ನನ್ನ ತಾಯಿ ಭಾರತೀಯಳು, ಪಾಕಿಸ್ತಾನಕ್ಕೆ ಬರಲು ಅನುಮತಿ ಇಲ್ಲ: ಕಣ್ಣೀರು ಹಾಕಿದ ಪಾಕಿಸ್ತಾನಿ ಯುವತಿ! - Mahanayaka
12:50 AM Sunday 14 - September 2025

ನನ್ನ ತಾಯಿ ಭಾರತೀಯಳು, ಪಾಕಿಸ್ತಾನಕ್ಕೆ ಬರಲು ಅನುಮತಿ ಇಲ್ಲ: ಕಣ್ಣೀರು ಹಾಕಿದ ಪಾಕಿಸ್ತಾನಿ ಯುವತಿ!

pakistani
27/04/2025

ಚಂಡೀಗಢ: ‘ನನ್ನ ತಾಯಿ ಭಾರತೀಯಳು ಮತ್ತು ಅವರನ್ನು ಪಾಕಿಸ್ತಾನಕ್ಕೆ ನಮ್ಮೊಂದಿಗೆ ಬರಲು ಅನುಮತಿ ನೀಡಿಲ್ಲ. ಮುಂದೆ ಯಾವಾಗ ನೋಡುತ್ತೇನೆ ಎಂಬುದು ತಿಳಿದಿಲ್ಲ ಹೀಗಂತ ಪಾಕಿಸ್ತಾನದ ಯುವತಿಯೊಬ್ಬಳು ಕಣ್ಣೀರು ಹಾಕಿದ್ದಾಲೆ.


Provided by

ಪಹಲ್ಗಾಮ್ ನಲ್ಲಿ ಉಗ್ರರ ದಾಳಿಯಲ್ಲಿ ಅಮಾಯಕ ಪ್ರವಾಸಿಗರು ಬಲಿಯಾದ ಬೆನ್ನಲ್ಲೇ ಪಾಕಿಸ್ತಾನದ ಪ್ರಜೆಗಳು ಭಾರತ ಬಿಟ್ಟು ತಮ್ಮ ದೇಶಕ್ಕೆ ತೆರಳುವಂತೆ ಕೇಂದ್ರ ಸರ್ಕಾರ ಆದೇಶಿಸಿದೆ. ಅಲ್ಲದೇ ಭಾರತೀಯರು ಕೂಡ ಪಾಕಿಸ್ತಾನಕ್ಕೆ ತೆರಳದಂತೆ ಸೂಚನೆ ನೀಡಿತ್ತು. ಇದೀಗ ಭಾರತದಲ್ಲಿರುವ ನೂರಾರು ಪಾಕಿಸ್ತಾನಿಯರು ಪಂಜಾಬಿನ ಅಟ್ಟಾರಿ ವಾಘಾ ಗಡಿ ಮೂಲಕ ತಮ್ಮ ದೇಶಕ್ಕೆ ತೆರಳುತ್ತಿದ್ದಾರೆ. ಈ ನಡುವೆ ಯುವತಿಯೊಬ್ಬಳು ಮಾಧ್ಯಮಗಳ ಜೊತೆಗೆ ಮಾತನಾಡಿ ಕಣ್ಣೀರು ಹಾಕಿದ್ದಾಳೆ.

ಪಾಕಿಸ್ತಾನದ ಸರಿತಾ ಎಂಬ ಯುವತಿ ಮಾತನಾಡುತ್ತಾ, ತಾಯಿ ಭಾರತೀಯಳು ಮತ್ತು ಅವರನ್ನು ಪಾಕಿಸ್ತಾನಕ್ಕೆ ನಮ್ಮೊಂದಿಗೆ ಬರಲು ಅನುಮತಿ ನೀಡಿಲ್ಲ. ಮುಂದೆ ಯಾವಾಗ ನೋಡುತ್ತೇನೆ ಎಂಬುದು ತಿಳಿದಿಲ್ಲ ಎಂದು ಕಣ್ಣೀರು ಹಾಕಿದ್ದಾಳೆ.

