ಮಂಗಳೂರು: ನಾಗಬನ ಭಗ್ನಗೊಳಿಸಿದ ಪ್ರಕರಣ | 8 ಆರೋಪಿಗಳು ಅರೆಸ್ಟ್ - Mahanayaka
6:24 AM Wednesday 20 - August 2025

ಮಂಗಳೂರು: ನಾಗಬನ ಭಗ್ನಗೊಳಿಸಿದ ಪ್ರಕರಣ | 8 ಆರೋಪಿಗಳು ಅರೆಸ್ಟ್

mangalore
27/11/2021


Provided by

ಮಂಗಳೂರು: ನಗರದ ಕೂಳೂರು ಮತ್ತು ಕೋಡಿಕಲ್ ನಾಗಬನಗಳಲ್ಲಿ ನಾಗನ ಕಲ್ಲುಗಳನ್ನು ಭಗ್ನಗೊಳಿಸಿದ ಆರೋಪದಲ್ಲಿ 8 ಮಂದಿ ಆರೋಪಿಗಳನ್ನು ಮಂಗಳೂರು ನಗರ ಪೊಲೀಸರು ಬಂಧಿಸಿದ್ದು, ಆರೋಪಿಗಳು ಶಾಂತಿ ಕದಡುವ ಉದ್ದೇಶದಿಂದ ಈ ಕೃತ್ಯ ನಡೆಸಿದ್ದರು ಎಂದು ಆರೋಪಿಸಲಾಗಿದೆ.

ಈ ಬಗ್ಗೆ ಶನಿವಾರ ಮಂಗಳೂರು ನಗರ ಪೊಲೀಸ್ ಆಯುಕ್ತ ಶಶಿ ಕುಮಾರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ನಾಗಬನಕ್ಕೆ ಹಾನಿ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಕುರಿತು ಮಾಹಿತಿ ನೀಡಿದರು.

ಕಾವೂರು ಶಾಂತಿನಗರ ಮಸೀದಿ ಬಳಿಯ ಸಫ್ವಾನ್ ಯಾನೆ ಚಪ್ಪು, ಶಾಂತಿನಗರದ ಮೊಹಮ್ಮದ್ ಸುಹೈಬ್, ನಿಖಿಲೇಶ್, ಕೂಳೂರು ಪಂಜಿಮೊಗರು ಗ್ರಾಮದ ಪ್ರವೀಣ್ ಅನಿಲ್ ಮೊಂತೆರೋ, ಸುರತ್ಕಲ್ ನ ಜಯಂತ ಕುಮಾರ್, ಬಂಟ್ವಾಳದ ಪಡೂರು ಗ್ರಾಮದ ಪ್ರತೀಕ್, ಕೂಳೂರು ಪಡುಕೋಡಿ ಗ್ರಾಮದ ಮಂಜುನಾಥ್ ಪೂಜಾರಿ  ಹಾಗೂ ಹಾಸನದ ಬೇಲೂಸಿನ ನೌಷದ್ ಅರೇಹಳ್ಳಿ ಬಂಧಿತ ಆರೋಪಿಗಳು ಎಂದು ಗುರುತಿಸಲಾಗಿದೆ.

ಕೋಮು ಸೌಹಾರ್ತೆ ಕದಡಲು ಸಂಚು ರೂಪಿಸಿದ ಇವರು, ಮಂಗಳೂರು ನಗರದ ಕಾವೂರು ಪೊಲೀಸ್ ಠಾಣಾ ವ್ಯಾಪ್ತಿಯ ಪಡುಕೋಡಿ ಗ್ರಾಮದ ಬಂಗ್ರ ಕೂಳೂರು ಕೋಟ್ಯಾನ್ ಕುಟುಂಬದ ನಾಗಬನದ ಆರಾಧನಾ ಕಲ್ಲನ್ನು ಅಕ್ಟೋಬರ್ 21ರಂದು ಧ್ವಂಸಗೊಳಿಸಿದ್ದರು.  ಉಳಿದ 5 ಕಲ್ಲನ್ನು ಅಪವಿತ್ರಗೊಳಿಸಿದ್ದರು. ಇದಾದ ಬಳಿಕ ನವೆಂಬರ್ 12ರಂದು ಮಂಗಳೂರು ನಗರದ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯ ಕೋಡಿಕಲ್ ನಾಗಬನದ ಮೂರ್ತಿಗಳನ್ನು ಕಿತ್ತೆಸೆದು ಹಾನಿಗೊಳಿಸಿದ್ದರು ಎಂದು ವರದಿಯಾಗಿದೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಲು ಪೇಜಾವರ ಶ್ರೀ ನಿರಾಕರಿಸಿದ್ದರು | ಜ್ಞಾನಪ್ರಕಾಶ ಸ್ವಾಮೀಜಿ

ಡಿಜೆ ಸೌಂಡ್ ಗೆ ಹೃದಯಾಘಾತಗೊಂಡು 63 ಕೋಳಿಗಳ ಸಾವು

ರಸ್ತೆಯ ಗುಂಡಿಗೆ ರೈತನ ಪ್ರಾಣ ಬಲಿ | ಆಕ್ರೋಶಿತ ಸ್ಥಳೀಯರಿಂದ ಪ್ರತಿಭಟನೆ

ಬೆಲೆ ಹೆಚ್ಚಿಸಿ ಶಾಕ್ ನೀಡಿದ್ದ ಏರ್ಟೆಲ್ ಈಗ ನೀಡಿರುವ ಆಫರ್ ಏನು ಗೊತ್ತಾ?

ಒಂದೇ ದಿನದಲ್ಲಿ ಫೇಮಸ್ ಆದ ‘ಗುಟ್ಕಾ ಮ್ಯಾನ್’ ಗೆ ಶುರುವಾಯ್ತು ತಲೆನೋವು! | ಪಕ್ಕದಲ್ಲಿದ್ದ ಹುಡುಗಿ ಯಾರು ಗೊತ್ತಾ?

ಶಾಸಕರಿಗೇ ಅಸ್ಪೃಶ್ಯತೆ ಅನುಭವವಾಯ್ತಾ? | ಪಲ್ಲಕ್ಕಿ ಹೊತ್ತ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ಅವರಿಗೆ ಕೆಟ್ಟ ಅನುಭವ!

 

ಇತ್ತೀಚಿನ ಸುದ್ದಿ