ನಟ ಸಂಚಾರಿ ವಿಜಯ್ ಅವರ ಜೀವಕ್ಕೆ ಯಾವುದೇ ಅಪಾಯ ಇಲ್ಲ: ನಟ ನೀನಾಸಂ ಸತೀಶ್ ಮಾಹಿತಿ - Mahanayaka

ನಟ ಸಂಚಾರಿ ವಿಜಯ್ ಅವರ ಜೀವಕ್ಕೆ ಯಾವುದೇ ಅಪಾಯ ಇಲ್ಲ: ನಟ ನೀನಾಸಂ ಸತೀಶ್ ಮಾಹಿತಿ

sanchari vijay
13/06/2021


Provided by

ಬೆಂಗಳೂರು: ನಟ ಸಂಚಾರಿ ವಿಜಯ್ ಅವರ ಜೀವಕ್ಕೆ ಯಾವುದೇ ಅಪಾಯವಿಲ್ಲ. ಅವರ ಪಲ್ಸ್ ರೇಟ್, ಬಿಪಿ ಎಲ್ಲ ನಾರ್ಮಲ್ ಆಗಿದೆ ಎಂದು ನಟ ನೀನಾಸಂ ಸತೀಶ್ ಹೇಳಿದ್ದು, ಆಸ್ಪತ್ರೆಗೆ ಭೇಟಿ ನೀಡಿದ ಬಳಿಕ ಅವರು ಈ ಹೇಳಿಕೆ ನೀಡಿದ್ದಾರೆ.

ಸಂಚಾರಿ ಅವರ ಜೀವಕ್ಕೆ ಅಪಾಯ ಇದೆ ಎಂದೆಲ್ಲ ಹೇಳುತ್ತಿದ್ದಾರೆ. ಆದರೆ ಅದೆಲ್ಲ ಸುಳ್ಳು, ಅವರು ಆರಾಮಾಗಿದ್ದಾರೆ. ನಾನೇ ಖುದ್ದಾಗಿ ಐಸಿಯುಗೆ ಹೋಗಿ ನೋಡಿಕೊಂಡು ಬಂದೆ.  ಅವರು ಬೇಗ ರಿಕವರಿ ಆಗಲಿ ಎಂದು ಎಲ್ಲರೂ ಬೇಡಿಕೊಳ್ಳೋಣ ಎಂದು ಅವರು ಈ ಸಂದರ್ಭದಲ್ಲಿ ಮನವಿ ಮಾಡಿದರು.

ಇನ್ನೂ ಅವರಿಗೆ ಆಪರೇಷನ್ ಆಗಿದೆ. 48 ಗಂಟೆಗಳೊಳಗೆ  ಅವರು ಹುಷಾರಾಗ್ತಾರೆ ಎಂದು ವೈದ್ಯರು ಹೇಳಿದ್ದಾರೆ. ಕಳೆದ ಒಂದು ವಾರ ನನ್ನ ಜೊತೆಗೆ ಅವರು ಇದ್ದರು. ಕೊವಿಡ್ ನಿಂದ ತೊಂದರೆಗೊಳಗಾದ ಜನರಿಗೆ ಅವರು ಸಹಾಯ ಮಾಡುತ್ತಿದ್ದರು ಎಂದು ಸತೀಶ್ ತಿಳಿಸಿದರು.

ಇತ್ತೀಚಿನ ಸುದ್ದಿ