ಭಾನುವಾರ ಭಾರತದಿಂದ ನಿರ್ಗಮಿಸಲು ಅಟ್ಟಾರಿ ಗಡಿಯಲ್ಲಿ ನೂರಾರು ಸಂಖ್ಯೆಯಲ್ಲಿ ಸೇರಿದ್ದರು. ಈ ಪೈಕಿ ಸರಿತಾಳ ಸಹೋದರ ಹಾಗೂ ತಂದೆ ಕೂಡಾ ಇದ್ದರು. ಸರಿತಾ, ಅವರ ಸಹೋದರ ಮತ್ತು ಅವರ ತಂದೆ ಪಾಕಿಸ್ತಾನಿಯರು. ಆದರೆ, ಅವರ ತಾಯಿ ಭಾರತೀಯರು. ನನ್ನ ತಾಯಿ ನಮ್ಮ ಜೊತೆಯಲ್ಲಿ ಬರಲು ಅನುಮತಿ ನೀಡುವುದಿಲ್ಲ ಎಂದು ಗಡಿಯಲ್ಲಿರುವ ಅಧಿಕಾರಿಗಳು ಹೇಳುತ್ತಿದ್ದಾರೆ. ಏಪ್ರಿಲ್ 29 ರಂದು ನಡೆಯಲಿದ್ದ ಸಂಬಂಧಿಕರ ವಿವಾಹ ಸಮಾರಂಭಕ್ಕಾಗಿ ನಮ್ಮ ಕುಟುಂಬಕ್ಕೆ ಭಾರತಕ್ಕೆ ಬಂದಿತ್ತು ಎಂದು ಸರಿತಾ ಹೇಳಿದರು.

1991ರಲ್ಲಿ ನನ್ನ ಪೋಷಕರು ವಿವಾಹವಾಗಿದ್ದರು. ನನ್ನ ತಾಯಿ ಭಾರತೀಯಳಾಗಿದ್ದು, ಭಾರತೀಯ ಪಾಸ್ ಪೋರ್ಟ್ ಹೊಂದಿರುವವರಿಗೆ ಪಾಕಿಸ್ತಾನಕ್ಕೆ ತೆರಳಲು ಅವಕಾಶ ನೀಡಲಾಗುವುದಿಲ್ಲ ಎಂದು ಅಧಿಕಾರಿಗಳು ಹೇಳುತ್ತಿರುವುದಾಗಿ ಅವರು ತಿಳಿಸಿದರು.

ಭಾರತದಿಂದ ಪಾಕಿಸ್ತಾನಕ್ಕೆ ತೆರಳುವವರ ಒಬ್ಬೊಬ್ಬರ ಕಥೆ ಒಂದೊಂದಾಗಿತ್ತು.  ಕೆಲವರು ಮದುವೆ ಇನ್ನಿತರ ಕಾರ್ಯಕ್ರಮಗಳಲ್ಲಿ ಭಾಗಿಯಾಗಲು ಬಂದಿದ್ದರು. ಆದ್ರೆ, ಪಾಕಿಸ್ತಾನಿ ಪ್ರಜೆಗಳಿಗೆ ನೀಡಲಾಗಿದ್ದ ನಿರ್ಗಮನದ ಗಡುವು ಏ. 26 ರಂದು ಕೊನೆಗೊಂಡಿರುವುದರಿಂದ ಅನಿವಾರ್ಯವಾಗಿ  ಹೊರಟು ಹೋದರು. ಪಾಕ್ ಪ್ರಜೆಗಳಿಗೆ ನೀಡಲಾಗಿರುವ ವೈದ್ಯಕೀಯ ವೀಸಾ ಏ. 29ರವರೆಗೆ ಮಾತ್ರ ಮಾನ್ಯವಾಗಿರುತ್ತದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