ಎನ್. ಮಹೇಶ್ ಹಿಂದೂ ಧರ್ಮಕ್ಕೆ ಬೈದು ಶಾಸಕರಾದವರು! | ಎನ್.ಮಹೇಶ್ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ಶಾಸಕ - Mahanayaka

ಎನ್. ಮಹೇಶ್ ಹಿಂದೂ ಧರ್ಮಕ್ಕೆ ಬೈದು ಶಾಸಕರಾದವರು! | ಎನ್.ಮಹೇಶ್ ವಿರುದ್ಧ ಅಪಸ್ವರ ಎತ್ತಿದ ಬಿಜೆಪಿ ಶಾಸಕ

mp kumaraswamy n mahesh
24/08/2021


Provided by

ಚಿಕ್ಕಮಗಳೂರು: ಬಿಜೆಪಿಯಲ್ಲಿ ಒಂದು ಸುತ್ತಿನ ಸಚಿವ ಸ್ಥಾನಾಕಾಂಕ್ಷಿಗಳ ಫೈಟಿಂಗ್ ನಡೆದು ಎಲ್ಲವೂ ಸಮಾಧಾನವಾಗುತ್ತಿದೆ ಎಂದು ಅಂದುಕೊಳ್ಳುತ್ತಿರುವಾಗಲೇ ಮತ್ತೊಂದು ಸುತ್ತಿನ ಫೈಟ್ ಆರಂಭವಾಗುವ ಲಕ್ಷಣಗಳು ಕಂಡು ಬಂದಿದೆ.

ಕೊಳ್ಳೇಗಾಲ ಶಾಸಕ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ಸಿಗುವ ಸಾಧ್ಯತೆಗಳಿಗೆ ಎನ್ನುವ ಸುದ್ದಿಯ ನಡುವೆಯೇ, ಎನ್. ಮಹೇಶ್ ಗೆ ಸಚಿವ ಸ್ಥಾನ ನೀಡುವುದಕ್ಕೆ  ಮೂಡಿಗೆರೆ ಶಾಸಕ ಎಂ.ಪಿ.ಕುಮಾರಸ್ವಾಮಿ ವಿರೋಧ ವ್ಯಕ್ತಪಡಿಸಿದ್ದು, ಎನ್.ಮಹೇಶ್ ಹಿಂದೂ ಧರ್ಮವನ್ನು ಮನು ಧರ್ಮ ಎಂದು ಹೇಳಿ ಜಾತಿ- ಧರ್ಮ ಎತ್ತಿಕಟ್ಟಿ ಅವರು ಶಾಸಕರಾಗಿದ್ದಾರೆ ಎಂದು ಆರೋಪಿಸಿದ್ದಾರೆ.

ಚಿಕ್ಕಮಗಳೂರಿನಲ್ಲಿ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, ಎಲ್ಲಿಯೂ ನೆಲೆ ಇಲ್ಲದೇ ಎನ್.ಮಹೇಶ್ ನೆಲೆಯನ್ನು ಹುಡುಕಿಕೊಂಡು ಬಿಜೆಪಿಗೆ ಬಂದಿದ್ದಾರೆ. ಪಕ್ಷಕ್ಕಾಗಿ ದುಡಿದವರನ್ನು ಸಚಿವರನ್ನಾಗಿ ಮಾಡಲಿ. ನಾನು ಏನಾದರೂ ಹೇಳಿಕೆ ಕೊಟ್ಟರೆ ಪಕ್ಷಕ್ಕೆ ಎಚ್ಚರಿಕೆ ಕೊಟ್ಟಂತಾಗುತ್ತದೆ. ಹಾಗಾಗಿ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎನ್ನುವ ಮೂಲಕ ಪರೋಕ್ಷವಾಗಿ ಎನ್.ಮಹೇಶ್ ಅವರಿಗೆ ಸಚಿವ ಸ್ಥಾನ ನೀಡುವುದಕ್ಕೆ ವಿರೋಧ ವ್ಯಕ್ತಪಡಿಸಿದ್ದಾರೆ.

