ನಾನು ಮುಖ್ಯಮಂತ್ರಿಯಾಗಬೇಕು… ನನ್ನನ್ನು ಗೆಲ್ಲಿಸುತ್ತೀರಾ? | ಉಪೇಂದ್ರ ಪ್ರಶ್ನೆ - Mahanayaka
10:57 AM Tuesday 20 - January 2026

ನಾನು ಮುಖ್ಯಮಂತ್ರಿಯಾಗಬೇಕು… ನನ್ನನ್ನು ಗೆಲ್ಲಿಸುತ್ತೀರಾ? | ಉಪೇಂದ್ರ ಪ್ರಶ್ನೆ

upendra
23/05/2021

ಬೆಂಗಳೂರು: ನಾನು ಈ ರಾಜ್ಯದ ಮುಖ್ಯಮಂತ್ರಿ ಆಗಬೇಕು. ನಾನು ಚುನಾವಣೆಯಲ್ಲಿ ಸ್ಪರ್ಧಿಸಿದರೆ, ನೀವು ನನ್ನನ್ನು ಗೆಲ್ಲಿಸುತ್ತೀರಾ? ಎಂದು ನಟ ಉಪೇಂದ್ರ ಸಾಮಾಜಿಕ ಜಾಲತಾಣಗಳಲ್ಲಿ ಜನರನ್ನು ಪ್ರಶ್ನಿಸಿದ್ದಾರೆ.

ತಮ್ಮ ಇನ್ ಸ್ಟಾಗ್ರಾಮ್  ಖಾತೆಯಲ್ಲಿ ಈ ಬಗ್ಗೆ ಪೋಸ್ಟ್ ಹಾಕಿರುವ ಅವರು,  “ನೋಡಿ ನಾನು ಸಮಾಜ ಸೇವೆ ಮಾಡ್ತಿದೀನಿ ! ರೈತರಿಂದ ಬೆಳೆಕೊಂಡು ಉಚಿತವಾಗಿ ಕಷ್ಟದಲ್ಲಿರೋರಿಗೆ ಹಂಚ್ತಿದೀನಿ, ಚುನಾವಣೆ ಸಮಯದಲ್ಲಿ ಹೋರಾಟಾನೂ ಮಾಡ್ತೀನಿ, ಆಡಳಿತ ಪಕ್ಷ, ವಿರೋದ ಪಕ್ಷ ಜನರಿಗೆ ಏನೂ ಮಾಡ್ದೆ ಸಂಪೂರ್ಣ ವಿಫಲ ಆಗಿದೆ ಅಂತ ಮಾಧ್ಯಮದಲ್ಲಿ ಕೂಗಿ ಹೇಳ್ತೀನಿ, ಇವರನ್ನೆಲ್ಲಾ ಕಿತ್ಹಾಕಿ ನನಗೆ ಒಂದು ಅವಕಾಶ ಕೊಡಿ. ನಿಮ್ಮ ಮುಂದಿನ ಉಜ್ವಲ ಭವಿಷ್ಯಕ್ಕೆ ನಾನು ಕೆಲಸ ಮಾಡ್ತೀನಿ, ಹಗಲು ರಾತ್ರಿ ಕಷ್ಟಪಟ್ಟು ಸುವರ್ಣ ಕರ್ನಾಟಕ ಮಾಡ್ತೀನಿ ! ನನ್ನನ್ನ ಗೆಲ್ಲಲ್ಲಿಸ್ತೀರಾ ????”  ಎಂದು ಉಪೇಂದ್ರ ಪ್ರಶ್ನಿಸಿದ್ದಾರೆ.

ಹಾಗಾದ್ರೆ ಉತ್ತಮ ಪ್ರಜಾಕೀಯ ಪಕ್ಷ ಯಾಕೇ ? ಅಂತ ಕೇಳ್ತೀರಾ ? ಪ್ರಜಾಕೀಯದಿಂದ ದೊಡ್ಡ ಸಮಾಜ ಸೇವೆ ಮಾಡಿ ಹೆಸರು ಮಾಡಿರೋರು ಫೇಮಸ್ ವ್ಯಕ್ತಿಗಳು ಮೇಲೆ ಹೇಳಿದ ಯಾವ ಕ್ವಾಲಿಟೀ ಇರೋ ನಾಯಕರು ನಿಲ್ಲಲ್ಲ, ದೊಡ್ಡ ನಾಯಕರನ್ನ ಕೊಡೋದು ರಾಜಕೀಯ ! ಪ್ರಜಾಕೀಯದಲ್ಲಿ ನಿಮಗೆ ಗೊತ್ತಿಲ್ಲದಿರೊ ಸಾಮಾನ್ಯರು ಚುನಾವಣೆಗೆ ನಿಲ್ತಾರೆ., ಬರೀ ಪ್ರಜಾಕೀಯ ವಿಚಾರ ತಳ್ಕೊಂಡು ಓಟ್ ಹಾಕಿ ಅವರಿಗೆ ಕೆಲಸ ಕೊಟ್ರೆ ನಿಮ್ ಜೊತೆ ನಿರಂತರ ಸಂಪರ್ಕದಲ್ಲಿದ್ದು, ನಿಮಗೆ ಬೇಕಾದ ಕೆಲಸ ಪೈಸ ಪೈಸ ಲೆಕ್ಕ ಕೊಟ್ಟು ಸಂಪೂರ್ಣ ಪಾರದರ್ಶಕತೆಯಿಂದ ಮಾಡ್ತಾರೆ ಎಂದು ಉಪೇಂದ್ರ ಹೇಳಿದರು.

