ನಟಿ ಮತ್ತು ರೂಪದರ್ಶಿ ನಿಗೂಢ ಸ್ಥಿತಿಯಲ್ಲಿ ಸಾವು;  ಪತಿ ಬಂಧನ - Mahanayaka

ನಟಿ ಮತ್ತು ರೂಪದರ್ಶಿ ನಿಗೂಢ ಸ್ಥಿತಿಯಲ್ಲಿ ಸಾವು;  ಪತಿ ಬಂಧನ

shahan
13/05/2022


Provided by

ಕೋಝಿಕ್ಕೋಡ್‌; ಕೋಝಿಕ್ಕೋಡ್‌ನ ಚೇವಾಯೂರ್‌ ನಲ್ಲಿ ನಟಿ ಮತ್ತು ರೂಪದರ್ಶಿ ನಿಗೂಢವಾಗಿ ಸಾವನ್ನಪ್ಪಿದ್ದಾರೆ.  ಮೃತರನ್ನು ಕಾಸರಗೋಡು ಚೆರುವತ್ತೂರಿನ ಶಹಾನಾ (20) ಎಂದು ಗುರುತಿಸಲಾಗಿದೆ.

ಶಹಾನಾ ನಿನ್ನೆ ರಾತ್ರಿ ನಿಗೂಢವಾಗಿ ಇವರು ವಾಸಿಸುತ್ತಿದ್ದ  ಬಾಡಿಗೆ ಮನೆಯ ಕಿಟಕಿಯಲ್ಲಿ  ಸರಳಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹ ಪತ್ತೆಯಾಗಿದೆ.  ನಿನ್ನೆ ರಾತ್ರಿ 1.30ರ ಸುಮಾರಿಗೆ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ಶಹಾನಾ ಸಂಬಂಧಿಕರಿಗೆ ತಿಳಿಯಿತು ಎನ್ನಲಾಗಿದೆ.

ಆಕೆಯ ಪತಿ ಸಜಾದ್ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು ಪ್ರಕರಣ ದಾಖಲಿಸಿದ ಪೋಲಿಸರು ತನಿಖೆ ಆರಂಭಿಸಿದಾರೆ. ಪತಿ ಸಾಜಿದ್ ಪತ್ನಿಗೆ ಕಿರುಕುಳ ನೀಡುತ್ತಿದ್ದು ಮಾತ್ರವಲ್ಲದೇ ಕೊಲೆ ಬೆದರಿಕೆ ಹಾಕಿದ್ದಾನೆ ಎಂದು ಶಹಾನಾ ತಾಯಿ ತಿಳಿಸಿದ್ದಾರೆ.

ಜಾಹೀರಾತುಗಳಲ್ಲಿ ನಟಿಸುವುದರಿಂದ ಬರುವ ಆದಾಯವನ್ನು ಆಕೆಯ ಪತಿಗೆ ನೀಡುವಂತೆ ನಿರಂತರವಾಗಿ ಕಿರುಕುಳ ಕೊಡುತ್ತಿದ್ದು, ತನ್ನ ಮಗಳನ್ನು ಸಜಾದ್ ಕೊಂದಿದ್ದಾನೆ ಎಂದು ಶಹಾನಾ ತಾಯಿ ಉಮೈಬಾ  ಆರೋಪಿಸಿದ್ದಾರೆ .

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಎಸೆಸೆಲ್ಸಿ ಪರೀಕ್ಷೆ ಫಲಿತಾಂಶ ಯಾವಾಗ?:  ದಿನಾಂಕ ಘೋಷಣೆ

ಉತ್ತರ ಪ್ರದೇಶದ ಮದ್ರಸಾಗಳಲ್ಲಿ ರಾಷ್ಟ್ರಗೀತೆ ಕಡ್ಡಾಯ!

ತಂದೆ ಕರೆನ್ಸಿ ಹಾಕಲಿಲ್ಲ ಎಂದು ಖಾಸಗಿ ಭಾಗಕ್ಕೆ ತ್ರಿಶೂಲದಿಂದ ಚುಚ್ಚಿಕೊಂಡ ಯುವಕ!

ಋಷಿ ಕುಮಾರ ಸ್ವಾಮೀಜಿಗೆ ಮಸಿ ಬಳಿದ ಕಿಡಿಗೇಡಿಗಳು!

ಯೋಗ್ಯತೆಗೆ ತಕ್ಕ ಉದ್ಯೋಗ ಸಿಗಲಿಲ್ಲ ಎಂದು ಎಂಬಿಎ ಪದವೀಧರೆ ಆತ್ಮಹತ್ಯೆ

 

 

ಇತ್ತೀಚಿನ ಸುದ್ದಿ