ಕೌಂಟರ್: 'ಒಡಿಶಾದ ಜಿಲ್ಲೆಗಳನ್ನು ಹೆಸರಿಸಿ' ಎಂಬ ಪ್ರಧಾನಿಯ ಪ್ರಶ್ನೆಗೆ 3 ನಿಮಿಷಗಳ ಉತ್ತರ ನೀಡಿದ ನವೀನ್ ಪಟ್ನಾಯಕ್ - Mahanayaka

ಕೌಂಟರ್: ‘ಒಡಿಶಾದ ಜಿಲ್ಲೆಗಳನ್ನು ಹೆಸರಿಸಿ’ ಎಂಬ ಪ್ರಧಾನಿಯ ಪ್ರಶ್ನೆಗೆ 3 ನಿಮಿಷಗಳ ಉತ್ತರ ನೀಡಿದ ನವೀನ್ ಪಟ್ನಾಯಕ್

12/05/2024


Provided by

ಒಡಿಶಾದಲ್ಲಿ ಇತ್ತೀಚೆಗೆ ನಡೆದ ಚುನಾವಣಾ ರ್ಯಾಲಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ತನ್ನ ಮೇಲೆ ವಾಗ್ಯುದ್ದ ನಡೆಸಿದ ಬಗ್ಗೆ ಮುಖ್ಯಮಂತ್ರಿ ನವೀನ್ ಪಟ್ನಾಯಕ್ ಭಾನುವಾರ ತಿರುಗೇಟು ನೀಡಿದ್ದಾರೆ.

“ಗೌರವಾನ್ವಿತ ಪ್ರಧಾನ ಮಂತ್ರಿಗಳೇ, ಒಡಿಶಾದ ಬಗ್ಗೆ ನಿಮಗೆ ಎಷ್ಟು ನೆನಪಿದೆ..? ಒಡಿಯಾ ಶಾಸ್ತ್ರೀಯ ಭಾಷೆಯಾಗಿದ್ದರೂ, ನೀವು ಅದರ ಬಗ್ಗೆ ಮರೆತಿದ್ದೀರಿ. ನೀವು ಸಂಸ್ಕೃತಕ್ಕೆ 1,000 ಕೋಟಿ ರೂ.ಗಳನ್ನು ನಿಗದಿಪಡಿಸಿದ್ದೀರಿ. ಆದರೆ ಒಡಿಯಾಗೆ ಶೂನ್ಯ” ಎಂದು ಬಿಜು ಜನತಾ ದಳ (ಬಿಜೆಡಿ) ಮುಖ್ಯಸ್ಥರು ಭಾನುವಾರ ವೀಡಿಯೊ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಪ್ರಧಾನಿ ಒಡಿಸ್ಸಿ ಸಂಗೀತದ ಬಗ್ಗೆಯೂ ಮರೆತಿದ್ದಾರೆ ಎಂದು ಪಟ್ನಾಯಕ್ ಹೇಳಿದರು.

ಶಾಸ್ತ್ರೀಯ ಒಡಿಸ್ಸಿ ಸಂಗೀತದ ಮಾನ್ಯತೆಯ ಬಗ್ಗೆ ನಾನು ಪ್ರಸ್ತಾಪಗಳನ್ನು ಕಳುಹಿಸಿದ್ದೇನೆ. ಆದ್ರೆ ನೀವು ಅವುಗಳನ್ನು ಎರಡು ಬಾರಿ ತಿರಸ್ಕರಿಸಿದ್ದೀರಿ ಎಂದು ನವೀನ್ ಪಟ್ನಾಯಕ್ ತಿರುಗೇಟು ನೀಡಿದ್ದಾರೆ.

 

ಜಾಗತಿಕ ಕನ್ನಡಿಗರ ಅಚ್ಚುಮೆಚ್ಚಿನ ಸುದ್ದಿತಾಣ ಮಹಾನಾಯಕ ಸುದ್ದಿಗಳನ್ನು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ ಕಳುಹಿಸಬೇಕೇ? ಹಾಗಿದ್ದರೆ, ನಿಮ್ಮ ವಾಟ್ಸಾಪ್ ಗ್ರೂಪ್ ಗೆ 8088059494 ನಂಬರ್ ಸೇರಿಸಿ.

ಗ್ರೂಪ್ ಗೆ ಜಾಯಿನ್ ಆಗಿ: https://chat.whatsapp.com/Jpfswu2K6fn62HOHSl5eth

ಇತ್ತೀಚಿನ ಸುದ್ದಿ