ವಿದ್ಯುತ್ ತಂತಿ ತಗುಲಿ ರಾಷ್ಟ್ರಪಕ್ಷಿ ನವಿಲು ಸಾವು - Mahanayaka
12:11 AM Wednesday 22 - October 2025

ವಿದ್ಯುತ್ ತಂತಿ ತಗುಲಿ ರಾಷ್ಟ್ರಪಕ್ಷಿ ನವಿಲು ಸಾವು

peacock
05/01/2025

ಚಿಕ್ಕಮಗಳೂರು:  ಹಾರುತ್ತಿದ್ದ ವೇಳೆ ವಿದ್ಯುತ್ ತಂತಿ ತಗುಲಿದ ಪರಿಣಾಮ ರಾಷ್ಟ್ರಪಕ್ಷಿ ನವಿಲು ಸಾವನ್ನಪ್ಪಿರುವ ಘಟನೆ ಮೂಡಿಗೆರೆ ತಾಲೂಕಿನ ಬಾಳೂರು ಸಮೀಪದ ಕೆಳಗೂರು ಬಳಿ ನಡೆದಿದೆ.

ಮರದಿಂದ ಹಾರುತ್ತಿದ್ದ ವೇಳೆ ಜೋತು ಬಿದ್ದಿದ್ದ ವಿದ್ಯುತ್ ತಂತಿಗೆ ನವಿಲು ಸ್ಪರ್ಶಿಸಿದೆ. ಪರಿಣಾಮವಾಗಿ  ರಸ್ತೆಗೆ ಬಿದ್ದ ನವಿಲು ಸಾವನ್ನಪ್ಪಿದೆ.

ರಸ್ತೆಯಲ್ಲಿ ಬಿದ್ದಿದ್ದ ನವಿಲಿನ  ಮೃತದೇಹವನ್ನು ಅರಣ್ಯ ಇಲಾಖೆಗೆ ಸ್ಥಳೀಯರು ಒಪ್ಪಿಸಿದ್ದಾರೆ.  ನವಿಲಿನ ಅಂತ್ಯಸಂಸ್ಕಾರವನ್ನು ಸಾರ್ವಜನಿಕರ ಎದುರೇ ಅರಣ್ಯ ಇಲಾಖೆ ಅಧಿಕಾರಿಗಳು ನಡೆಸಲಿದ್ದಾರೆ.


ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 9686399493ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ:

https://chat.whatsapp.com/Ci8F6ckDmAbCBQyqgLqOPx

ಇತ್ತೀಚಿನ ಸುದ್ದಿ