ನಾಗ್ಪುರ ಘರ್ಷಣೆ ಪ್ರಕರಣ: ಬಂಧಿತ 51 ಮಂದಿಯೂ ಮುಸ್ಲಿಮರು; ಪೊಲೀಸರಿಂದ ಏಕಪಕ್ಷೀಯ ಧೋರಣೆ?
 
	
	
	
	
	
ನಾಗಪುರದಲ್ಲಿ ಘರ್ಷಣೆ ಉಂಟಾದ ಬಳಿಕ ಬಂಧನಕ್ಕೀಡಾದವರಲ್ಲಿ 51 ಮಂದಿ ಕೂಡ ಮುಸ್ಲಿಮರಾಗಿದ್ದಾರೆ. ಪೊಲೀಸರು ಏಕ ಪಕ್ಷೀಯವಾಗಿ ಎಫ್ ಐ ಆರ್ ದಾಖಲಿಸಿದ್ದಾರೆ ಮತ್ತು ಒಂದು ನಿರ್ದಿಷ್ಟ ಸಮುದಾಯವನ್ನಷ್ಟೇ ಗುರಿ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ತೀವ್ರ ಪ್ರತಿರೋಧ ವ್ಯಕ್ತವಾಗಿದೆ. ಎರಡು ಗುಂಪುಗಳು ಪರಸ್ಪರ ಘರ್ಷಣೆಯಲ್ಲಿ ತೊಡಗಿದ ಹೊರತಾಗಿಯೂ ಕೇವಲ ಮುಸ್ಲಿಮರನ್ನು ಮಾತ್ರ ಪೊಲೀಸರು ಗುರಿ ಮಾಡಿದ್ದಾರೆ ಎಂದು ಹೇಳಲಾಗಿದೆ.
ನಾಗಪುರದ ಸೆಂಟ್ರಲ್ ಮಹಲ್ ಪ್ರದೇಶದಲ್ಲಿ ಎರಡು ಸಮುದಾಯಗಳಿಗೆ ಸೇರಿದ ಜನರು ಘರ್ಷಣೆಗೆ ಇಳಿದಿದ್ದರು. ಇದರ ಬಳಿಕ ಪೊಲೀಸರು 51 ಮಂದಿಯ ಮೇಲೆ ಎಫ್ಐಆರ್ ದಾಖಲಿಸಿದ್ದರು.
ಆದರೆ ಈ 51 ಮಂದಿಯೂ ಮುಸ್ಲಿಮರೇ ಆಗಿದ್ದಾರೆ. ಅಲ್ಲದೆ ಕಂಡರೆ ಗೊತ್ತಾಗಬಹುದಾದ 600 ಮಂದಿಯ ಮೇಲೆಯೂ ಪ್ರಕರಣ ದಾಖಲಿಸಿದ್ದಾರೆ. ಎರಡು ಗುಂಪುಗಳ ನಡುವೆ ಸಂಘರ್ಷ ಉಂಟಾಗಿದೆ ಎಂದು ಪೊಲೀಸರೇ ಹೇಳಿದ್ದಾರೆ ಆದರೆ ಎಫ್ ಐ ಆರ್ ದಾಖಲಿಸಿದ್ದು ಕೇವಲ ಮುಸ್ಲಿಮರ ವಿರುದ್ಧ ಮಾತ್ರ. ಈ ಏಕ ಪಕ್ಷಿಯ ನಿಲುವು ಈ ಪ್ರದೇಶದಲ್ಲಿ ಪ್ರತಿಭಟನೆಗೆ ಕಾರಣವಾಗಿದೆ ಪೊಲೀಸರು ತಾರತಮ್ಯದಿಂದ ನಡಕೊಂಡಿದ್ದಾರೆ ಎಂದು ಪ್ರತಿಭಟನಾಕಾರರು ದೂರಿದ್ದಾರೆ.
ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.
ಗ್ರೂಪ್ ಗೆ ಜಾಯಿನ್ ಆಗಿ:
https://chat.whatsapp.com/BHOOdLNNvmD17cBJslQgwj





 
 























