ನ್ಯಾಷನಲ್ ಕಬ್ಬಡಿ ಆಟಗಾರ ಸಾವಿಗೆ ಶರಣು! - Mahanayaka
8:01 AM Saturday 20 - December 2025

ನ್ಯಾಷನಲ್ ಕಬ್ಬಡಿ ಆಟಗಾರ ಸಾವಿಗೆ ಶರಣು!

vinod
06/02/2024

ಚಿಕ್ಕಮಗಳೂರು:  ನ್ಯಾಷನಲ್ ಕಬ್ಬಡಿ ಆಟಗಾರರೊಬ್ಬರು ನೇಣಿಗೆ ಶರಣಾಗಿರುವ ಆಘಾತಕಾರಿ ಘಟನೆ ಚಿಕ್ಕಮಗಳೂರು ತಾಲೂಕಿನ ತೇಗೂರು ಗ್ರಾಮದಲ್ಲಿ ನಡೆದಿದೆ.

ವಿನೋದ್ ರಾಜ್ ಅರಸ್ ಸಾವಿಗೆ ಶರಣಾದವರಾಗಿದ್ದು, ವಿವಾಹವಾಗಿದ್ದ ಪತ್ನಿ ಬಿಟ್ಟು ಹೋದ ಹಿನ್ನೆಲೆಯಲ್ಲಿ ಸಾವಿಗೆ ಶರಣಾಗಿದ್ದಾರೆ ಎಂದು ತಿಳಿದು ಬಂದಿದೆ.

ವಿನೋದ್ ರಾಜ್ ಅರಸ್ ಶುಕ್ರವಾರ ನೇಣಿಗೆ ಶರಣಾಗಿದ್ದು, ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಿನ್ನೆ ರಾತ್ರಿ  ಚಿಕಿತ್ಸೆ ಫಲಕಾರಿಯಾಗದೇ ಅವರು ಮೃತಪಟ್ಟಿದ್ದಾರೆ.

ಎರಡು ವರ್ಷ ಪ್ರೀತಿಸಿ 2023 ಡಿ.10 ರಂದು ವಿನೋದ್‌  ವಿವಾಹವಾಗಿದ್ದರು. ಆದ್ರೆ ಡಿ.31ಕ್ಕೆ ಪತಿ ಬೇಡ ಎಂದು ಪತ್ನಿ ಬಿಟ್ಟು ಹೋಗಿದ್ದಳು. ಡಿ.31 ನಂತರ ಮಹಿಳಾ ಪೊಲೀಸ್ ಠಾಣಾ ಮೆಟ್ಟೀಲೇರಿತ್ತು ಎನ್ನಲಾಗಿದೆ.

ಇತ್ತೀಚಿನ ಸುದ್ದಿ