ನಟಿಯನ್ನು ವೇದಿಕೆಯಲ್ಲಿ ತಳ್ಳಿ ಹಾಕಿದ ನಟ ನಂದಮೂರಿ ಬಾಲಕೃಷ್ಣ: ನಟನ ದುರಹಂಕಾರಿ ವರ್ತನೆ ವಿರುದ್ಧ ಆಕ್ರೋಶ - Mahanayaka
12:30 PM Saturday 23 - August 2025

ನಟಿಯನ್ನು ವೇದಿಕೆಯಲ್ಲಿ ತಳ್ಳಿ ಹಾಕಿದ ನಟ ನಂದಮೂರಿ ಬಾಲಕೃಷ್ಣ: ನಟನ ದುರಹಂಕಾರಿ ವರ್ತನೆ ವಿರುದ್ಧ ಆಕ್ರೋಶ

nandamuri balakrishna
30/05/2024


Provided by

ಹೈದರಾಬಾದ್:  ಟಾಲಿವುಡ್ ನಟ ನಂದಮೂರಿ ಬಾಲಕೃಷ್ಣ ತನ್ನ ದುರ್ವರ್ತನೆಗಳಿಂದ ಆಗಾಗಾ ಸುದ್ದಿಯಾಗುತ್ತಿರುತ್ತಾರೆ. ಇದೀಗ ವೇದಿಕೆಯಲ್ಲಿ ನಟಿಯೊಬ್ಬರನ್ನು ತಳ್ಳಿ ಹಾಕುವ ಮೂಲಕ ದುರ್ವರ್ತನೆ ತೋರಿದ್ದು,  ಅವರ ಕೃತ್ಯದ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ನಟ ವಿಶ್ವಕ್ ಸೇನ್ ಅವರ ಮುಂಬರುವ ಚಿತ್ರ ‘ಗ್ಯಾಂಗ್ಸ್ ಆಫ್ ಗೋದಾವರಿ’ ಪ್ರಚಾರಕ್ಕಾಗಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಬಾಲಕೃಷ್ಣ ಅವರನ್ನು ಆಹ್ವಾನಿಸಲಾಯಿತು. ಈ ಸಿನಿಮಾದಲ್ಲಿ ನೇಹಾ ಶೆಟ್ಟಿ ಮತ್ತು ಅಂಜಲಿ ನಾಯಕಿಯರಾಗಿ ನಟಿಸಿದ್ದಾರೆ. ಕಾರ್ಯಕ್ರಮದ ಕೊನೆಯಲ್ಲಿ ಗ್ರೂಪ್ ಫೋಟೋ ತೆಗೆಯಲು ಚಿತ್ರತಂಡ ತಯಾರಿ ನಡೆಸುತ್ತಿದ್ದಾಗ ವೇದಿಕೆಯಲ್ಲಿ ಈ ಘಟನೆ ನಡೆದಿದೆ.

ವೇದಿಕೆ ಮೇಲೆ ಬಂದ ಬಾಲಯ್ಯ ಪಕ್ಕಕ್ಕೆ ಸರಿಯುವಂತೆ ನಟಿ ಅಂಜಲಿಗೆ ಸೂಚಿಸಿದ್ದಾರೆ. ಅವರ ಸೂಚನೆಯಂತೆ ಪಕ್ಕಕ್ಕೆ ಸರಿಯಲು  ಅಂಜಲಿ ಮುಂದಾಗಿದ್ದಾರೆ. ಆದರೆ ನಂದಮೂರಿ ಬಾಲಕೃಷ್ಣ ದುರಹಂಕಾರಿ ವರ್ತನೆ ತೋರಿದ್ದು, ನಟಿ ಪಕ್ಕಕ್ಕೆ ಸರಿಯುವುದರೊಳಗೆ ಕೈ ಹಿಡಿದು ಪಕ್ಕಕ್ಕೆ ತಳ್ಳಿದ್ದಾರೆ.

ನಟನ ದುರಹಂಕಾರಿ ವರ್ತನೆ ಕಂಡು ವೇದಿಕೆಯಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ.  ನಟನ ಅತಿರೇಕದ ವರ್ತನೆ ವಿರುದ್ಧ ತೀವ್ರ ಆಕ್ರೋಶ ವ್ಯಕ್ತವಾಗಿದ್ದು, ತಾನು ದೊಡ್ಡವ ಎನ್ನುವ ಕಾರಣಕ್ಕೆ ಬೇರೆಯವರನ್ನು ಕೇವಲವಾಗಿ ನೋಡುವುದು ಎಷ್ಟು ಸರಿ?  ಎನ್ನುವ ಪ್ರಶ್ನೆಗಳು ಕೇಳಿ ಬಂದಿವೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/JItjEWZ9e5fBWDL6CkTr97

ಫೇಸ್ ಬುಕ್ ಪೇಜ್ ಫಾಲೋ ಮಾಡಿ: https://www.facebook.com/profile.php?id=61556202767068

ಇತ್ತೀಚಿನ ಸುದ್ದಿ