ನಾಪತ್ತೆಯಾಗಿದ್ದ ಬಾಲಕನ ಮೃತದೇಹ ನದಿಯಲ್ಲಿ ಪತ್ತೆ - Mahanayaka

ನಾಪತ್ತೆಯಾಗಿದ್ದ ಬಾಲಕನ ಮೃತದೇಹ ನದಿಯಲ್ಲಿ ಪತ್ತೆ

mangalore death
01/03/2022

ಮಂಗಳೂರು: ಭಾನುವಾರ ನಾಪತ್ತೆಯಾಗಿದ್ದ ಖಾಸಗಿ ಪ್ರೌಢಶಾಲೆಯ ಒಂಬತ್ತನೇ ತರಗತಿಯಲ್ಲಿ ಓದುತ್ತಿದ್ದ ಬಾಲಕನ ಮೃತದೇಹ ಸೋಮವಾರ ಇಲ್ಲಿನ ಹೊಗೈ ಬಜಾರ್ ಬಳಿ ನೇತ್ರಾವತಿ ನದಿಯಲ್ಲಿ ಪತ್ತೆಯಾಗಿದೆ.

ಮೃತ ಬಾಲಕನನ್ನು ದೃಶ್ಯಾಂತ್ (16) ಎಂದು ಗುರುತಿಸಲಾಗಿದೆ. ಇಲ್ಲಿನ ಮಹಾಕಾಳಿ ಪಡ್ಪು ಮೈದಾನದಲ್ಲಿ ಕ್ರಿಕೆಟ್ ಪಂದ್ಯಾಟಕ್ಕೆ ದೃಶ್ಯಾಂತ್ ಹೋಗಿ ಭಾನುವಾರ ಮಧ್ಯಾಹ್ನ 3.30ರವರೆಗೆ ಕ್ರಿಕೆಟ್ ಪಂದ್ಯಕ್ಕೆ ಕಾಮೆಂಟರಿ ನಿರ್ವಹಿಸುತ್ತಿದ್ದ. ಪಂದ್ಯ ಮುಗಿಯುತ್ತಿದ್ದಂತೆ ಆತನ ಸ್ನೇಹಿತರು ಪಂದ್ಯ ಮುಗಿಸಿ ತೆರಳಿದ್ದರು. ಆದರೆ ದೃಶ್ಯಾಂತ್ ಮಾತ್ರ ಮನೆ ತಲುಪಿಲ್ಲರಲಿಲ್ಲ. ಆತನ ಸ್ನೇಹಿತರು, ಸಂಬಂಧಿಕರು ಮತ್ತು ಇತರ ಪರಿಚಿತ ವ್ಯಕ್ತಿಗಳೊಂದಿಗೆ ಆತನ ಬಗ್ಗೆ ವಿಚಾರಿಸಲಾಯಿತಾದರೂ ಮಾಹಿತಿ ಲಭ್ಯವಾಗಿರಲಿಲ್ಲ.

ಪುತ್ರ ನಾಪತ್ತೆಯಾಗಿರುವ ಬಗ್ಗೆ ತಾಯಿ ಆಶಾ ಅವರು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್‌ ಐ ಆರ್ ದಾಖಲಿಸಿದ್ದರು.ಆದರೆ ಈ ನಡುವೆ ಸೋಮವಾರ ಸಂಜೆ ಹೊಗೆಬಜಾರ್‌ ನ ನೇತ್ರಾವತಿ ನದಿಯಲ್ಲಿ ಬಾಲಕನ ಮೃತದೇಹ ಪತ್ತೆಯಾಗಿದೆ. ಪೊಲೀಸ್ ಸಿಬ್ಬಂದಿ ಪ್ರಕರಣದ ತನಿಖೆ ನಡೆಸುತ್ತಿದ್ದಾರೆ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/IrdQk252EnnGsLx9CS8tli

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

 ಕೆಂಪು ಕಲ್ಲಿನ ಅಟ್ಟಿ ಮಗುಚಿಬಿದ್ದು ಮಗು ಸಾವು

ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ ಪೊಲೀಸರು ವಶಕ್ಕೆ

ಕಚ್ಚಾ ಬದಾಮ್ ಸಿಂಗರ್ ಭುಬನ್ ಬದ್ಯಾಕರ್ ಅಪಘಾತ

ನಟ ಚೇತನ್ ಅಹಿಂಸಾ ಬಿಡುಗಡೆ: ಅಭಿಮಾನಿಗಳಿಂದ ಸಂಭ್ರಮಾಚರಣೆ

 

ಇತ್ತೀಚಿನ ಸುದ್ದಿ