ಕೊಳ್ಳೇಗಾಲ ಶಾಸಕ ಎನ್. ಮಹೇಶ್ ಹಿಂದೂ ಧರ್ಮದ ಬಗ್ಗೆ ಹೀನಾಮಾನವಾಗಿ ಬೈದಿದ್ದರು. ಹಿಂದೂ ಧರ್ಮವನ್ನು ಮನು ಧರ್ಮ ಎಂದು ಹೇಳಿ ಜಾತಿ- ಧರ್ಮ ಎತ್ತಿಕಟ್ಟಿ ಅವರು ಶಾಸಕರಾಗಿದ್ದಾರೆ. ಒಂದು ಜನಾಂಗ, ಮತ್ತೊಂದು ಜನಾಂಗಗಳ ನಡುವೆ ಬಿರುಕುಂಟು ಮಾಡಿ ಶಾಸಕರಾಗಿದ್ದಾರೆ. ಅಂತಹವರನ್ನು ಬಿಜೆಪಿಗೆ ಸೇರಿಸಿಕೊಂಡಿದ್ದಾರೆ. ಹಿಂದೂ ಧರ್ಮವನ್ನು, ವೈದಿಕ ಧರ್ಮವನ್ನು ಬೈದಿದ್ದಕ್ಕೆ ಬಹುಮಾನವಾಗಿ ಮಂತ್ರಿ ಮಾಡುತ್ತಾರೆ ಎಂದೇನಿಲ್ಲ, ಹಿಂದೂ ಧರ್ಮವನ್ನು ಮನುಧರ್ಮ ಎಂದವರನ್ನು ಮಂತ್ರಿ ಮಾಡಲು ವಿರೋಧವಿದೆ ಎಂದು ಅವರು ಹೇಳಿದರು.

ಇನ್ನಷ್ಟು ಸುದ್ದಿಗಳು…

ತೆನೆ ಇಳಿಸಿ, ಕೈ ಹಿಡಿಯುತ್ತಾರಾ ಜಿ.ಟಿ.ದೇವೇಗೌಡ? | ಅವಮಾನಗಳಿಂದ ಬೇಸತ್ತು ಜೆಡಿಎಸ್ ಬಿಡಲು ತೀರ್ಮಾನ!

“ನನ್ನನ್ನು ಮದುವೆಗೆ ಯಾಕೆ ಕರೆದಿಲ್ಲ” ಎಂದು ಪ್ರಶ್ನಿಸಿ ನವವಿವಾಹಿತನಿಗೆ ಹಿಗ್ಗಾಮುಗ್ಗಾ ಥಳಿಸಿದ ಸಂಬಂಧಿಕ!

ಮೊಮ್ಮಗಳಿಗೆ ಮೇಕೆ ಗುದ್ದಿದ್ದನ್ನು ಪ್ರಶ್ನೆ ಮಾಡಲು ಹೋದ ವೃದ್ಧ ದಾರುಣ ಸಾವು!

ಈ ಬಾರಿ ಆನ್ ಲೈನ್ ನಲ್ಲೇ ವಿದ್ಯಾರ್ಥಿಗಳಿಗೆ ಬಸ್ ಪಾಸ್ ವಿತರಣೆ: ಸಚಿವ ಬಿ.ಶ್ರೀರಾಮುಲು

ರವಿಚಂದ್ರನ್ ಅವರ “ಯಮ್ಮೊ ಯಮ್ಮೋ  ನೋಡ್ಬಾರ್ದನ್ನು ನಾ ನೋಡ್ಡೆ” ಅನ್ನೋ ಹಾಡು ಇಷ್ಟ ಎಂದ ನಟಿ ನವ್ಯಾ

ಸಹೋದರಿಯ ಸ್ನೇಹಿತೆಯ ಮೇಲೆ ಅತ್ಯಾಚಾರ ನಡೆಸಿದ ಕಾಮುಕ!

ಇತ್ತೀಚಿನ ಸುದ್ದಿ