ಮೈಸೂರಿನಲ್ಲಿ ಅಬ್ಬರಿಸಿದ ಮಳೆ: ಮರ ಉರುಳಿ ಬಿದ್ದು ಮಹಿಳೆ ಸಾವು - Mahanayaka
6:23 AM Tuesday 9 - September 2025

ಮೈಸೂರಿನಲ್ಲಿ ಅಬ್ಬರಿಸಿದ ಮಳೆ: ಮರ ಉರುಳಿ ಬಿದ್ದು ಮಹಿಳೆ ಸಾವು

rain
02/04/2022

ಮೈಸೂರು: ಮೈಸೂರಿನ ವಿವಿಧ ಭಾಗಗಳಲ್ಲಿ ನಿನ್ನೆ ಗಾಳಿ ಸಹಿತ ಭಾರೀ ಮಳೆಯಾಗಿದ್ದು,  ಪಿರಿಯಾಪಟ್ಟಣದಲ್ಲಿ ಮರ ಉರುಳಿ ಬಿದ್ದು ರೈತ ಮಹಿಳೆಯೊಬ್ಬರು ದಾರುಣವಾಗಿ ಸಾವನ್ನಪ್ಪಿದ ಘಟನೆ ನಡೆದಿದೆ.


Provided by

30 ವರ್ಷ ವಯಸ್ಸಿನ ಪುಟ್ಟಮ್ಮ ಸ್ವಾಮಿಗೌಡ ಎಂಬವರು ಮೃತಪಟ್ಟ ರೈತ ಮಹಿಳೆಯಾಗಿದ್ದಾರೆ. ಮನೆಯ ಮುಂದೆ ಕಟ್ಟಿದ್ದ ಮೇಕೆ, ದನಗಳನ್ನು ಕೊಟ್ಟಿಗೆಗೆ ಕಟ್ಟಲು ತೆರಳಿದ ವೇಳೆ ಮರ ಉರುಳಿ ಬಿದ್ದಿದ್ದು, ಪುಟ್ಟಮ್ಮ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎಂದು ತಿಳಿದು ಬಂದಿದೆ.

ಮಳೆಯ ಅಬ್ಬರಕ್ಕೆ ಪಿರಿಯಾಪಟ್ಟಣದ ನಾನಾ ಭಾಗಗಳಲ್ಲಿ ವಿದ್ಯುತ್ ಕಂಬಗಳು ಧರೆಗುರಳಿವೆ. ತಾಲೂಕಿನ ವಿವಿಧೆಡೆಗಳಲ್ಲಿ ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ನಾಪತ್ತೆಯಾಗಿದ್ದ ಪೌರ ಕಾರ್ಮಿಕನ ಮೃತದೇಹ ಪತ್ತೆ

ಯುಗಾದಿ ದಿನವೂ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ: ಎಲ್ಲೆಲ್ಲಿ ಎಷ್ಟು ಬೆಲೆ ಏರಿಕೆ?

ಎಪ್ರಿಲ್ ತಿಂಗಳು ‘ದಲಿತ ಇತಿಹಾಸ ತಿಂಗಳು’ ಎಂದು ಘೋಷಿಸಿದ ಕೆನಡಾದ ಬ್ರಿಟಿಷ್ ಕೊಲಂಬಿಯಾ ಸರ್ಕಾರ

ಹಿಜಾಬ್, ಹಲಾಲ್  ಬಗ್ಗೆ ಮಾತನಾಡಿದರೆ ಏನಾಗುತ್ತೋ ಅನ್ನೋದು ಬೇಡ: ಕಾಂಗ್ರೆಸ್ ನಾಯಕರಿಗೆ ಸಿದ್ದರಾಮಯ್ಯ ಹೇಳಿದ್ದೇನು?

ತಂದೆಯ ಕೊಲೆ ಪ್ರಕರಣ: ಪುತ್ರ ದೋಷಿ ಎಂದು ತೀರ್ಪು ನೀಡಿದ ನ್ಯಾಯಾಲಯ

ಇತ್ತೀಚಿನ ಸುದ್ದಿ