ಮ್ಯಾನ್ಮಾರ್ ನಲ್ಲಿ ದೋಣಿ ಮುಳುಗಿ 17 ರೋಹಿಂಗ್ಯಾ ಮುಸ್ಲಿಮರು ಸಾವು - Mahanayaka
11:56 PM Monday 15 - December 2025

ಮ್ಯಾನ್ಮಾರ್ ನಲ್ಲಿ ದೋಣಿ ಮುಳುಗಿ 17 ರೋಹಿಂಗ್ಯಾ ಮುಸ್ಲಿಮರು ಸಾವು

10/08/2023

ಮಲೇಷ್ಯಾದಿಂದ ತೆರಳುತ್ತಿದ್ದ ರೋಹಿಂಗ್ಯಾ ದೋಣಿ ರಾಖೈನ್ ರಾಜ್ಯದ ರಾಜಧಾನಿ ಸಿಟ್ವೆ ಬಳಿ ಮಗುಚಿದ ಪರಿಣಾಮ ಕನಿಷ್ಠ 17 ಮಂದಿ ಸಾವನ್ನಪ್ಪಿದ್ದಾರೆ. ಮೃತರಲ್ಲಿ 10 ಮಹಿಳೆಯರು ಮತ್ತು ಏಳು ಪುರುಷರು ಸೇರಿದಂತೆ ಎಲ್ಲರೂ ರೋಹಿಂಗ್ಯಾ ಮುಸ್ಲಿಮರು ಎಂದು ಗುರುತಿಸಲಾಗಿದೆ.

ದೋಣಿಯಲ್ಲಿ ಒಟ್ಟು 58 ಜನರನ್ನು ಸಾಗಿಸಲಾಗುತ್ತಿತ್ತು. ಅದರಲ್ಲಿ ಎಂಟು ಜನರನ್ನು ಜೀವಂತವಾಗಿ ಪತ್ತೆಹಚ್ಚಿ ಅವರನ್ನು ಪೊಲೀಸ್ ಠಾಣೆಯಲ್ಲಿ ಇರಿಸಲಾಗಿದೆ ಎಂದು ಕಾನೂನು ಜಾರಿ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ದೋಣಿಯಲ್ಲಿದ್ದವರು ಸಮುದ್ರದಲ್ಲಿ ಚಂಡಮಾರುತವನ್ನು ಎದುರಿಸಿದರು. ಆವಾಗ ದೋಣಿ ದೊಡ್ಡ ಅಲೆಗಳ ಅಡಿಯಲ್ಲಿ ಮುಳುಗಿತು ಎಂದು ಅಧಿಕಾರಿಯೊಬ್ಬರು ಸಿಎನ್ಎನ್ ಗೆ ತಿಳಿಸಿದ್ದಾರೆ.

ಕಾಣೆಯಾದ 33 ಮಂದಿಯನ್ನು ಪತ್ತೆಹಚ್ಚಲು ಸ್ಥಳೀಯ ಪೊಲೀಸರು ಮತ್ತು ಶ್ವೆ ಯೌಂಗ್ ಮಟ್ಟಾ ಫೌಂಡೇಶನ್ ಪಾರುಗಾಣಿಕಾ ಗುಂಪು ಜಂಟಿ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಮೃತರು ಮ್ಯಾನ್ಮಾರ್ ನ ರಾಖೈನ್ ರಾಜ್ಯದ ವಿವಿಧ ಪಟ್ಟಣಗಳಿಗೆ ಸೇರಿದವರು ಎಂದು ವರದಿಯಾಗಿದೆ.

ರೋಹಿಂಗ್ಯಾಗಳನ್ನು ವಿಶ್ವದ ಅತ್ಯಂತ ಕಿರುಕುಳಕ್ಕೊಳಗಾದ ಸಮುದಾಯಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಬಂಡುಕೋರ ಗುಂಪಿನ ದಾಳಿಗೆ ಪ್ರತಿಕ್ರಿಯೆಯಾಗಿ ಮ್ಯಾನ್ಮಾರ್ ಮಿಲಿಟರಿ ಕಾರ್ಯಾಚರಣೆಯನ್ನು ಪ್ರಾರಂಭಿಸಿದಾಗಿನಿಂದ ಆಗಸ್ಟ್ 2017 ರಿಂದ ಲಕ್ಷಾಂತರ ರೋಹಿಂಗ್ಯಾ ಮುಸ್ಲಿಮರು ಬೌದ್ಧ ಬಹುಸಂಖ್ಯಾತ ಮ್ಯಾನ್ಮಾರ್ ನಿಂದ ಬಾಂಗ್ಲಾದೇಶದ ನಿರಾಶ್ರಿತರ ಶಿಬಿರಗಳಿಗೆ ಪಲಾಯನ ಮಾಡಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ74835 51849 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/BnbLYSQaXK1Hate4P0Bt3B

ಯೂಟ್ಯೂಬ್ ಚಾನೆಲ್ ಸಬ್ಸ್’ಕ್ರೈಬ್ ಮಾಡಿ: https://www.youtube.com/channel/UCTTKjhIcEgYKLMGVKaXU3-w

ಗೂಗಲ್ ನ್ಯೂಸ್ ನಲ್ಲಿ ಫಾಲೋ ಮಾಡಿ: https://news.google.com/publications/CAAqBwgKMICOwgswoqnZAw

ಇತ್ತೀಚಿನ ಸುದ್ದಿ