ಕೆಎಸ್ಸಾರ್ಟಿಸಿ ಬಸ್ ಸಂಚಾರ ನಾಳೆಯಿಂದ ಆರಂಭ: ಯಾವೆಲ್ಲ ಜಿಲ್ಲೆಯಲ್ಲಿ ಬಸ್ ಇರಲಿದೆ? - Mahanayaka
1:03 PM Wednesday 15 - October 2025

ಕೆಎಸ್ಸಾರ್ಟಿಸಿ ಬಸ್ ಸಂಚಾರ ನಾಳೆಯಿಂದ ಆರಂಭ: ಯಾವೆಲ್ಲ ಜಿಲ್ಲೆಯಲ್ಲಿ ಬಸ್ ಇರಲಿದೆ?

ksrtc
20/06/2021

ಬೆಂಗಳೂರು:  ಕೊವಿಡ್ 19 ಹರಡುವಿಕೆ ನಿಯಂತ್ರಣಕ್ಕೆ ಬರುತ್ತಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಹಂತ ಹಂತವಾಗಿ ಅನ್ ಲಾಕ್ ಮಾಡಲಾಗುತ್ತಿದೆ. ಇದೀಗ ಬಂದಿರುವ ಮಾಹಿತಿಯ ಪ್ರಕಾರ ಕೆಎಸ್ಸಾರ್ಟಿಸಿ ಬಸ್ ನಾಳೆಯಿಂದ ಸಂಚರಿಸಲಿದೆ ಎಂದು ತಿಳಿದು ಬಂದಿದೆ.


Provided by

ಜೂನ್ 21ರ ಬಳಿಕ ಮೈಸೂರು ಹೊರತುಪಡಿಸಿ, ರಾಜ್ಯದ ಎಲ್ಲ ಜಿಲ್ಲೆಗಳಲ್ಲಿಯೂ ಕೆಎಸ್ಸಾರ್ಟಿಸಿ ಬಸ್ ಸಂಚಾರ ಆರಂಭವಾಗಲಿದೆ. ನಾಳೆ ಸುಮಾರು 3 ಸಾವಿರ ಬಸ್ ಗಳು ರಸ್ತೆಗಿಳಿಯಲಿವೆ ಎಂದು ವರದಿಯಾಗಿದೆ.

ಶೇ.50ರಷ್ಟು ಪ್ರಯಾಣಿಕರಿಗೆ ಕೆಎಸ್ಸಾರ್ಟಿಸಿ ಬಸ್ ಗಳಲ್ಲಿ ಅವಕಾಶ ನೀಡಲಾಗಿದೆ. ಮೈಸೂರು ಜಿಲ್ಲೆ ಹೊರತು ಪಡಿಸಿ ಉಳಿದ ಜಿಲ್ಲೆಗಳಲ್ಲಿ ಮಾರ್ಗ ಸೂಚಿ ಸಡಿಲಿಕೆ ಮಾಡಲಾಗಿರುವ ಹಿನ್ನೆಲೆಯಲ್ಲಿ ಕೆಎಸ್ಸಾರ್ಟಿಸಿ ಬಸ್ ಗಳು ರಸ್ತೆಗಿಳಿಯಲು ಸಜ್ಜಾಗಿವೆ ಎಂದು ಕೆಎಸ್ಸಾರ್ಟಿಸಿ ಮುಖ್ಯ ಸಂಚಾರ ವ್ಯವಸ್ಥಾಪಕರ ಪ್ರಕಟಣೆ ತಿಳಿಸಿದೆ

ಅನ್ ಲಾಕ್ ಆಗ್ತಿದೆ ಎಂದು ಖುಷಿ ಪಡುವಂತಿಲ್ಲ, ಬೆನ್ನತ್ತಿ ಬರುತ್ತಿದೆ ಇನ್ನೊಂದು ಅಪಾಯ!

ಇತ್ತೀಚಿನ ಸುದ್ದಿ