ಯಡಿಯೂರಪ್ಪ, ಸಿಎಂ ಬೊಮ್ಮಾಯಿ ನಾರಾಯಣಗುರು ಜಯಂತಿಯಲ್ಲಿ ಭಾಗವಹಿಸಿಲ್ಲ: ಮಾಜಿ ಸಚಿವ ರಮಾನಾಥ ರೈ ಆಕ್ರೋಶ
	
	
	
	
	
ಬ್ರಹ್ಮಶ್ರೀ ನಾರಾಯಣಗುರು ಜಯಂತಿ ಆಚರಿಸಿದ ಸರ್ಕಾರ ಸರಣಿ ಅಪಮಾನ ಮಾಡಿದೆ ಎಂದು ಮಂಗಳೂರಿನಲ್ಲಿ ಮಾಜಿ ಸಚಿವ ರಮಾನಾಥ ರೈ ಆರೋಪಿಸಿದ್ದಾರೆ.
ಮಂಗಳೂರು ನಗರದ ಮಲ್ಲಿಕಟ್ಟೆಯಲ್ಲಿರೋ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರು ಜ್ಞಾನ ಮಂದಿರವನ್ನು ಬಂಟ್ವಾಳದಲ್ಲಿ ಮಾಡಿದ್ದೇವು. ಆಗ ಸಿಎಂ ಆಗಿದ್ದ ಸಿದ್ಧರಾಮಯ್ಯ,ನಾರಾಯಣ ಗುರು ಜಯಂತಿಯನ್ನು ಸರ್ಕಾರಿ ಹಬ್ಬವಾಗಿ ಆಚರಿಸಿದ್ದರು. ದಾರ್ಶನಿಕರ ಜನ್ಮ ದಿನವನ್ನು ವಿಧಾನಸೌಧದ ಬಾಕ್ವೆಂಟ್ ಹಾಲ್ ನಲ್ಲಿ ಮಾಡಬೇಕಿತ್ತು. ಸಿದ್ಧರಾಮಯ್ಯ ಕೂಡಾ ಬಾಕ್ವೆಂಟ್ ಹಾಲ್ ನಲ್ಲಿ ನಾರಾಯಣ ಗುರು ಜನ್ಮ ದಿನವನ್ನು ಮಾಡಿದ್ದರು. ಎಲ್ಲಾ ಅಧಿಕಾರಿಗಳು, ಜನಪ್ರತಿನಿಧಿಗಳ ನಡುವೆ ಕಾರ್ಯಕ್ರಮ ವಾಗಿತ್ತು. ಆದರೆ ಬಿಜೆಪಿ ಸರ್ಕಾರ ನಾರಾಯಣ ಗುರು ಜಯಂತಿಯನ್ನು ಜಿಲ್ಲಾ ಮಟ್ಟಕ್ಕೆ ಸೀಮಿತ ಮಾಡಿದೆ. ಗೋಕರ್ಣನಾಥ ಕ್ಷೇತ್ರದಲ್ಲಿ ಸಭಾ ಕಾರ್ಯಕ್ರಮ ಮಾಡಬಹುದಿತ್ತು.
ಆದರೆ ಹೊರಗಡೆ ಖಾಸಗಿ ಹಾಲ್ ನಲ್ಲಿ ಮಾಡಲಾಗಿದೆ. ಈ ಮೂಲಕ ಬಿಜೆಪಿ ನಾರಾಯಣ ಗುರುಗಳಿಗೆ ಸರಣಿ ಅಪಮಾನ ಮಾಡಿದೆ.
ಗಣರಾಜ್ಯೋತ್ಸವ ಪರೇಡ್ ನಲ್ಲಿ ಟ್ಯಾಬ್ಲೋ ನಿರಾಕರಣೆ, ಹತ್ತನೇ ತರಗತಿ ಪಠ್ಯದಲ್ಲಿ ಹೆಸರು ಕೈ ಬಿಟ್ಟಿರೋದು, ನಾರಾಯಣ ಗುರು ಕಾರ್ಯಕ್ರಮದಲ್ಲಿ ಜಿಲ್ಲೆಗೆ ಸೀಮಿತವಾಗಿ ಮಾಡಲಾಗಿದೆ. ಜನಸ್ಪಂದನೆ ಕಾರ್ಯಕ್ರಮದಲ್ಲಿ ನಾರಾಯಣ ಗುರುಗಳ ಹೆಸರನ್ನೂ ಬಿಜೆಪಿ ಮುಖಂಡರು ಹೇಳಿಲ್ಲ. ಕೆಲವು ಜನ ಅಪಮಾನವನ್ನು ಸಮರ್ಥನೆ ಮಾಡಿದ್ದಾರೆ. ನಾರಾಯಣ ಗುರುಗಳಿಗೆ ಅಪಮಾನ ಮಾಡಿರೋದನ್ನು ಖಂಡಿಸುತ್ತೇನೆ ಎಂದರು.
ಕರಾವಳಿ ಭಾಗದಲ್ಲಿ ನಾರಾಯಣ ಗುರುಗಳಿಗೆ ಅಪಾರ ಬೆಂಬಲಿಗರಿದ್ದಾರೆ. ಸಿಎಂ ಬೊಮ್ಮಾಯಿ ಒಮ್ಮೆಯೂ ನಾರಾಯಣ ಗುರು ಜಯಂತಿಯಲ್ಲಿ ಭಾಗವಹಿಸಿಲ್ಲ. ಯಡಿಯೂರಪ್ಪ ಕೂಡಾ ನಾರಾಯಣ ಗುರು ಜನ್ಮ ದಿನ ಕಾರ್ಯಕ್ರಮ ದಲ್ಲಿ ಭಾಗವಹಿಸಿಲ್ಲ. ಇದರ ಅರ್ಥ ಏನು ಅಂತಾ ಜನರ ಮುಂದೆ ಹೇಳಬೇಕಾಗಿದೆ ಎಂದರು.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka




























