ನಡು ರಸ್ತೆಯಲ್ಲಿ ಮಹಿಳೆಯ ಭೀಕರ ಹತ್ಯೆ; ಗಾಯದಿಂದ ನರಳುತ್ತಿದ್ದ ಮಹಿಳೆಗೆ ಒಬ್ಬರೂ ಸಹಾಯ ಮಾಡಲಿಲ್ಲ! - Mahanayaka
11:13 PM Saturday 13 - September 2025

ನಡು ರಸ್ತೆಯಲ್ಲಿ ಮಹಿಳೆಯ ಭೀಕರ ಹತ್ಯೆ; ಗಾಯದಿಂದ ನರಳುತ್ತಿದ್ದ ಮಹಿಳೆಗೆ ಒಬ್ಬರೂ ಸಹಾಯ ಮಾಡಲಿಲ್ಲ!

28/02/2021

ಬೆಂಗಳೂರು: ಹಾಡ ಹಗಲೇ ಮಹಿಳೆಯೋರ್ವರನ್ನು ನಡು ರಸ್ತೆಯಲ್ಲಿ ಚೂರಿಯಿಂದ ಇರಿದು ಭೀಕರವಾಗಿ ಹತ್ಯೆ ಮಾಡಿರುವ ಘಟನೆ ಬೆಂಗಳೂರಿನ ಬ್ರೂಕ್ ಫೀಲ್ಡ್ ನಲ್ಲಿ ನಡೆದಿದೆ.


Provided by

ಮನೆಯಿಂದ ಮಹಿಳೆ ಹೊರ ಬರುತ್ತಿದ್ದಂತೆಯೇ ಹೊಂಚು ಹಾಕಿ ಕುಳಿತಿದ್ದ ದುಷ್ಕರ್ಮಿಗಳು ಚಾಕುವಿನಿಂದ ಮನಬಂದಂತೆ ಚುಚ್ಚಿದ್ದಾರೆ. ಬಳಿಕ ಸ್ಥಳದಲ್ಲಿಯೇ ಚಾಕುವನ್ನು ಬಿಟ್ಟು ಓಡಿ ಹೋಗಿದ್ದಾರೆ.

ಮಹಿಳೆ ತೀವ್ರ ಗಾಯಗಳಿಂದ ಸ್ಥಳದಲ್ಲಿ ಬಿದ್ದ ನರಳಾಡುತ್ತಿದ್ದರೂ ಯಾರೊಬ್ಬರೂ ಸಹಾಯಕ್ಕೆ ಬರಲಿಲ್ಲ. ಇದರಿಂದಾಗಿ ಗಂಭೀರ ಗಾಯಗಳಿಂದ ನರಳಿದ ಮಹಿಳೆ ಕೊನೆಯುಸಿರೆಳೆಸಿದ್ದಾರೆ.

ಘಟನಾ ಸ್ಥಳಕ್ಕೆ ಹೆಚ್ ಎಎಲ್ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಪತ್ತೆಗೆ ಮಾಹಿತಿ ಸಂಗ್ರಹಿಸುತ್ತಿದ್ದಾರೆ. ಸಾರ್ವಜನಿಕರು ಮಹಿಳೆಯನ್ನು ತಕ್ಷಣವೇ ಆಸ್ಪತ್ರೆಗೆ ದಾಖಲಿಸಿದ್ದರೆ, ಮಹಿಳೆ ಬದುಕುವ ಸಾಧ್ಯತೆಗಳಿತ್ತು. ಆದರೆ ಸಾರ್ವಜನಿಕರು ಕೊಲೆಗಾರರಿಗಿಂತಲೂ ನಿಷ್ಕರುಣಿಗಳಾಗಿದ್ದರೇ ಎನ್ನುವ ಪ್ರಶ್ನೆಗಳು ಇದೀಗ ಕೇಳಿ ಬಂದಿವೆ.

ಇತ್ತೀಚಿನ ಸುದ್ದಿ