ಮಾಹಿತಿಯನ್ನು ಹಂಚಿಕೊಳ್ಳಲಿದ್ದಾರೆ ಎಂದು ಕೇಜ್ರಿವಾಲ್ ಪತ್ನಿ ಸುನಿತಾ ಪತ್ರಿಕಾಗೋಷ್ಠಿಯಲ್ಲಿ ಹೇಳಿದ್ದಾರೆ.
ಮದ್ಯ ನೀತಿಗೆ ಸಂಬಂಧಿಸಿದಂತೆ ಏನೆಲ್ಲ ಸತ್ಯಗಳಿವೆ ಎಂಬುದನ್ನು ಮಾತ್ರವಲ್ಲ, ಇಡಿ ವಶಪಡಿಸಿಕೊಂಡಿದೆ ಎಂದು ಹೇಳಲಾದ ಹಣ ಎಲ್ಲಿದೆ ಎಂಬ ವಿಷಯವಾಗಿಯೂ ಕೂಡ ಕೇಜ್ರಿವಾಲ್ ನ್ಯಾಯಾಲಯದ ಮುಂದೆ ಬಹಿರಂಗಪಡಿಸಲಿದ್ದಾರೆ ಎಂದು ಸುನೀತಾ ಹೇಳಿದ್ದಾರೆ.
ಮದ್ಯ ಹಗರಣದ ಹೆಸರಲ್ಲಿ ಈಡಿ ಕಳೆದ ಎರಡೂವರೆ ವರ್ಷಗಳಲ್ಲಿ 250 ರಷ್ಟು ರೇಡನ್ನು ಮಾಡಿದೆ. ಆದರೆ ಈವರೆಗೆ ಅಧಿಕೃತವಾಗಿ ಒಂದೇ ಒಂದು ಪೈಸೆಯನ್ನೂ ವಶಪಡಿಸಿಕೊಳ್ಳಲು ಈಡಿಗೆ ಸಾಧ್ಯವಾಗಿಲ್ಲ ಎಂದು ಸುನಿತಾ ಹೇಳಿದ್ದಾರೆ.
ಮಾಜಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯ ರಾಜ್ಯಸಭಾ ಸದಸ್ಯ ಸಂಜಯ್ ಸಿಂಗ್ ಮಾಜಿ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ಎಲ್ಲರ ಮೇಲೂ ಇಡಿ ದಾಳಿ ನಡೆಸಿದೆ. ಆದರೆ ನಯಾಪೈಸೆ ವಶಪಡಿಸಿಕೊಳ್ಳಲು ಅದಕ್ಕೆ ಸಾಧ್ಯವಾಗಿಲ್ಲ. ನಮ್ಮ ಮನೆಗೆ ದಾಳಿ ಮಾಡಿದ ಈಡಿ 73 ಸಾವಿರ ರೂಪಾಯಿಯನ್ನು ಮಾತ್ರ ಪತ್ತೆ ಹಚ್ಚಿದೆ. ಹಾಗಿದ್ರೆ ಮದ್ಯ ನೀತಿಯಿಂದ ಕೋಟಿ ಕೋಟಿ ರೂಪಾಯಿ ಲಂಚ ಪಡೆಯಲಾಗಿದೆ ಎಂದು ಈಡಿ ಹೇಳುತ್ತಿರುವ ಹಣವಾದರೂ ಎಲ್ಲಿದೆ ಎಂದು ಸುನೀತ ಪ್ರಶ್ನಿಸಿದ್ದಾರೆ.