“ನನ್ನ ಮೇಲೆ ಹನಿಟ್ರ್ಯಾಪ್ ನಡೆದಿದೆ” | ರಮೇಶ್ ಜಾರಕಿಹೊಳಿ ಹೇಳಿದ್ದೇನು? - Mahanayaka
6:32 PM Wednesday 15 - October 2025

“ನನ್ನ ಮೇಲೆ ಹನಿಟ್ರ್ಯಾಪ್ ನಡೆದಿದೆ” | ರಮೇಶ್ ಜಾರಕಿಹೊಳಿ ಹೇಳಿದ್ದೇನು?

ramesh jarakiholi
24/05/2021

ಬೆಂಗಳೂರು:  ಕೊರೊನಾ ಎರಡನೇ ಅಲೆಯ ನಡುವೆ ಮರೆಯಾಗಿದ್ದ ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ರಾಸಲೀಲೆ ಸಿಡಿ ಪ್ರಕರಣ ಇದೀಗ ಮತ್ತೆ ಸದ್ದು ಮಾಡಿದ್ದು, ಎಸ್ ಐಟಿ ತನಿಖೆಗೆ ಹಾಜರಾಗಿದ್ದ ರಮೇಶ್ ಜಾರಕಿಹೊಳಿ ಮಹತ್ವದ ಮಾಹಿತಿ ನೀಡಿದ್ದಾರೆ ಎಂದು ತಿಳಿದು ಬಂದಿದೆ.


Provided by

ನನಗೆ ಯುವತಿಯ ಪರಿಚಯ ಮೊದಲೇ ಇತ್ತು,  ಆದರೆ ನನ್ನನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ರಮೇಶ್ ಜಾರಕಿಹೊಳಿ ಅವರು ಎಸ್ ಐಟಿ ತನಿಖೆಯ ವೇಳೆ ಹೇಳಿಕೆ ದಾಖಲಿಸಿದ್ದಾರೆ. ತನಿಖಾ ಅಧಿಕಾರಿಗಳ ಎದುರು ಸುಮಾರು 6 ಪುಟಗಳ ಹೇಳಿಕೆಯನ್ನು ರಮೇಶ್ ಜಾರಕಿಹೊಳಿ ದಾಖಲಿಸಿದ್ದಾರೆ ಎಂದು  ಎಂದು ವರದಿಯಾಗಿದೆ.

ನನ್ನ ಹನಿಟ್ರ್ಯಾಪ್ ಆಗಿದೆ. ಕಾಂಗ್ರೆಸ್ ನಾಯಕರೊಬ್ಬರ ಕೈವಾಡ ಈ ಪ್ರಕರಣದಲ್ಲಿದೆ.  ನನ್ನನ್ನು ಹಣಕ್ಕಾಗಿ ಪೀಡಿಸಲಾಗುತ್ತಿತ್ತು. ಈ ಪ್ರಕರಣದಲ್ಲಿರುವ ನರೇಶ್ ಗೌಡ ಹಾಗೂ ಶ್ರವಣ್ ಎನ್ನುವವರು ನನಗೆ ಪದೇ ಪದೇ ಕರೆ ಮಾಡುತ್ತಿದ್ದರು. ಇದೊಂದು ಪಕ್ಕಾ ಹನಿಟ್ರ್ಯಾಪ್ ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ ಎಂದು ತಿಳಿದು ಬಂದಿದೆ.

ಇತ್ತೀಚಿನ ಸುದ್ದಿ