ಕಾಂಗ್ರೆಸ್ ಗೆ ಬಹುಮತ: ಸಚಿವ ಶ್ರೀರಾಮುಲುಗೆ ಮುಖ ಭಂಗ

ಚಿತ್ರದುರ್ಗ: ನಾಯಕನಹಟ್ಟಿ ಪಟ್ಟಣ ಪಂಚಾಯಿತಿಗೆ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತ ಪಡೆದು ಅಧಿಕಾರದ ಗದ್ದುಗೆ ಹಿಡಿದಿದ್ದು, ಬಿಜೆಪು ಪಕ್ಷ ಮೂರನೇ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡಿದೆ.
ಕೇವಲ 2 ಕ್ಷೇತ್ರಗಳಲ್ಲಿ ಮಾತ್ರವೇ ಬಿಜೆಪಿ ಗೆಲುವು ಸಾಧಿಸಲು ಸಾಧ್ಯವಾಗಿದ್ದು, ಜಿಲ್ಲಾ ಉಸ್ತುವಾರಿ ಸಚಿವ ಬಿ.ಶ್ರೀರಾಮುಲು ಪ್ರತಿನಿಧಿಸುವ ಮೊಳಕಾಲ್ಮೂರು ಕ್ಷೇತ್ರದಲ್ಲಿರುವ ನಾಯಕನಹಟ್ಟಿ ಪಟ್ಟಣ ಪಂಚಾಯಿತಿಯಲ್ಲಿಯೂ ಬಿಜೆಪಿ ಸೋಲು ಅನುಭವಿಸಿದ್ದು, ಶ್ರೀರಾಮುಲು ಅವರಿಗೆ ಮುಖಭಂಗವಾಗಿದೆ.
ಒಟ್ಟು 16 ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ 11 ಸ್ಥಾನಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಿದ್ದರೆ, ಬಿಜೆಪಿ ಕೇವಲ 2 ಸ್ಥಾನಗಳನ್ನು ಗಳಿಸಿದೆ. ಪಕ್ಷೇತರರು ಬಿಜೆಪಿಗಿಂತಲೂ ಅಧಿಕ ಸ್ಥಾನದಲ್ಲಿ ಗೆಲುವು ಸಾಧಿಸಿದ್ದು, 3 ಸ್ಥಾನಗಳಲ್ಲಿ ಪಕ್ಷೇತರರು ಗೆಲುವು ಸಾಧಿಸಿದ್ದಾರೆ.
ಮಹಾನಾಯಕ ಮಾಧ್ಯಮದ ಸುದ್ದಿಗಳನ್ನು ಪಡೆಯಲು ನಿಮ್ಮ ವಾಟ್ಸಾಪ್ ಗ್ರೂಪ್ ಗಳಿಗೆ 8088059494 ನಂಬರ್ ಸೇರಿಸಿ. ನಿರಂತರ ಸುದ್ದಿಗಳನ್ನು ಪಡೆಯಿರಿ…
ವಾಟ್ಸಾಪ್ ಗ್ರೂಪ್ ಗೆ ಸೇರಿ: https://chat.whatsapp.com/Hh9JYuKnSXBFVRDGeDU97Z
ಡೈಲಿ ಹಂಟ್ ನಲ್ಲಿ ಫಾಲೋ ಮಾಡಿ: https://profile.dailyhunt.in/mahanayaka
ಇನ್ನಷ್ಟು ಸುದ್ದಿಗಳು
ಪೆಟ್ರೋಲ್ ಹಾಕುವ ಯುವಕನಿಗೆ ಪುರಸಭಾ ಚುನಾವಣೆಯಲ್ಲಿ ಭರ್ಜರಿ ಗೆಲುವು
9 ವಾಹನಗಳ ನಡುವೆ ಭೀಕರ ಸರಣಿ ಅಪಘಾತ: ಅಪಘಾತಕ್ಕೆ ಕಾರಣ ಏನು ಗೊತ್ತಾ?
ಗಾಂಧೀಜಿಯ ಅವಹೇಳನ: ಹಿಂದೂ ಸಂತ ಕಾಳಿ ಚರಣ್ ಅರೆಸ್ಟ್
ಮತಾಂತರ ಆರೋಪ: ಶಾಲೆಯ ಮಾನ್ಯತೆ ರದ್ದುಪಡಿಸಲು ಬಿಜೆಪಿ, ಆರೆಸ್ಸೆಸ್ ಪ್ರತಿಭಟನೆ
ಮತಾಂತರ ತಡೆಯಲು ವಿಶೇಷ ಕಾರ್ಯಪಡೆ: ಸಿಎಂ ಬೊಮ್ಮಾಯಿ
‘ಲಸಿಕೆ ಹಾಕಿಸಲ್ಲ’ ಎಂದು ಮರ ಏರಿ ಕುಳಿತ ಯುವಕ: ವಿಡಿಯೋ ವೈರಲ್