ನಟಿಯ ಮೇಲೆ ಅತ್ಯಾಚಾರ ಆರೋಪ: ನಟ ವಿಜಯ್ ಬಾಬು ಆರೆಸ್ಟ್ - Mahanayaka

ನಟಿಯ ಮೇಲೆ ಅತ್ಯಾಚಾರ ಆರೋಪ: ನಟ ವಿಜಯ್ ಬಾಬು ಆರೆಸ್ಟ್

vijayababu
28/06/2022


Provided by

ಕೊಚ್ಚಿ: ನಟಿಯ ಮೇಲೆ ಅತ್ಯಾಚಾರ  ಪ್ರಕರಣದಲ್ಲಿ ನಟ ವಿಜಯ್ ಬಾಬುನನ್ನು ಆರಸ್ಟ್ ಮಾಡಲಾಗಿದ್ದು, ಎರ್ನಾಕುಲಂ ಸೌತ್ ಪೊಲೀಸರು ಬಂಧಿಸಿದ  ನಂತರ ಪೂರ್ವ ಜಾಮೀನು ಷರತ್ತುಗಳ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.

ಅಗತ್ಯಬಿದ್ದರೆ ತನಿಖಾ ತಂಡಕ್ಕೆ ಅರೆಸ್ಟ್ ಮಾಡಬಹುದು ಎಂದು ನ್ಯಾಯಾಲಯ ತಿಳಿಸಲಾಗಿತ್ತು. ಇದರ ಆಧಾರದ ಮೇಲೆ ಇವತ್ತು ನಟನನ್ನು ಬಂಧಿಸಲಾಗಿದೆ. ಒಂದು ವೇಳೆ ಪೊಲೀಸರು ಅರೆಸ್ಟ್ ಮಾಡಿದರೆ, 5 ಲಕ್ಷ ರೂಪಾಯಿ ಬಾಂಡ್ ಮತ್ತು ಇಬ್ಬರ ಜಾಮೀನಿನ ಮೇಲೆ  ಜಾಮೀನು ನೀಡುವಂತೆಯೂ ನ್ಯಾಯಾಲಯ ಷರತ್ತು  ನೀಡಲಾಗಿತ್ತು.

ಇಂದಿನಿಂದ ಜುಲೈ 3ರವರೆಗೆ ಬೆಳಗ್ಗೆ 9ರಿಂದ ಸಂಜೆ 6ರವರೆಗೆ ತನಿಖಾ ತಂಡದ ಮುಂದೆ ಹಾಜರಾಗುವಂತೆ ನ್ಯಾಯಾಲಯ ಸೂಚಿಸಿದೆ. ಈ ದಿನಗಳಲ್ಲಿ ಪ್ರಕರಣದ ಕುರಿತು ವಿಚಾರಣೆ ಮತ್ತು ಸಾಕ್ಷ್ಯ ಸಂಗ್ರಹಣೆ ನಡೆಯಲಿದೆ.

ಯುವ ನಟಿ ವಿಜಯ್ ಬಾಬು ವಿರುದ್ಧ ಏಪ್ರಿಲ್ 22 ರಂದು ದೂರು ದಾಖಲಾಗಿತ್ತು.  ನಂತರ ದುಬೈನಲ್ಲಿ ತಲೆಮರೆಸಿಕೊಂಡಿದ್ದ ವಿಜಯ್ ಬಾಬು 39 ದಿನಗಳ ನಂತರ ಈ ತಿಂಗಳ 1ರಂದು ವಾಪಸ್ ಬಂದಿದ್ದ.

ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…

ವಾಟ್ಸಾಪ್ ಗ್ರೂಪ್ ಗೆ ಸೇರಿ https://chat.whatsapp.com/FZkISFWKknBDvdYkMVFArW

ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka

ಇನ್ನಷ್ಟು ಸುದ್ದಿಗಳು

ಟ್ರಕ್ ನೊಳಗೆ ಉಸಿರುಗಟ್ಟಿ ಸಾವನ್ನಪ್ಪಿದ 46 ಕಾರ್ಮಿಕರು!

ಕಾಂಗ್ರೆಸ್ ಗೆ ಮತ ನೀಡಿ ನಿಮ್ಮ ಮತ ವ್ಯರ್ಥ ಮಾಡಬೇಡಿ: ಅಸಾದುದ್ದೀನ್ ಓವೈಸಿ

ಅಂಬೇಡ್ಕರ್‌ ಸಮಾಜ ಸೇವಾ ಸಂಘದಿಂದ ಪ್ರತಿಭಾನ್ವಿತ ವಿದ್ಯಾರ್ಥಿನಿಗೆ ಪ್ರೋತ್ಸಾಹ ಧನ

ಮಂಗಳೂರಿನ ಸಮುದ್ರದಲ್ಲಿ ಮುಳುಗಡೆಯಾದ ಚೀನಾದ ಹಡಗು!

 

 

ಇತ್ತೀಚಿನ ಸುದ್ದಿ