“ನಾನು ನಂದಿನಿ, ರಾಜಸ್ಥಾನಕ್ಕೂ ಬಂದಿನಿ”: ಶೀಘ್ರವೇ ರಾಜಸ್ಥಾನಕ್ಕೆ ಕಾಲಿಡಲಿದೆ ನಂದಿನಿ - Mahanayaka

“ನಾನು ನಂದಿನಿ, ರಾಜಸ್ಥಾನಕ್ಕೂ ಬಂದಿನಿ”: ಶೀಘ್ರವೇ ರಾಜಸ್ಥಾನಕ್ಕೆ ಕಾಲಿಡಲಿದೆ ನಂದಿನಿ

nandini milk price
22/04/2025


Provided by

ಬೆಂಗಳೂರು: ದೇಶದಲ್ಲೇ ಅತಿಹೆಚ್ಚು ಹಾಲು ಉತ್ಪಾದಿಸುವ ರಾಜ್ಯಗಳ ಸಾಲಿನಲ್ಲಿ ಎರಡನೇ ಸ್ಥಾನದಲ್ಲಿರುವ ರಾಜಸ್ಥಾನಕ್ಕೂ ಕರ್ನಾಟಕ ರಾಜ್ಯದ ನಂದಿನಿ ಕಾಲಿಡಲು ಸಜ್ಜಾಗಿದೆ.

ದೆಹಲಿಯಲ್ಲಿ ತನ್ನ ಉತ್ಪನ್ನಗಳ ಮಾರಾಟದಲ್ಲಿ ಯಶಸ್ಸು ಕಂಡ ಬಳಿಕ ರಾಜಸ್ಥಾನ ಹಾಗೂ ಮಧ್ಯಪ್ರದೇಶಕ್ಕೂ ನಂದಿನಿ ಹಾಲು, ಉತ್ಪನ್ನಗಳ ಮಾರಾಟಕ್ಕೆ ಚಿಂತನೆ ನಡೆಸಲಾಗಿದೆ ಎನ್ನಲಾಗಿದೆ.

ರಾಜಸ್ಥಾನದಲ್ಲಿ ಹಾಲು ಸಂಗ್ರಹ ಪ್ರಾರಂಭಿಸಲು ಮತ್ತು ಕೊ-ಪ್ಯಾಕೇಜಿಂಗ್ ಸೆಂಟರ್ ​ಗಳನ್ನು ಸ್ಥಾಪಿಸಲು ಕೆಎಂಎಫ್ ಯೋಜಿಸಿದೆ. ಪೂರೈಕೆ ಸರಪಳಿಯನ್ನು ಬಲಪಡಿಸಲು ಮತ್ತು ಉತ್ತರ ಭಾರತದ ಮಾರುಕಟ್ಟೆಯಲ್ಲಿ ಪ್ರಭಾವ ಹೆಚ್ಚಿಸಲು ರಾಜಸ್ಥಾನ ಮಾತ್ರವಲ್ಲದೆ, ಮಧ್ಯಪ್ರದೇಶವನ್ನು ಪ್ರಮುಖ ಭಾಗವಾಗಿ ಪರಿಗಣಿಸಲಾಗುತ್ತಿದೆ ಎಂದು ವರದಿಯಾಗಿದೆ.

ಉತ್ತರ ಭಾಗದ ಮಾರುಕಟ್ಟೆಗಳಿಗೆ ಹತ್ತಿರದಲ್ಲಿ ಕೊ-ಪ್ಯಾಕೇಜಿಂಗ್ ಘಟಕಗಳನ್ನು ಸ್ಥಾಪಿಸುವ ಮೂಲಕ, ಹಾಲು ಮತ್ತು ಹಾಲಿನ ಉತ್ಪನ್ನಗಳ ಸಾಗಾಟ ದೂರವನ್ನು ಕಡಿಮೆ ಮಾಡುವುದು ಕೆಎಂಎಫ್ ಗುರಿಯಾಗಿದೆ ಅಂತ ಹೇಳಲಾಗುತ್ತಿದೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/H1duNIQRfXnJcfQKWPzNqD

ಇತ್ತೀಚಿನ ಸುದ್ದಿ