ಹಿಜಾಬ್ ವಿವಾದ: ಶಾಲೆಗೆ ನಾಗಸಾಧುಗಳ ಥರ ಬರ್ತೀನಿ ಅನ್ನೋಕ್ಕಾಗಲ್ಲ:  ಸಿ.ಟಿ.ರವಿ - Mahanayaka
8:23 AM Wednesday 15 - October 2025

ಹಿಜಾಬ್ ವಿವಾದ: ಶಾಲೆಗೆ ನಾಗಸಾಧುಗಳ ಥರ ಬರ್ತೀನಿ ಅನ್ನೋಕ್ಕಾಗಲ್ಲ:  ಸಿ.ಟಿ.ರವಿ

c t ravi
17/02/2022

ಬೆಂಗಳೂರು:  ಕುಂಕುಮ ಬಳೆಯಂತಹ ಆಲಂಕಾರಿಕ ವಸ್ತುಗಳ ಬಗ್ಗೆ ಪ್ರಶ್ನೆ ಮಾಡೋಕೆ ಇವರು ಯಾರ್ರಿ? ಎಂದು  ಬಿಜೆಪಿ ನಾಯಕ ಸಿ.ಟಿ.ರವಿ ಪ್ರಶ್ನಿಸಿದರು.


Provided by

ಸಮವಸ್ತ್ರ ವಿವಾದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಸಿ.ಟಿ.ರವಿ, ನಾಗಸಾಧು, ದಿಗಂಬರ, ಸರ್ವಜ್ಞ ಪರಂಪರೆಯ ಅನುಯಾಯಿಗಳಂತೆ ಶಾಲೆಗೆ ಬರಲು ಸಾಧ್ಯವಿಲ್ಲ ಎಂದು ಹೇಳಿದರು.

ಇಲ್ಲಿ ಪ್ರಶ್ನೆ ಇರುವುದು ಶಾಲೆ ಕಾಲೇಜುಗಳಿಗೆ ಸಮವಸ್ತ್ರ ಧರಿಸಿ ಬರಬೇಕು ಅನ್ನುವುದು. ಹೊರಗಡೆ ಹಿಜಾಬ್ ಆದ್ರೂ ಹಾಕಿಕೊಳ್ಳಲಿ, ನಾಗ ಸಾಧುಗಳಿದ್ದಾರೆ, ಹಂಗಾದ್ರೂ ಹೋಗಲಿ, ನಾಗಸಾಧುಗಳ ಪ್ರಕಾರ, ಆದರೆ, ಶಾಲೆಯಲ್ಲಿ ಯೂನಿಫಾರ್ಮ್ ಇರಬೇಕು ಎಂದರು.

ಶಾಲೆಯಲ್ಲಿ ನಾಗಸಾಧುಗಳ ಥರ ಬರ್ತೀನಿ ಅನ್ನೋಕ್ಕಾಗಲ್ಲ, ಶಾಲೆಯಲ್ಲಿ ದಿಗಂಬರರ ಪರಂಪರೆಯ ಅನುಯಾಯಿಗಳ ಥರ ಬರ್ತಿನಿ ಅನ್ನೋಕ್ಕಾಗಲ್ಲ. ಶಾಲೆಯಲ್ಲಿ ನಾನು ಸರ್ವಜ್ಞ ಪರಂಪರೆಯ ಅನುಯಾಯಿಯಂತೆ ಬರ್ತೀನಿ ಅನ್ನೋಕ್ಕಾಗಲ್ಲ ಎಂದರು.

ಈ ವೇಳೆ ಕಾಲೇಜಿನಲ್ಲಿ ಕೇಸರಿ ಬಾವುಟದ ವಿಚಾರವಾಗಿ ಪತ್ರಕರ್ತರು ಪ್ರಶ್ನಿಸಿದಾಗ, ಕ್ಷಣಕಾಲ ತಡವರಿಸಿದ ಸಿ.ಟಿ.ರವಿ, ಶಾಲಾ ಕಾಲೇಜುಗಳಲ್ಲಿ ಕೇಸರಿ ಬಳಸಬಾರದು ಎಂದು ಹೈಕೋರ್ಟ್ ಹೇಳಿದಾಗ ಕೇಸರಿ ಧರಿಸಿದವರು ಪಾಲಿಸಿದರು. ಹಿಜಾಬ್ ಧರಿಸಿದವರು ಯಾಕೆ ಪಾಲಿಸಿಲ್ಲ, ಅವರ ಮೂಗಿನ ನೇರಕ್ಕೆ ತೀರ್ಪು ಬಂದರೆ ಮಾತ್ರ ನ್ಯಾಯಾಲಯದ ತೀರ್ಪಾ? ಎಂದು ಪ್ರಶ್ನಿದರು.

ಏನು ಬೆದರಿಕೆ ಹಾಕ್ತರೇರ್ನಿ? ನಾನು ಸರ್ಕಾರಕ್ಕೆ ಆಗ್ರಹಿಸ್ತೇನೆ,  ಎಲ್ಲರೂ ನ್ಯಾಯಾಲಯದ ತೀರ್ಪು ಪಾಲಿಸಬೇಕು ಎಂದು ಅವರು ಹೇಳಿದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಬ್ರೆಜಿಲ್: ಭೀಕರ ಪ್ರವಾಹ, ಭೂ ಕುಸಿತಕ್ಕೆ 94ಕ್ಕೂ ಹೆಚ್ಚು ಮಂದಿ ಬಲಿ

ಬಸ್‌- ಬೈಕ್ ಮುಖಾಮುಖಿ ಡಿಕ್ಕಿ: ಸವಾರರಿಬ್ಬರು ಸ್ಥಳದಲ್ಲೇ ಸಾವು

ಮಲಯಾಳಂನ ಖ್ಯಾತ ನಟ ಕೊಟ್ಟಾಯಂ ಪ್ರದೀಪ್ ನಿಧನ

ತಂದೆಯ ತಿಥಿ ಕಾರ್ಯದ ದಿನವೇ ಗ್ಯಾಸ್‌ ಸಿಲಿಂಡರ್‌ ಸ್ಫೋಟಗೊಂಡು ಮಗಳು ಸ್ಥಳದಲ್ಲೇ ಸಾವು

ಮೇಲಾಧಿಕಾರಿಗಳ ಹೆಸರು ಬರೆದಿಟ್ಟು ಅಂಗನವಾಡಿ ಕಾರ್ಯಕರ್ತೆ ಆತ್ಮಹತ್ಯೆಗೆ ಯತ್ನ

ಇತ್ತೀಚಿನ ಸುದ್ದಿ