ರಾಸಲೀಲೆ ಸಿಡಿ; ನನಗೆ ಯುವತಿಯ ಪರಿಚಯ ಇಲ್ಲ ಎಂದ ದಿನೇಶ್ ಕಲ್ಲಹಳ್ಳಿ - Mahanayaka
12:00 AM Monday 15 - December 2025

ರಾಸಲೀಲೆ ಸಿಡಿ; ನನಗೆ ಯುವತಿಯ ಪರಿಚಯ ಇಲ್ಲ ಎಂದ ದಿನೇಶ್ ಕಲ್ಲಹಳ್ಳಿ

05/03/2021

ಬೆಂಗಳೂರು: ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ನಡೆಸುತ್ತಿರುವ ಪೊಲೀಸರು ಶುಕ್ರವಾರ ದೂರುದಾರ  ದಿನೇಶ್ ಕಲ್ಲಹಳ್ಳಿ ಅವರನ್ನು ಸುಮಾರು 4 ಗಂಟೆಗಳಿಗೂ ಅಧಿಕ ಕಾಲ ವಿಚಾರಣೆ ನಡೆಸಿದ್ದಾರೆ.

ವಿಚಾರಣೆಯ ಬಳಿಕ ಮಾಧ್ಯಮಗಳ ಜೊತೆಗೆ ಮಾತನಾಡಿದ ದಿನೇಶ್ ಕಲ್ಲಹಳ್ಳಿ, ತನಿಖೆಗೆ ಪೂರಕವಾದ ಮಾಹಿತಿಗಳನ್ನು ನಾನು ಪೊಲೀಸರಿಗೆ ನೀಡಿದ್ದೇನೆ. ಪ್ರಕರಣ ತನಿಖೆಯ ಹಂತದಲ್ಲಿರುವುದರಿಂದ ನಾನು ಮಾಧ್ಯಮಗಳಿಗೆ ಹೆಚ್ಚಿನ ಮಾಹಿತಿ ನೀಡಲು ಸಾಧ್ಯವಾಗುವುದಿಲ್ಲ ಎಂದು ಅವರು ಹೇಳಿದ್ದಾರೆ.

ನನಗೆ ನೀಡಲಾಗಿದ್ದ ಸಿಡಿಯನ್ನು ನಾನು ಪೊಲೀಸರಿಗೆ ನೀಡಿದ್ದೇನೆ. ವಿಡಿಯೋದಲ್ಲಿರುವ ಮಹಿಳೆ ನನ್ನ ಸಂಪರ್ಕದಲ್ಲಿಲ್ಲ. ನನಗೆ ಆಕೆಯ ಪರಿಚಯವೂ ಇಲ್ಲ. ಮಹಿಳೆಯ ಕುಟುಂಬಸ್ಥರು ನನ್ನನ್ನು ಭೇಟಿ ಮಾಡಿದ್ದರು ಎಂದು ಕಲ್ಲಹಳ್ಳಿ ಹೇಳಿದ್ದಾರೆ.

ಇತ್ತೀಚಿನ ಸುದ್ದಿ