ನಟಿ ಕಂಗನಾ ಟ್ವೀಟ್ ಗಳನ್ನು ಅಳಿಸಿ ಹಾಕಿದ ಟ್ವಿಟ್ಟರ್!
04/02/2021
ನವದೆಹಲಿ: ದ್ವೇಷಪೂರಿತ ಹೇಳಿಕೆ ದಾಖಲಿಸಿದ್ದರ ಹಿನ್ನೆಲೆಯಲ್ಲಿ ಬಾಲಿವುಡ್ ನಟಿ ಕಂಗನಾ ಅವರ ಟ್ವೀಟ್ ನ್ನು ಟ್ವಿಟ್ಟರ್ ಅಳಿಸಿ ಹಾಕಿದೆ. ಟ್ಟಿಟ್ಟರ್ ನಲ್ಲಿ ಅವಾಚ್ಯ ಶಬ್ದಗಳನ್ನು ಬಳಸಿರುವ ಹಿನ್ನೆಲಯಲ್ಲಿ ಅವರ ಟ್ವೀಟ್ ನ್ನು ಅಳಿಸಿ ಹಾಕಲಾಗಿದೆ ಎಂದು ತಿಳಿದು ಬಂದಿದೆ.
ಕ್ರಿಕೆಟಿಗ ರೋಹಿತ್ ಶರ್ಮಾ ಹಾಗೂ ಅಂತಾರಾಷ್ಟ್ರೀಯ ಗಾಯಕಿ ರಿಹಾನ್ನಾ ಮಾಡಿದ ಟ್ವೀಟ್ ಗೆ ಅವಾಚ್ಯ ಶಬ್ದಗಳಿಂದ ಪ್ರತಿಕ್ರಿಯಿಸಿದ್ದ ಕಂಗನಾ ಅವರ ಟ್ವೀಟ್ ನ್ನು ಡಿಲೀಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ.
ರೈತರ ಪರವಾಗಿ ನಿಂತ ಸೆಲೆಬ್ರೆಟಿಗಳ ವಿರುದ್ಧ ಕಂಗನಾ ಕೇಂದ್ರ ಸರ್ಕಾರವನ್ನು ಬೆಂಬಲಿಸಿ ಅವಾಚ್ಯ ಶಬ್ಧಗಳನ್ನು ಬಳಸಿ ಪ್ರತಿಕ್ರಿಯಿಸಿದ್ದಾರೆ. ರೋಹಿತ್ ಶರ್ಮಾ ಅವರ ಟ್ವೀಟ್ ಗೆ, ಭಾರತೀಯ ಕ್ರಿಕೆಟಿಗರು ದೋಭಿ ಘಾತ್ ನ ನಾಯಿಗಳು ಎಂದು ಹೇಳಿದ್ದರು. ರೈತರನ್ನು ಭಯೋತ್ಪಾದಕರು ಎಂದು ಕರೆದಿದ್ದರು.


























