ನಮಾಜ್ ಮಾಡುವುದರಿಂದ ಸಿಗುವ ಶಾಂತಿ—ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ: ಸಮೀರ್ ರಿಜ್ವಿ - Mahanayaka
3:05 PM Thursday 18 - September 2025

ನಮಾಜ್ ಮಾಡುವುದರಿಂದ ಸಿಗುವ ಶಾಂತಿ—ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ: ಸಮೀರ್ ರಿಜ್ವಿ

sameer rizvi
01/09/2024

ಪ್ರತಿನಿತ್ಯ ನಮಾಜ್ ಮಾಡುವ ಧಾರ್ಮಿಕ ವ್ಯಕ್ತಿ ನಾನು, ನಮಾಜ್ ಮಾಡುವುದರಿಂದ ಸಿಗುವ ಶಾಂತಿ, ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ ಅಂತ ಚೆನ್ನೈ ಸೂಪರ್ ಕಿಂಗ್ಸ್ ನ ಆಟಗಾರ ಬ್ಯಾಟ್ಸ್‌ಮನ್ ಸಮೀರ್ ರಿಜ್ವಿ (Sameer Rizvi) ಹೇಳಿದ್ದಾರೆ.


Provided by

ಕಳೆದ ಆವೃತ್ತಿಯ ಐಪಿಎಲ್(IPL) ಹರಾಜಿನಲ್ಲಿ ಬಲಗೈ ಬ್ಯಾಟ್ಸ್‌ ಮನ್ ಸಮೀರ್ ರಿಜ್ವಿ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಫ್ರಾಂಚೈಸಿ 8.4 ಕೋಟಿ ರೂಪಾಯಿ ಭಾರಿ ಬೆಲೆಗೆ ಖರೀದಿಸಿತ್ತು.

ಸದ್ಯ ಯುಪಿ ಟಿ20 ಲೀಗ್ ನಲ್ಲಿ ಸಮೀರ್ ರಿಜ್ವಿ ಆಟವಾಡುತ್ತಿದ್ದಾರೆ. ಅದ್ಭುತ ಪ್ರದರ್ಶನ ನೀಡಿ ಅಚ್ಚರಿ ಕೂಡ ಸೃಷ್ಟಿಸಿದ್ದಾರೆ. ಈ ನಡುವೆ ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ನಮಾಜ್ ಮಾಡುವುದರಿಂದ ಸಿಗುವ ಶಾಂತಿ, ನೆಮ್ಮದಿ ಶತಕ ಬಾರಿಸಿದರೂ ಸಿಗುವುದಿಲ್ಲ ಎಂದಿದ್ದಾರೆ.

ಇದೇ ವೇಳೆ ತಮ್ಮ ನೆಚ್ಚಿನ ಕ್ರಿಕೆಟಿಗರ ಹೆಸರನ್ನು ಹೇಳಿದ ಅವರು, ವಿರಾಟ್ ಕೊಹ್ಲಿ ಮತ್ತು ಮಹೇಂದ್ರ ಸಿಂಗ್ ಧೋನಿ,  ಸಮೀರ್ ರಿಜ್ವಿ ಅವರ ಮೆಚ್ಚಿನ ಆಟಗಾರಂತೆ.

ಧೋನಿ ಎಂತಹ ಒತ್ತಡದ ಸಂದರ್ಭವನ್ನೂ ಶಾಂತವಾಗಿ ನಿಭಾಯಿಸುವುದನ್ನು ಕಲಿಸಿದ್ದಾರೆ. ವಿರಾಟ್ ಕೊಹ್ಲಿ ಅಹಂಕಾರವಿಲ್ಲದೇ ಎಲ್ಲರ ಜೊತೆ ಬೆರೆಯುತ್ತಾರೆ. ಅವರ ಆ ಗುಣ ನನಗೆ ಇಷ್ಟ ಎಂದಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/BHOOdLNNvmD17cBJslQgwj

ಇತ್ತೀಚಿನ ಸುದ್ದಿ