ವೇದಿಕೆಯಲ್ಲೇ ಉದುರಿದ ಖ್ಯಾತ ನಟನ ಮೀಸೆ!: “ಗಮ್ ತಾ” ಎಂದು ಸಹಾಯಕನಿಗೆ ಕೈ ಸನ್ನೆ! - Mahanayaka

ವೇದಿಕೆಯಲ್ಲೇ ಉದುರಿದ ಖ್ಯಾತ ನಟನ ಮೀಸೆ!: “ಗಮ್ ತಾ” ಎಂದು ಸಹಾಯಕನಿಗೆ ಕೈ ಸನ್ನೆ!

nandamuri balakrishna
14/06/2025

ವೇದಿಕೆಯಲ್ಲಿ ಮಾತನಾಡುತ್ತಿದ್ದ ವೇಳೆ ತೆಲುಗಿನ ಹಿರಿಯ ನಟನ ಮೀಸೆ ಉದುರಿದ ಪ್ರಸಂಗ ಸಿನಿಮಾವೊಂದರ ಪ್ರಮೋಷನ್ ಕಾರ್ಯಕ್ರಮದಲ್ಲಿ ನಡೆದಿದೆ. ಆದರೂ ಈ ಮೀಸೆ ಕಥೆ ಹ್ಯಾಪಿ ಎಂಡಿಂಗ್ ಆಗಿದೆ.

ನಂದಮೂರಿ ಬಾಲಕೃಷ್ಣ(Nandamuri Balakrishna) ಅವರ ಸಿನಿಮಾಗಳು, ಸಾಹಸ ದೃಶ್ಯಗಳು ಡಾನ್ಸ್ ಗಳು ಆಗಾಗ ಟ್ರೋಲ್ ಆಗುತ್ತಲೇ ಇರುತ್ತದೆ. ಆದರೆ ಈ ಬಾರಿ ಅವರು ತಮ್ಮ ಡಮ್ಮಿ ಮೀಸೆಯಿಂದಾಗಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ದಪ್ಪಗಿನ ಮೀಸೆಯೊಂದಿಗೆ ಗಂಭೀರವಾಗಿ ಕಾಣುವ ನಂದಮೂರಿ ಬಾಲಕೃಷ್ಣ ಅವರು  ಡ್ಯುಪ್ಲಿಕೇಟ್ ಮೀಸೆ ಅಂಟಿಸಿಕೊಂಡಿರುತ್ತಾರಾ? ಎನ್ನುವುದು ಈಗಲೇ ಅಭಿಮಾನಿಗಳಿಗೆ ತಿಳಿಯುತ್ತಿದೆ.

ಜೂನ್ 10 ರಂದು ನಂದಮೂರಿ ಬಾಲಕೃಷ್ಣ ಅವರ 65ನೇ ಜನ್ಮ ದಿನ. ಅದರ ಜೊತೆಗೆ ಅಖಂಡ—2 ಚಿತ್ರದ  ಟೀಸರ್ ರಿಲೀಸ್ ಕೂಡ ಆಗುತ್ತಿತ್ತು. ಹೀಗಾಗಿ ಡಬ್ಬಲ್ ಖುಷಿಯಲ್ಲಿದ್ದ ಬಾಲಯ್ಯ, ಅಬ್ಬರಿಸಿ ಬೊಬ್ಬಿರಿಯುತ್ತಿದ್ದರು.

ಮಾತಿನ ಅಬ್ಬರದ ನಡುವೆ, ಅಂಟಿಸಲಾಗಿದ್ದ ಮೀಸೆ ಲೂಸ್ ಆಗಿ,  ಬಲಗಡೆಯಿಂದ ಕಿತ್ತು ಬಂದಿದೆ. ಈ ವೇಳೆ ಮೀಸೆ ಮೇಲೆ ಕೈ ಹಾಕಿದ ಬಾಲಯ್ಯ, ಮೀಸೆಯನ್ನು ಹಿಡಿದು ನಿಲ್ಲಿಸಲು ಪ್ರಯತ್ನಿಸಿದರು. ಆದರೆ ಮೀಸೆ ಅಂಟಿಕೊಳ್ಳಲಿಲ್ಲ. ಈ ವೇಳೆ ತಮ್ಮ ಸಹಾಯಕನಿಗೆ ಕೈಸನ್ನೆ ಮಾಡಿ ಗಮ್ ತರಲು ಹೇಳಿದ ಬಾಲಯ್ಯ, ತಮ್ಮ ಡ್ಯುಪ್ಲಿಕೇಟ್ ಮೀಸೆಯನ್ನು ಅಂಟಿಸಿಕೊಂಡರು.

ಸದ್ಯ ಬಾಲಯ್ಯನವರ ಮೀಸೆಯ ಕಥೆ ಸುಖಾಂತ್ಯ ಕಂಡರೂ, ರೀಲ್ಸ್, ಮೀಮ್ಸ್ ಮಾಡುವವರಿಗಂತೂ ಹಬ್ಬದೂಟವೇ ಆಗಿದೆ. ಬಾಲಯ್ಯನವರ ಜನ್ಮದಿನ ಕಳೆದು ನಾಲ್ಕು ದಿನಗಳ ನಂತರ ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಭರ್ಜರಿ ವೈರಲ್ ಆಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