ನದಿಯಲ್ಲಿ ಸ್ನಾನ ಮಾಡುತ್ತಿದ್ದ 7 ವರ್ಷದ ಬಾಲಕನನ್ನು ನುಂಗಿದ ಮೊಸಳೆ - Mahanayaka

ನದಿಯಲ್ಲಿ ಸ್ನಾನ ಮಾಡುತ್ತಿದ್ದ 7 ವರ್ಷದ ಬಾಲಕನನ್ನು ನುಂಗಿದ ಮೊಸಳೆ

crocodile
12/07/2022


Provided by

ಮಧ್ಯಪ್ರದೇಶ: ಮಧ್ಯಪ್ರದೇಶದ ಶಿಯೋಪುರ ಜಿಲ್ಲೆಯ ಚಂಬಲ್ ನದಿಯಲ್ಲಿ ಸ್ನಾನ ಮಾಡುತ್ತಿದ್ದ 7 ವರ್ಷದ ಬಾಲಕನನ್ನು ಮೊಸಳೆ ನುಂಗಿದೆ.  ಮೊಸಳೆ ಮಗುವನ್ನು ನದಿಗೆ ಎಳೆದೊಯ್ದಿದೆ.  ಗ್ರಾಮಸ್ಥರು ರಕ್ಷಿಸಲು ಯತ್ನಿಸಿದರೂ ಪ್ರಯೋಜನವಾಗಲಿಲ್ಲ.

ಆದರೆ ಅರಣ್ಯ ಇಲಾಖೆ ಹೇಳುವ ಪ್ರಕಾರ ಮೊಸಳೆ ದಾಳಿ ಮಾಡಬಹುದು ಆದರೆ ನುಂಗಲು ಸಾಧ್ಯವಿಲ್ಲಎನ್ನುತ್ತಾರೆ. ಶಿಯೋಪುರ ಜಿಲ್ಲೆಯ ರಘುನಾಥಪುರ ಪ್ರದೇಶದ ರೆಜೆತಾ ಘಾಟ್‌ ನಲ್ಲಿ ಈ ಘಟನೆ ನಡೆದಿದೆ. ಸೋಮವಾರ ಬೆಳಗ್ಗೆ ಲಕ್ಷ್ಮಣ್ ಸಿಂಗ್ ಕೇವತ್ ಅವರ ಪುತ್ರ ಅಂತರ್ ಸಿಂಗ್ ಕೇವತ್ ಚಂಬಲ್ ನದಿಗೆ ಸ್ನಾನಕ್ಕೆ ತೆರಳಿದ್ದರು.  ಅಷ್ಟರಲ್ಲಿ ಮೊಸಳೆ ಮಗುವನ್ನು ನದಿಗೆ ಎಳೆದೊಯ್ದಿದೆ.ಘಟನೆ ನಡೆದ ತಕ್ಷಣ ಸ್ಥಳೀಯರು ಹಾಗೂ ಕುಟುಂಬಸ್ಥರು ಮಗುವಿಗಾಗಿ ಹುಡುಕಾಟ ಆರಂಭಿಸಿದರೂ ಪತ್ತೆಯಾಗಿರಲಿಲ್ಲ.

ಸ್ಥಳದಲ್ಲಿದ್ದ ಸ್ಥಳೀಯರು ದೊಣ್ಣೆ, ಹಗ್ಗ, ಬಲೆಗಳನ್ನು ಬಳಸಿ ಮೊಸಳೆಯನ್ನು ಹಿಡಿದು ದಡಕ್ಕೆ ತಂದಿದ್ದಾರೆ.  ಅಷ್ಟರಲ್ಲಿ ಅಲಿಗೇಟರ್ ವಿಭಾಗದ ತಂಡ ಸ್ಥಳಕ್ಕೆ ತಲುಪಿತು.  ಮೊಸಳೆ ಮಗುವಿನ ಮೇಲೆ ದಾಳಿ ಮಾಡಬಹುದು ಆದರೆ ನುಂಗಲು ಸಾಧ್ಯವಿಲ್ಲ ಎಂದು ಇಲಾಖೆ ತಂಡ ಗ್ರಾಮಸ್ಥರಿಗೆ ವಿವರಿಸಿದೆ.  ಆದರೆ ಗ್ರಾಮಸ್ಥರು ಕಿವಿಗೊಡಲಿಲ್ಲ.

ಮೊಸಳೆಯ ಹೊಟ್ಟೆಯಲ್ಲಿ ಮಗುವಿದೆ ಎಂದು ಅವರು ಹೇಳುತ್ತಾರೆ.  ಗ್ರಾಮಸ್ಥರು ಮೊಸಳೆಯನ್ನು ಕಟ್ಟಿ ಸಂಜೆಯವರೆಗೂ ದಡದಲ್ಲಿಯೇ ಕುಳಿತಿದ್ದರು.  ಮಗು ಹೊರಬರುವುದನ್ನೇ ಗ್ರಾಮಸ್ಥರು ಕಾಯುತ್ತಿದ್ದಾರೆ.  ಎಸ್‌ ಡಿಆರ್‌ ಎಫ್ ತಂಡವೂ ಮಗುವಿಗಾಗಿ ಹುಡುಕಾಟ ನಡೆಸುತ್ತಿದೆ ಆದರೆ ಇದುವರೆಗೆ ಯಾವುದೇ ಕುರುಹು ಪತ್ತೆಯಾಗಿಲ್ಲ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