ತಮಿಳುನಾಡು: ನದಿಯಲ್ಲಿ ಮುಳುಗಿ 6 ವಿದ್ಯಾರ್ಥಿಗಳು ಸಾವು, ಇಬ್ಬರ ರಕ್ಷಣೆ - Mahanayaka
11:37 AM Wednesday 22 - October 2025

ತಮಿಳುನಾಡು: ನದಿಯಲ್ಲಿ ಮುಳುಗಿ 6 ವಿದ್ಯಾರ್ಥಿಗಳು ಸಾವು, ಇಬ್ಬರ ರಕ್ಷಣೆ

tamilnadu
19/01/2022

ಚೆನ್ನೈ: ದೇವಾಲಯಕ್ಕೆ ಹೋಗಿದ್ದ ಆರು ವಿದ್ಯಾರ್ಥಿಗಳು ಅಮರಾವತಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿರುವ ಘಟನೆ ತಮಿಳುನಾಡಿನ ತಿರುಪ್ಪೂರ್ ಜಿಲ್ಲೆಯ ಧಾರಾಪುರಂನಲ್ಲಿ ನಡೆದಿರುವ ಬಗ್ಗೆ ವರದಿಯಾಗಿದೆ.

ಮೃತರಲ್ಲಿ ಐವರು ಶಾಲಾ ವಿದ್ಯಾರ್ಥಿಗಳು ಮತ್ತು ಒಬ್ಬ ಕಾಲೇಜು ವಿದ್ಯಾರ್ಥಿ ಎಂಬುದು ತಿಳಿದುಬಂದಿದೆ. ಪೊಲೀಸರ ಮಾಹಿತಿ ಪ್ರಕಾರ ಮೃತರನ್ನು ಎಂ.ಅಮಿರ್ತ ಕೃಷ್ಣನ್(18), ಆರ್.ಶ್ರೀಧರ್(17), ಆರ್.ರಂಜಿತ್(20), ಟಿ.ಯುವನ್(19), ಟಿ.ಮೋಹನ್(17) ಮತ್ತು ಎಂ.ಚಕ್ರವರ್ಮಣಿ(18) ಎಂದು ಗುರುತಿಸಲಾಗಿದೆ. ಇಬ್ಬರನ್ನು ಸ್ಥಳೀಯರು, ಅಗ್ನಿಶಾಮಕ ಮತ್ತು ರಕ್ಷಣಾ ಸಿಬ್ಬಂದಿ ರಕ್ಷಿಸಿದ್ದಾರೆ ಎಂದು ತಿಳಿದುಬಂದಿದೆ. ರಕ್ಷಿಸಲ್ಪಟ್ಟ ಇಬ್ಬರು ವಿದ್ಯಾರ್ಥಿಗಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಈ ಎಲ್ಲಾ ವಿದ್ಯಾರ್ಥಿಗಳು ಗುಂಪು ದಿಂಡಿಗಲ್ ಜಿಲ್ಲೆಯ ಮಂಪಾರೈನಲ್ಲಿರುವ ದೇವಸ್ಥಾನಕ್ಕೆ ತೆರಳಿದ್ದರು. ವಾಪಸಾಗುವಾಗ ಅಮರಾವತಿ ನದಿಯಲ್ಲಿ ಸ್ನಾನ ಮಾಡಲು ತೆರಳಿದಾಗ ಈ ಘಟನೆ ಸಂಭವಿಸಿದೆ.

ಅಮರಾವತಿ ನದಿಗೆ ಇಳಿದ ಕೂಡಲೇ ನೀರಿನ ಸಳೆತಕ್ಕೆ ಸಿಲುಕಿದ ವಿದ್ಯಾರ್ಥಿಗಳು ಸಹಾಯಕ್ಕಾಗಿ ಕಿರುಚಿದರು. ಜೀವಾ ಮತ್ತು ಸರಣ್ ಎಂಬ ಇಬ್ಬರನ್ನು ರಕ್ಷಿಸಲಾಯಿತು. ಉಳಿದ 6 ಮಂದಿ ನದಿಯ ನೀರಿನಲ್ಲಿ ಮುಳುಗಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಐಎನ್‌ ಎಸ್ ರಣವೀರ್ ಯುದ್ಧನೌಕೆಯಲ್ಲಿ ಸ್ಫೋಟ: ಮೂವರು ನೌಕಾ ಸಿಬ್ಬಂದಿ ಸಾವು

ಕೊವಿಡ್ ಗೆ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಬಲಿ

ಚಿಕನ್ ಚಿಲ್ಲಿ, ಬಿರಿಯಾನಿ ತಿನ್ನುವ ಸ್ಪರ್ಧೆ: 40 ಮಂದಿಯ ವಿರುದ್ಧ ಕೇಸ್!

ನರಗುಂದದಲ್ಲಿ ಮುಸ್ಲಿಮ್ ಯುವಕನ ಹತ್ಯೆ ಪ್ರಕರಣ:  ಕಠಿಣ ಕ್ರಮಕ್ಕೆ ಪಾಪ್ಯುಲರ್ ಫ್ರಂಟ್ ಆಗ್ರಹ

ಡಿ.ಜೆ.ಹಳ್ಳಿ ಗಲಭೆ ಪ್ರಕರಣ: ಹೈಕೋಟ್‌ನಿಂದ ಆರೋಪಿಯ ಜಾಮೀನು ಅರ್ಜಿ ವಜಾ

ಇತ್ತೀಚಿನ ಸುದ್ದಿ