ಪ್ರಜಾಕೀಯದ ( SOP ) ಕಾರ್ಯವೈಖರಿ ತರ ಕೆಲಸ ಮಾಡ್ಲಿಲ್ಲ , ನಿಮಗೆ ಅವನ/ಅವಳ ಕೆಲಸ ಇಷ್ಟ ಆಗ್ಲಿಲ್ಲ ಅಥವಾ ಹಣ, ಅಧಿಕಾರದ ಆಸೆಗೆ ಬೇರೆ ಪಕ್ಷದ ಜೊತೆ ಜಂಪ್ ಆಗೋಕೆ ಹೋದ್ರೆ……….. ನಾನು ಉಪೇಂದ್ರ C M ಆಗಿ ನಿಮ್ ಜೊತೆ ನಿಲ್ತೀನಿ, ನಿಮ್ ಜೊತೆ ಉಗ್ರ ಹೋರಾಟ ಮಾಡಿ, ಅಂತಾ ಭ್ರಷ್ಟ ಪ್ರತಿನಿಧಿ ರಾಜೀನಾಮೆ ಕೊಡೋತರ ಮಾಡ್ತೀನಿ. ಈ ವ್ಯವಸ್ಥೆ ಸರೀ ಹೋಗೋಕೆ ಎರಡು ಎಲೆಕ್ಷನ್ ಜಾಸ್ತಿ ಆಗ್ಲಿ…. ಜನಕ್ಕೆ ಪ್ರಜಾಪ್ರಭುಗಳಿಗೆ ಅಭ್ಯರ್ಥಿ ಇಷ್ಟ ಆಗ್ದಿದ್ರೆ ಅವನು/ ಅವಳು ಕೆಳಗಿಳಿಬೇಕು. ಅಂತಾ ಕಾನೂನು ಬರ್ಬೇಕು. ಅದಕ್ಕೆ ನಿಮ್ ಜೊತೆ ನಾನು ಯಾವಾಗ್ಲೂ ಇರೋ permanent C M ( ಕಾಮನ್ ಮೆನ್ ) ಜನ ಸಾಮಾನ್ಯ … ? ಇಲ್ಲ ಇಲ್ಲ …. ಜನ ಅಸಾಮಾನ್ಯರಲ್ಲಿ ಒಬ್ಬನಾಗಿರ್ತೀನಿ. ಸರೀನಾ ? ಎಂದು ಅವರು ಪ್ರಶ್ನಿಸಿದ್ದಾರೆ.

ಇತ್ತೀಚೆಗಷ್ಟೇ ಅಂಬೇಡ್ಕರ್ ಅವರ “ಇತಿಹಾಸ ತಿಳಿಯದವರು ಇತಿಹಾಸ ಸೃಷ್ಟಿಸಲಾರರು” ಎನ್ನುವ ಹೇಳಿಕೆಯ ವಿರುದ್ಧ ಹೇಳಿಕೆ ನೀಡಿದ್ದ ಉಪೇಂದ್ರ ಅವರು ಕರ್ನಾಟಕದ ಜನರ ವ್ಯಾಪಕ ಆಕ್ರೋಶಕ್ಕೆ ಗುರಿಯಾಗಿದ್ದರು. ಆ ಬಳಿಕ ಅವರು ಕ್ಷಮೆ ಕೋರಿದ್ದರು. ಕ್ಷಮೆ ಕೇಳುವ ವೇಳೆ ಕೂಡ, ಈ ಹೇಳಿಕೆಯನ್ನು ಯಾರೋ ಇಂಗ್ಲಿಷ್ ನವರು ಹೇಳಿದ್ದು ಅಂತ ನಾನು ತಿಳಿದು ತಪ್ಪು ಮಾತನಾಡಿದೆ, ಅಂಬೇಡ್ಕರ್ ಅವರು ಹೇಳಿರುವುದು ಎಂದು ನನಗೆ ತಿಳಿದಿರಲಿಲ್ಲ ಎಂದು ಉಪೇಂದ್ರ ಹೇಳಿದ್ದರು. ಅವರು ಕ್ಷಮೆ ಕೇಳಿರುವ ರೀತಿ ಯಾರಿಗೂ ಇಷ್ಟವಾಗಿರಲಿಲ್ಲ. ಆದರೆ, ಯಾರು ಅದಕ್ಕೆ ಹೆಚ್ಚಿನ ಮಹತ್ವ ನೀಡಿಲ್ಲ. ಅಂಬೇಡ್ಕರ್ ಅವರ ಹೇಳಿಕೆಯನ್ನು ಒಪ್ಪುವ ದಿನ ಉಪೇಂದ್ರ ಅವರಿಗೆ ಒಂದು ದಿನ ಖಂಡಿತಾ ಬರುತ್ತದೆ. ಉಪೇಂದ್ರ  “ಅನುಭವ ಇಲ್ಲದ ಜ್ಞಾನಿ” ಎಂದು ಸಾರ್ವಜನಿಕವಾಗಿ ಮಾತುಗಳು ಹೇಳಿ ಬಂದಿದೆ.

ಇತ್ತೀಚಿನ ಸುದ್ದಿ