ಸೆಪ್ಟೆಂಬರ್ 10ರಂದು ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ‘ಗುರು ಸಂದೇಶ ಯಾತ್ರೆ’: ವಿಶ್ವಾಸ್ ಕುಮಾರ್ ದಾಸ್ - Mahanayaka
2:54 PM Friday 12 - September 2025

ಸೆಪ್ಟೆಂಬರ್ 10ರಂದು ನಾರಾಯಣ ಗುರುಗಳ ಜಯಂತಿ ಪ್ರಯುಕ್ತ ‘ಗುರು ಸಂದೇಶ ಯಾತ್ರೆ’: ವಿಶ್ವಾಸ್ ಕುಮಾರ್ ದಾಸ್

congress
07/09/2022

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಹಿಂದುಳಿದ ವರ್ಗಗಳ ವಿಭಾಗದ ನೇತೃತ್ವದಲ್ಲಿ ಸೆಪ್ಟೆಂಬರ್ 10ರ ಶನಿವಾರ ಬೆಳಿಗ್ಗೆ  9:30ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳ 168ನೇ ಜಯಂತಿ ಉತ್ಸವ ಪ್ರಯುಕ್ತ ಗುರು ಸಂದೇಶ ಯಾತ್ರೆ ನಡೆಯಲಿದೆ ಎಂದು ಜಿಲ್ಲಾ ಹಿಂದುಳಿದ ವರ್ಗಗಳ ವಿಭಾಗದ ಅಧ್ಯಕ್ಷ ವಿಶ್ವಾಸ್ ಕುಮಾರ್ ದಾಸ್ ಹೇಳಿದರು.


Provided by

ಈ ಕುರಿತು ಮಂಗಳೂರಿನ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,  ಈ ಯಾತ್ರೆಯ ಮಂಗಳೂರು ಸೆಂಟ್ರಲ್ ರೈಲ್ವೆ ನಿಲ್ದಾಣದಿಂದ ಹೊರಟು , ಕೆ.ಎಸ್.ರಾವ್ ರಸ್ತೆ, ಗೋವಿಂದ ಪೈ ಸರ್ಕಲ್, ಡೊಂಗರಕೇರಿ, ನ್ಯೂಚಿತ್ರ, ಅಳಜೆ ಮೂಲಕ ಹಾದು ಹೋಗಿ ಕುದ್ರೋಳಿ ಶ್ರೀ ಗೋಕರ್ಣನಾಥೇಶ್ವರ ಕ್ಷೇತ್ರದಲ್ಲಿ ನಾರಾಯಣ ಗುರು ಸ್ವಾಮಿಯವರಿಗೆ ಪೂಜೆ ಸಲ್ಲಿಸುವುದರೊಂದಿಗೆ ಸಮಾಪನಗೊಳ್ಳಲಿದೆ ಎಂದು ತಿಳಿಸಿದರು.

ಯಾತ್ರೆಯುದ್ದಕ್ಕೂ ನಾರಾಯಣ ಗುರುಗಳು ನೀಡಿರುವ ಒಂದೇ ಒಂದು ಸಂಕಲ್ಪದ ಸಂದೇಶವನ್ನು ಮತ್ತು ಅವರ ತತ್ವಗಳನ್ನು ಜನಜಾಗೃತಿಗೊಳಿಸಲಿದ್ದೇವೆ ಎಂದು ಹೇಳಿದರು. ಸುದ್ಧಿಗೋಷ್ಠಿಯಲ್ಲಿ ಕಾಂಗ್ರೆಸ್ ಮುಖಂಡರು ಉಪಸ್ಥಿತರಿದ್ದರು.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Ginhq56yzxz2MmHFl94DFN

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇತ್ತೀಚಿನ ಸುದ್ದಿ